ಸಾಲ ಮನ್ನಾ ಹಣ ಕೃಷಿಕರಿಗೆ ಸಿಗದಿದ್ದರೆ ಸಹಕಾರಿ ಸಂಘದ ಎದುರು ಪ್ರತಿಭಟನೆ- ತಾಲೂಕು ರೈತ ಸಂಘ ಎಚ್ಚರಿಕೆ

October 5, 2019
1:53 PM

ಸುಳ್ಯ: ಸರಕಾರ ಮಾಡಿರುವ ಸಾಲ ಮನ್ನಾ ಹಣ ರೈತರ ಖಾತೆಗೆ ಕೂಡಲೇ ಜಮೆ ಆಗದಿದ್ದರೆ ಗ್ರಾಮ ಮಟ್ಟದ ಸಹಕಾರಿ ಸಂಘದ ಕಚೇರಿ ಎದುರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ರೈತ ಸಂಘ ಎಚ್ಚರಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಹಿಂದಿನ ಸರಕಾರ ರೈತರ 1 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಘೋಷಣೆ ಮಾಡಿತ್ತು. ಇದುವರೆಗೆ ತಾಲೂಕಿನ ಹಲವು ಕೃಷಿಕರಿಗೆ ಇದರ ಸದುಪಯೋಗ ದೊರೆತಿಲ್ಲ. ಸರಕಾರ ರೈತರಿಗಾಗಿ ಘೋಷಣೆ ಮಾಡಿದ ಸಾಲಮನ್ನಾ ಯೋಜನೆ ಆಯಾ ವ್ಯಾಪ್ತಿಯ ಸಹಕಾರಿ ಸಂಘಗಳು ರೈತರಿಗೆ ಸಿಗುವಂತೆ ಮಾಡಬೇಕು.

Advertisement
Advertisement
Advertisement
Advertisement

ಸಹಕಾರಿ ಸಂಘಗಳಲ್ಲಿ ವಿಚಾರಿಸಿದರೆ ನಾವು ನಾವು ಡಿಸಿಸಿ ಬ್ಯಾಂಕ್‌ಗೆ ಲಿಸ್ಟ್ ಕಳಿಸಿವೆ ಎಂದು ಹೇಳಿದರೆ, ಡಿಸಿಸಿ ಬ್ಯಾಂಕ್‌ಗೆ ಬಂದು ಕೇಳಿದಾಗ ಸೊಸೈಟಿಯವರು ಅಪ್‌ಲೋಡ್ ಮಾಡಿದರಲ್ಲಿ ವ್ಯತ್ಯಾಸ ಆಗಿದೆ. ಆದ್ದರಿಂದ ಇನ್ನೂ ಬಂದಿಲ್ಲ ಎಂದು ಹೇಳುತ್ತಾರೆ. ಇದರಿಂದ ಕೃಷಿಕರು ಗೊಂದಲಕ್ಕೀಡಾಗಿದ್ದು ಸಮಸ್ಯೆ ಬಗೆಹರಿಸುವಂತೆ ತಹಶೀಲ್ದಾರ್ ಮೂಲಕ ಸಂಬಂಧಿಸಿದವರಿಗೆ ಮನವಿ ನೀಡುತ್ತೇವೆ. ಬಳಿಕವೂ ರೈತರಿಗೆ ಸಾಲಮನ್ನಾ ಹಣ ಬಾರದಿದ್ದರೆ ಗ್ರಾಮದ ಆಯಾ ಸಹಕಾರಿ ಸಂಘದ ಎದುರು ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿದರು.

Advertisement

ಕೊಳೆರೋಗದಲ್ಲಿ ಅರ್ಹ ರೈತರಿಗೆ ಇನ್ನೂ ಪರಿಹಾರ ಸಿಗಲಿಲ್ಲ ಈ ಬಗ್ಗೆಯೂ ತಹಶೀಲ್ದಾರ್‌ ಮೂಲಕ ಮನವಿ ಸಲ್ಲಿಸಲಿದ್ದೇವೆ. ಈ ಬಾರಿ ಕೊಳೆ ರೋಗಕ್ಕೆ ಪಡೆದ ಅರ್ಜಿಗಳು ಕೆಲವು ಗ್ರಾಮ ಕರಣಿಕರ ಕಚೇರಿಯಲ್ಲಿ ಕೊಳೆಯುತ್ತಿದೆ ಎಂದು ಅವರು ಹೇಳಿದರು.

ಸುಳ್ಯ ತಾಲೂಕು ಕಚೇರಿ ಸೇರಿದಂತೆ ಸುಳ್ಯದ ಹಲವು ಇಲಾಖೆಗಳಲ್ಲಿ ಲಂಚವತಾರ ನಡೆಯುತ್ತಿದೆ. ಕೆಲವು ಕಚೇರಿಗಳಲ್ಲಿ ಮೂರು ವರ್ಷಕ್ಕಿಂತಲೂ ಅಧಿಕಾರಿಗಳು ಇಲ್ಲೇ ಇದ್ದಾರೆ. ಲಂಚ ಇಲ್ಲದೆ ಕೆಲಸವೇ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಯಾವುದೇ ಅಧಿಕಾರಿಗಳಿರಲಿ ಒಂದು ತಾಲೂಕಿನಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ಇರಬಾರದು ಅವರನ್ನು ವರ್ಗಾವಣೆ ಮಾಡಬೇಕೆಂದು ನಾವು ಮನವಿ ಮಾಡುತ್ತೇವೆ ಎಂದು ರೈತ ಸಂಘದ ಪದಾಧಿಕಾರಿಗಳು ಹೇಳಿದರು.

Advertisement

ಎಂ.ಪಿ.ಗಳು ರಾಜೀನಾಮೆ ನೀಡಲಿ:
ರಾಜ್ಯದಲ್ಲಿ ಜಲಪ್ರವಾಹದಿಂದ ಹಲವು ಗ್ರಾಮಗಳು ಮುಳಿಗಿದೆ. ಆದರೆ ಇದುವರೆಗೆ ಕೇಂದ್ರ ಸರಕಾರ ಪರಿಹಾರ ನೀಡಲು ವಿಳಂಬ ಮಾಡಿದೆ. ರಾಜ್ಯದಿಂದ ಆಯ್ಕೆಯಾಗಿರುವ ಎಂಪಿಗಳು ಕೇಂದ್ರದಿಂದ ಅನುದಾನ ತರಿಸುವಲ್ಲಿ ವಿಫಲರಾಗಿದ್ದಾರೆ. ಅವರಿಗೆ ಅನುದಾನ ತರಲು ಆಗುವುದಿಲ್ಲವಾದರೆ ರಾಜೀನಾಮೆ ಕೊಟ್ಟು ಬರಲಿ ಎಂದು ಹೇಳಿದರು‌. ಪ್ರವಾಹ ಪೀಡಿತ ಮತ್ತು ಅಕಾಲಿಕ ಮಳೆ ಬರ ನಿರ್ವಹಣೆಗೆ ನೆರವು ನೀಡಲು ನಿರ್ಲಕ್ಷ್ಯಧೋರಣೆ ತಾಳಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಎಚ್ಚರಿಸಲು ಬಂಟ್ವಾಳದಿಂದ ಬೆಂಗಳೂರಿಗೆ ಅ.೧೧ರಂದು ವಾಹನ ಜಾಥಾ ನಡೆಯಲಿದ್ದು ಸುಳ್ಯದಿಂದರೂ ರೈತರು ಭಾಗವಹಿಸಲಿದ್ದಾರೆ ಬೆಂಗಳೂರಿನಲ್ಲಿ ಅ.14 ರಂದು ನಡೆಯುವ ಬಹಿರಂಗ ಅಧಿವೇಶನದಲ್ಲಿ ಹಲವು ಬೇಡಿಕೆಗಳನ್ನು ಇಡಲಿದ್ದು, ಅದರಲ್ಲಿ ಪ್ರಮುಖವಾಗಿ ಅಡಿಕೆ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ನಾವು ಒತ್ತಾಯ ಮಾಡುತ್ತಿರುವುದಾಗಿ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ, ತೀರ್ಥರಾಮ ಉಳುವಾರು, ಮೋಹನ್ ಅಡ್ತಲೆ, ಸತ್ಯಪ್ರಸಾದ್ ಗಬ್ಬಲಡ್ಕ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |
March 3, 2025
11:46 AM
by: ಸಾಯಿಶೇಖರ್ ಕರಿಕಳ
ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ
March 3, 2025
7:42 AM
by: The Rural Mirror ಸುದ್ದಿಜಾಲ
Weather Update | ಕೆಲವು ಕಡೆ ಮಳೆ ಸಾಧ್ಯತೆ | ಕರಾವಳಿ ಜಿಲ್ಲೆಗೆ ಇಂದೂ ಹೀಟ್‌ವೇವ್‌ ಎಚ್ಚರಿಕೆ |
March 3, 2025
7:28 AM
by: The Rural Mirror ಸುದ್ದಿಜಾಲ
ಕುಂಭಮೇಳ | ಆ ಪ್ರಯಾಣದಲ್ಲಿ ಕಂಡದ್ದು ಏನೇನು..? ಅದೊಂದು ಸಿಹಿ ನಮಗೂ ಹೊಸದು…!
March 3, 2025
7:06 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

You cannot copy content of this page - Copyright -The Rural Mirror