ಸಿದ್ಧಾಂತ ವಿರುದ್ಧ ಸ್ಪರ್ಧೆಯಲ್ಲ- ದ್ವಿಮುಖ ನೀತಿ ವಿರುದ್ಧ ಸ್ಫರ್ಧೆ – ವಿಷ್ಣು ಭಟ್ ಮೂಲೆತೋಟ ಸ್ಪಷ್ಟನೆ

November 8, 2019
8:06 PM

ಎಲಿಮಲೆ: ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಅಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ವಿಷ್ಣು ಭಟ್ ಮೂಲೆತೋಟ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅನಿರೀಕ್ಷಿತ ಬೆಳವಣಿಗೆಯಲ್ಲಿ ಒಂದೇ ಸಂಘಟನೆಯಲ್ಲಿ ನಡೆದ  ಈ ಬೆಳವಣಿಗೆ ಬಗ್ಗೆ  ಸುಳ್ಯನ್ಯೂಸ್.ಕಾಂ  ವಿಷ್ಣು ಭಟ್ ಅವರನ್ನು ಮಾತನಾಡಿಸಿದಾಗ, ಪಕ್ಷದ, ಸಂಘಟನೆಯ ಸಿದ್ಧಾಂತದ ವಿರುದ್ಧ ಸ್ಫರ್ಧೆ ಮಾಡಿಲ್ಲ, ದ್ವಿಮುಖ ನೀತಿ ವಿರುದ್ಧ ಸ್ಫರ್ಧೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

Advertisement
Advertisement

ಡಿಸಿಸಿ ಚುನಾವಣೆ ಬಳಿಕ ಅಡ್ಡಮತದಾನ ಪ್ರಕ್ರಿಯೆ ಚರ್ಚೆ ನಡೆಯಿತು. ಸುಳ್ಯ ತಾಲೂಕಿನ 17 ಸಹಕಾರ ಭಾರತಿ ಹಾಗೂ ಬಿಜೆಪಿ ಮತಗಳಲ್ಲಿ  7 ಮತಗಳು ಅಡ್ಡಮತದಾನವಾಗಿತ್ತು.  ಸಂಘಟನೆಯಲ್ಲಿ ಇಂತಹ ಬೆಳವಣಿಗೆ ಸರಿಯಲ್ಲ. ಹೀಗಾಗಿ ಕ್ರಮ ಆಗಬೇಕಾದ್ದೂ ನಿಜವೇ. ಹೀಗಾಗಿ ಸಂಘಟನೆಯ ಪ್ರಮುಖರು ಹೇಳಿದಂತೆ ಕಾನತ್ತೂರು ದೈವಸ್ಥಾನದಲ್ಲಿ ಪ್ರಮಾಣ ಮಾಡಿದ್ದೂ ಆಗಿದೆ. ಅದಾದ ನಂತರ 17 ಮಂದಿಯೂ ರಾಜೀನಾಮೆ ನೀಡಬೇಕು ಎಂದು ಹೇಳಿದಾಗಲೂ ಕ್ರಮಬದ್ಧವಾಗಿಯೇ ರಾಜೀನಾಮೆ ನೀಡಿದ್ದೂ ಆಗಿದೆ. ಆದರೆ ಆ ನಂತರ ಎಲ್ಲಾ 17 ಮಂದಿಗೂ ಈ ನೀತಿ ಅನ್ವಯ ಆಗಲಿಲ್ಲ. ಈ ಬಗ್ಗೆ ಸಂಘಟನೆಯ ಪ್ರಮುಖರಲ್ಲಿ  ಕೇಳಿದಾಗಲೂ ಯಾವುದೇ ಸ್ಪಷ್ಟ ಉತ್ತರವೂ ಬಂದಿರಲಿಲ್ಲ. ಕಳೆದ ಅನೇಕ ವರ್ಷಗಳಿಂದ ಪ್ರಾಮಾಣಿಕವಾಗಿ ಸಂಘಟನೆಗಾಗಿಯೇ ಕೆಲಸ ಮಾಡಲಾಗಿದೆ. ರಾಜೀನಾಮೆ ಬಳಿಕ  ಪ್ರಮುಖರ ಜೊತೆ ಮಾತುಕತೆಯನ್ನೂ ಮಾಡಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಸದ್ಯದದಲ್ಲೇ ಎಲ್ಲರ ವಿರುದ್ಧ ಕ್ರಮ ಎಂದು ಹೇಳಲಾಗಿತ್ತು. ಇಂದಿನವರೆಗೆ ಯಾವುದೇ ಕ್ರಮವಾಗಲಿಲ್ಲ.ಹಾಗಾದರೆ  ರಾಜೀನಾಮೆ ನೀಡಿದ ನಮ್ಮ ಪ್ರಾಮಾಣಿಕತೆಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸುವ ವಿಷ್ಣು ಭಟ್ ನಿನ್ನೆ ಕೂಡಾ ಸಂಘಟನೆಯು ಅಧ್ಯಕ್ಷತೆ ಸ್ಥಾನದ ಬಗ್ಗೆಯೂ ಯಾವುದೇ ಮಾತುಕತೆ ಮಾಡಲಿಲ್ಲ. ಆದರೆ ಸಂಘದ ಯಾವುದೇ ನಿರ್ದೇಶಕರ ಮೇಲೆ ಅಸಮಾಧಾನ , ಬೇಸರವಿಲ್ಲ. ಪ್ರಾಮಾಣಿಕವಾಗಿ ರಾಜೀನಾಮೆ ನೀಡಿದ ಬಳಿಕವೂ ನೂತನ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಕೂಡಾ ಮಾತುಕತೆ ನಡೆಸಿಲ್ಲ ಎಂದರೆ ನಮ್ಮ ಪ್ರಾಮಾಣಿಕತೆಗೆ ಬೆಲೆ ಏನಿದೆ ? ಎಂದು ಪ್ರಶ್ನಿಸುತ್ತಾರೆ ವಿಷ್ಣು ಭಟ್.

ಈ ಸಂದರ್ಭ ಸಹಕಾರಿ ಸಂಘದ ಅನೇಕ ಸದಸ್ಯರು ಹಾಗೂ ಕೆಲವು ನಿರ್ದೇಶಕರು ನಿಮಗೆ ಅನ್ಯಾಯವಾಗಿದೆ ಹೀಗಾಗಿ  ಸ್ಫರ್ಧೆ ಮಾಡಲು ಸೂಚಿಸಿದರು. ಆದ್ದರಿಂದ ಸಂಘಟನೆಯ ದ್ವಿಮುಖ ನೀತಿ ವಿರುದ್ಧ ಸ್ಪರ್ಧೆ ಮಾಡಲಾಗಿದೆ. ಸಂಘಟನೆಯ ವಿರುದ್ಧ ಯಾವತ್ತೂ ಇಲ್ಲ. ಮುಂದೆಯೂ ಯಾರೇ ಏನೇ ಹೇಳಿದರೂ ಸಂಘಟನೆಯ ವಿರುದ್ಧ ಇರುವುದಿಲ್ಲ.  ನ್ಯಾಯದ ಪರ   ಇರುತ್ತೇನೆ ಎನ್ನುವ ವಿಷ್ಣು ಭಟ್, ಸಂಘಟನೆ ಹೇಳಿದಂತೆ ಕ್ರಮಬದ್ಧವಾಗಿ ಅಂದೇ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿತ್ತು ಅದರ ಜೊತೆಗೆ ನೈತಿಕವಾಗಿ  ಸಹಕಾರ ಭಾರತಿಯ ಹುದ್ದೆಗೆ  ರಾಜೀನಾಮೆಯನ್ನು ಅಂದೇ ನೀಡಲಾಗಿದೆ. ಬಿಜೆಪಿ ಸದಸ್ಯನೂ ಅಲ್ಲ ಈಗ ಸಕ್ರಿಯ ಕಾರ್ಯಕರ್ತ ಮಾತ್ರಾ  ಎಂದೂ ಅವರು ಇದೇ ವೇಳೆ ಹೇಳಿದರು.

 

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group