ಸುಳ್ಯ: ಪ್ರತಿಷ್ಠಿತ ಅಂತರಾಷ್ಟ್ರೀಯ ಸ್ಪರ್ಧೆಯಾದ “ಏರ್‍ಬಸ್ ಪ್ಲೈಯುವರ್ ಐಡಿಯಾಸ್ ” ಎಂಬ ಸ್ಪರ್ಧೆಯಲ್ಲಿ ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಹಳೆ ವಿದ್ಯಾರ್ಥಿ ಸುಜಯ್ ನಾರಾಯಣ್ ನೇತೃತ್ವದ “ಜೀರೋ ಹೀರೋಸ್ ” ತಂಡವು ಗೆದ್ದು ರೂ. 20 ಲಕ್ಷ ಬಹುಮಾನವನ್ನು ಗಳಿಸಿದೆ. ಸುಜಯ್ ನಾರಾಯಣ್ ಅವರು ಪ್ರಸ್ತುತ ನೆದರ್ ಲ್ಯಾಂಡಿನ ಡೆಲ್ಟ್ ತಾಂತ್ರಿಕ ಯುನಿವರ್ಸಿಟಿಯಲ್ಲಿ ಪಿ.ಹೆಚ್.ಡಿ. ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಸುಳ್ಯದ ಪೈಚಾರಿನಲ್ಲಿ ವಾಸವಾಗಿರುವ ಡಾ.ಸುಬ್ರಹ್ಮಣ್ಯ ಭಟ್ ಮತ್ತು ಜಯಲಕ್ಷ್ಮಿಯವರ ಪುತ್ರ. ಇವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ| ರೇಣುಕಾಪ್ರಸಾದ್ ಕೆ.ವಿ, ನಿರ್ದೇಶಕಿ ಡಾ| ಜ್ಯೋತಿ ಆರ್. ಪ್ರಸಾದ್, ಕಾಲೇಜಿನ ಪ್ರಾಂಶುಪಾಲರು ಮತ್ತು ಅಧ್ಯಾಪಕ ವೃಂದದವರು ಅಭಿನಂದಿಸಿರುತ್ತಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel