ಸುಬ್ರಹ್ಮಣ್ಯ: ಕರ್ನಾಟಕ ರಾಜ್ಯ ದಲಿತಸಂಘರ್ಷ ಹಾಗೂ ಆದಿ ದ್ರಾವಿಡ ಸಮುದಾಯ ಮತ್ತು ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳಿಂದ ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಪ್ರತಿಭಟನೆ ನಡೆಯಿತು.
ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿನ ಬೇಕರಿಯೊಂದರ ಮುಂದೆ ಲಕ್ಷ್ಮಿ ಎಂಬವರಿಗೆ ಹೂ ಮಾರಲು ದೇವಸ್ಥಾನದಿಂದ ಅಂಗಡಿ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಇದ್ದಕ್ಕಿದ್ದಂತೆ ತೆರವು ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ದಲಿತ ಸಮುದಾಯದ ಕಡೆಗಣನೆ ಹಾಗೂ ದೇವಸ್ಥಾನದ ವತಿಯಿಂದ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಆದಿ ದ್ರಾವಿಡ ಸಮುದಾಯದ ಅಧ್ಯಕ್ಷೆ ಲಕ್ಷ್ಮಿ , ಕರ್ನಾಟಕ ರಾಜ್ಯ ದಲಿತಸಂಘರ್ಷ ಸಂಚಾಲಕ ಆನಂದ ಬೆಳ್ಳಾರೆ ,ಆದಿ ದ್ರಾವಿಡ ಸಮುದಾಯದ ಅಧ್ಯಕ್ಷ ಆರ್. ಬಿ. ಮೋನಪ್ಪ, ಸಂಘಟನಾ ಸಂಚಾಲಕ ಜಗದೀಶ್, ರಾಜ್ಯ ದಲಿತ ಸಂಘರ್ಷ ಸಮಿತಿ ಪುತ್ತೂರು ಸಂಚಾಲಕ ದಿನೇಶ್, ಅರಿಯಡ್ಕ ಗ್ರಾಮ ಸಂಚಾಲಕ ಎಸ್ ನಾರಾಯಣ, ಲೋಕೇಶ್. ಎಸ್, ಪ್ರತೀಕ್ ಮೊದಲಾದವರು ಇದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel