ಸುಬ್ರಹ್ಮಣ್ಯ: ಅನುಗ್ರಹ ಎಜುಕೇಶನ್ ಟ್ರಸ್ಟ್ ಸುಬ್ರಹ್ಮಣ್ಯ,ಕುಕ್ಕೆ ಬ್ಯಾಡ್‍ಮಿಂಟನ್ ಅಕಾಡೆಮಿ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುಲ್ಕುಂದದ ಬ್ಯಾಡ್‍ಮಿಂಟನ್ ಅಕಾಡೆಮಿಯಲ್ಲಿ ದಿವಂಗತ ಕುಮಾರ ನಾಯರ್ ಸ್ಮರಣಾರ್ಥ 14ನೇ ವರ್ಷದ ಹೊನಲು ಬೆಳಕಿನ ಪುರುಷರ ಶಟ್ಲ್ ಡಬಲ್ಸ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು.
ಪಂದ್ಯಾಟವನ್ನು ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್ ಉದ್ಘಾಟಿಸಿದರು.
ಬ್ಯಾಡ್‍ಮಿಂಟನ್ ಕ್ಲಬ್ ಅಧ್ಯಕ್ಷ ಶಿವರಾಮ ಏನೆಕಲ್ ಸಭಾಧ್ಯಕ್ಷತೆ ವಹಿಸಿದ್ದರು. ಕ್ರೀಡಾಂಗಣವನ್ನು ಕುಲ್ಕುಂದ ಬಸವನಮೂಲೆಯ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ ಉದ್ಘಾಟಿಸಿದರು. ಕಲಾವಿದ ಕೆ.ಯಜ್ಞೇಶ್ ಆಚಾರ್, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ನಾಯಕ್, ಎಸ್‍ಎಸ್‍ಪಿಯು ಕಾಲೇಜಿನ ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್, ಜೇಸಿಸ್‍ನ ಪೂರ್ವ ರಾಷ್ಟ್ರೀಯ ನಿರ್ದೇಶಕ ಚಂದ್ರಶೇಖರ ನಾಯರ್,ಉದ್ಯಮಿ ಕಾರ್ತಿಕ್ ಕಾಮತ್, ಸುಬ್ರಹ್ಮಣ್ಯ ಜೇಸಿಸ್ ಅಧ್ಯಕ್ಷ ಶೇಷಕುಮಾರ್ ಶೆಟ್ಟಿ ಮುಖ್ಯಅತಿಥಿಗಳಾಗಿದ್ದರು.
ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಬ್ಯಾಡ್‍ಮಿಂಟನ್ ಆಟಗಾರ್ತಿಯರಾದ ಪೂರ್ಣಿಮಾ ಆಚಾರ್ ಹಾಗೂ ಪ್ರಜ್ವಲಾ ಪರಮಲೆ ಅವರನ್ನು ಗೌರವಿಸಲಾಯಿತು. ಗುತ್ತಿಗೆದಾರ ರವಿ ಕಕ್ಕೆಪದವು ಬಹುಮಾನ ವಿತರಿಸಿದರು.ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಕೆ.ಯು, ಕುಮಾರಸ್ವಾಮಿ ವಿದ್ಯಾಲಯದ ಮುಖ್ಯಗುರು ವಿದ್ಯಾರತ್ನ ಎಚ್ ಮುಖ್ಯಅತಿಥಿಗಳಾಗಿದ್ದರು.
ಫಲಿತಾಂಶದ ವಿವರ:
ಮಹಿಳಾ ವಿಭಾಗದಲ್ಲಿ ಪೂರ್ಣಿಮಾ ಆಚಾರ್ ಮತ್ತು ತಪಸ್ಯಾ ನಾಯಕ್(ಪ್ರಥಮ), ಅಮೃತಾ ಮತ್ತು ಪ್ರಜ್ವಲಾ(ದ್ವಿತೀಯ), ಧನ್ಯಾ ಮತ್ತು ಶೃತಿ(ತೃತೀಯ), ಸಾಜಸ್ ಮತ್ತು ಚೈತನ್ಯಾ(ಚತುರ್ಥ) ಬಹುಮಾನ ಪಡೆದರು.
14ರ ವಯೋಮಾನದ ಪಂದ್ಯಾಟದಲ್ಲಿ ಮಂಜುನಾಥ್ ಮತ್ತು ಲವಿತ್(ಪ್ರ), ಕೌಶಿಕ್ ಮತ್ತು ಹೃದಯ್(ದ್ವಿ) ಬಹುಮಾನ ಪಡೆದರು.
17ರ ವಯೋಮಾನದ ಪಂದ್ಯಾಟದಲ್ಲಿ ಪ್ರಾರ್ಥನ್ ಮತ್ತು ಕಾರ್ತಿಕ್(ಪ್ರ), ನಿಹಾಲ್ ಮತ್ತು ಕೌಶಿಕ್(ದ್ವಿ), ದೇವರಾಜ್ ಮತ್ತು ಹೃದಯ್(ತೃ) ಬಹುಮಾನ ಗಳಿಸಿದರು.
ಹಿರಿಯರ ವಿಭಾಗದಲ್ಲಿ ದಾಮೋದರ್ ಮತ್ತು ಸುಜನ್ ಮಂಗಳೂರು(ಪ್ರ), ಸಚಿನ್ ಮತ್ತು ವರುಣ್ ಯೇನೆಕಲ್(ದ್ವಿ), ಮಹೇಶ್ ಮತ್ತು ವಿಮಲೇಶ್ ಮಂಗಳೂರು(ತೃ), ಮುನಾರ್ ಮತ್ತು ನಸೀರ್(ಚ) ಸ್ಥಾನ ಪಡೆದರು.