ಶಿವಮೊಗ್ಗ: ಮುಂದಿನ ಬಜೆಟ್ ನಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕೃಷಿ ವಲಯದ ಬಲವರ್ಧನೆಗೆ ಹಾಗೂ ನೀರಾವರಿ ಕ್ಷೇತ್ರದ ಬಲವರ್ಧನೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು.
ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ ಆರು ಸಾವಿರ ರೂ.ಗಳ ಜೊತೆಗೆ ರಾಜ್ಯ ಸರಕಾರ ಹೆಚ್ಚುವರಿಯಾಗಿ 4ಸಾವಿರ ರೂ. ಗಳ ಆರ್ಥಿಕ ಸಹಾಯವನ್ನು ಒದಗಿಸುತ್ತಿದೆ. ಇದಕ್ಕಾಗಿ ರಾಜ್ಯ ಸರಕಾರ 2,200 ಕೋಟಿ ರೂ ಅನುದಾನವನ್ನು ನಿಗದಿಪಡಿಸಿದೆ.
ರೈತರಿಗೆ ಉತ್ತೇಜನ ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪ್ರಧಾನಮಂತ್ರಿ ಗ್ರಾಮ ಸಿಂಚಾಯಿ ಯೋಜನೆ, ಪ್ರಧಾನಮಂತ್ರಿ ಕೃಷಿ ಫಸಲ್ ಭಿಮಾ ಯೋಜನೆ, ಮಣ್ಣು ಆರೋಗ್ಯ ಚೀಟಿ ವಿತರಣೆ ಯೋಜನೆ, ಸಂಸದ ಆದರ್ಶ ಗ್ರಾಮ ಯೋಜನೆ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಜಾನುವಾರು ವಿಮಾ ಯೋಜನೆ, ಮೀನುಗಾರಿಕೆ ತರಬೇತಿ ಮತ್ತು ವಿಸ್ತರಣೆ ಯೋಜನೆ, ಸೂಕ್ಷ್ಮ ನೀರಾವರಿ ನಿಧಿ, ಜಲಶಕ್ತಿ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹೇಗೆ ಹಲವು ಯೋಜನೆಗಳನ್ನು ರೈತರ ಅನುಕೂಲಕ್ಕಾಗಿ ಕಾರ್ಯರೂಪಕ್ಕೆ ತರಲಾಗಿದೆ.
ಪ್ರಧಾನಮಂತ್ರಿ ಅವರ ಆಶಯದಂತೆ 2022 ಒಳಗಾಗಿ ರೈತರು ತಮ್ಮ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರಕಾರದ ಯೋಜನೆಗಳ ಸದುಪಯೋಗ ಪಡೆದು ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ಮತ್ತು ಕೃಷಿ ಪೂರಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು. ಪ್ರಸ್ತುತ 50ಸಾವಿರ ಸಾವಯವ ಕೃಷಿಕ ಕುಟುಂಬಗಳು ರಾಜ್ಯದಲ್ಲಿದ್ದು, ಇವರ ಸಂಖ್ಯೆ ಮುಂದಿನ ಒಂದು ವರ್ಷದಲ್ಲಿ 5ಲಕ್ಷ ತಲುಪಬೇಕು.
ಪ್ರತಿ ತಿಂಗಳು ಒಂದು ತಾಲೂಕಿನಲ್ಲಿ ರೈತರನ್ನು ಉತ್ತೇಜಿಸಲು ರೈತ ಸಮಾವೇಶ ಬಜೆಟ್ ಬಳಿಕ ನಡೆಸಲಾಗುವುದು.