ಸುಳ್ಯ-ಗುತ್ತಿಗಾರು ರಸ್ತೆಯಲ್ಲಿ ಅಪಾಯದ ಕೆರೆ ಇದೆ : ಮುಂಜಾಗ್ರತಾ ಕ್ರಮದ ಕಡೆಗೆ ಚಿಂತನೆ ನಡೆಯಬೇಕಿದೆ…

September 8, 2019
10:12 AM

ಇತ್ತೀಚೆಗೆ ಸುಳ್ಯ-ಪುತ್ತೂರು ರಸ್ತೆಯ ಬದಿಯ ಕೆರೆಗೆ ಕಾರೊಂದು ಉರುಳಿ ಬಿದ್ದು 4 ಜನರು ಮೃತರಾದರು. ಈ ದಾರುಣ ಘಟನೆ ಬಳಿಕ ಹಲವು ಕಡೆಗಳಲ್ಲಿ  ಇಂತಹ ಕೆರೆಗಳು ಇರುವುದರ ಬಗ್ಗೆ ಜನಸಾಮಾನ್ಯರು ಹೇಳುತ್ತಾರೆ.ಇಂತಹದ್ದೇ ಒಂದು ಕೆರೆಯ ಬಗ್ಗೆ ಸುಳ್ಯನ್ಯೂಸ್.ಕಾಂ ಗೆ ಫೋಟೋ ಸಹಿತ ಸಾರ್ವಜನಿಕರು ಕಳುಹಿಸಿದ್ದಾರೆ. ಅದರ ಕಡೆಗೆ ಬೆಳಕು ಹರಿಸಲಾಗಿದೆ. ಇದನ್ನು ಆಡಳಿತವು ಗಮನಿಸಿ ತುಸು ಮುಂಜಾಗ್ರತಾ ಕ್ರಮಗಳನ್ನು  ಕೈಗೊಂಡರೆ ದಾರುಣ ಘಟನೆಗಳು ಕಡಿಮೆ ಆದಾವು ಎಂಬ ಆಶಯದೊಂದಿಗೆ..

Advertisement

ಸುಳ್ಯ-ಪುತ್ತೂರು ರಸ್ತೆಯಲ್ಲಿ ಕೆರೆಗೆ ಕಾರು ಬಿದ್ದು 4 ಜನ ಮೃತಪಟ್ಟ ಬಳಿಕ ಇದೀಗ ಸಾರ್ವಜನಿಕರು ಎಚ್ಚರಿಕೆ ವಹಿಸಿ ಅಂತಹ ಘಟನೆಗಳು ಮರುಕಳಿಸಬಾರದು ಎಂದು ಜಾಗೃತೆ ವಹಿಸಿದ್ದಾರೆ. ಮಾಧ್ಯಮಗಳ ಮೂಲಕ ಆಡಳಿತವನ್ನು ಎಚ್ಚರಿಸುವ ಹಾಗೂ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಈಗ ಸುಳ್ಯ-ಗುತ್ತಿಗಾರು ರಸ್ತೆ ನಡುವಿನ ನಾರ್ಣಕಜೆ ಬಳಿಯ ಕೆರೆಯ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಇಲ್ಲಿ ಇನ್ನಷ್ಟು ಮುಂಜಾಗ್ರತೆ ಬೇಕು ಎಂದು ಹೇಳಿದ್ದಾರೆ.

ಸುಳ್ಯ-ಗುತ್ತಿಗಾರು ರಸ್ತೆಯ ನಾರ್ಣಕಜೆ ಎಂಬಲ್ಲಿ ಕೆರೆಯೊಂದು ಇದೆ. ಇದಕ್ಕೆ ಈಗಾಗಲೇ ಲೋಕೋಪಯೋಗಿ ಇಲಾಖೆ ತಡೆಗೋಡೆ ಕಟ್ಟಿದೆ. ಆದರೆ ಅದು ಪೂರ್ತಿಯಾಗಿಲ್ಲ. ಈ ರಸ್ತೆ ಮೂಲಕ ಸ್ಥಳೀಯರು ಮಾತ್ರವಲ್ಲ ದೂರದ ಊರಿನಿಂದ ಅನೇಕರು ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ತೆರಳುತ್ತಾರೆ. ಹೀಗಾಗಿ ಪರವೂರಿನ ಮಂದಿಗೆ ಇಲ್ಲಿ ಕೆರೆ ಇರುವುದು  ಅರಿವಿಗೆ ಬರುವುದಿಲ್ಲ. ಗುತ್ತಿಗಾರು ಕಡೆಯಿಂದ ಬರುವ ವೇಳೆ ನಿಯಂತ್ರಣ ತಪ್ಪಿದರೆ ಅಪಾಯವಾಗುವ ಸಾಧ್ಯತೆ ಇದೆ. ಇಲ್ಲಿ ಯಾವುದೇ  ತಡೆಗೋಡೆ ಇಲ್ಲದೇ ಇರುವುದು ಹಾಗೂ ಕಾಡುಪೊದೆಗಳೂ ಇಲ್ಲಿ ತುಂಬಿರುವುದು  ಅಪಾಯಕ್ಕೆ ಕಾರಣವಾಗುತ್ತದೆ. ಈ ಹಿಂದೊಮ್ಮೆ ವಾಹನವೊಂದು ಇಲ್ಲಿ ಬಿದ್ದಿತ್ತು ಎಂದು ಸಾರ್ವಜನಿಕರು ನೆನಪು ಮಾಡುತ್ತಾರೆ. ಈ ಕಾರಣದಿಂದ ಇಲ್ಲಿ  ಪೂರ್ಣ ಪ್ರಮಾಣದಲ್ಲಿ ಇಡೀ ಕೆರೆಗೆ ರಸ್ತೆ ಭಾಗದಿಂದ ತಡೆಗೋಡೆ ಅಗತ್ಯ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಮೂಲಕ ಅಪಾಯ ತಪ್ಪಿಸಬೇಕು ಎಂದು ಆಡಳಿತದ ಗಮನ ಸೆಳೆದಿದ್ದಾರೆ.

Advertisement

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಇಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿವಾದಾಗಲೇ ಅಲ್ಲಿ ಬರ್ಮಾ ಅಡಿಕೆ ವಶಕ್ಕೆ…! | ಕಾರಣ ಏನು..?
July 5, 2025
7:41 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ
July 4, 2025
7:36 AM
by: The Rural Mirror ಸುದ್ದಿಜಾಲ
ಅಮರನಾಥ ಯಾತ್ರೆಗೆ ಚಾಲನೆ | ಮೊದಲ ಗುಂಪಿನ 5,880 ಯಾತ್ರಿಗಳು ಪ್ರಯಾಣ
July 3, 2025
11:46 PM
by: ದ ರೂರಲ್ ಮಿರರ್.ಕಾಂ
ರಾಜ್ಯದ ವಿವಿಧೆಡೆ ಧಾರಾಕಾರ ಮಳೆ | ಉತ್ತರಕನ್ನಡ, ಕೊಡಗಿನಲ್ಲಿ ಸಮಸ್ಯೆ
July 3, 2025
11:38 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group