ಸುಳ್ಯ ತಾಲೂಕಿನ 16 ರಸ್ತೆಗಳು ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಕೆ….

November 23, 2019
9:05 AM

ಸುಳ್ಯ: ಸುಳ್ಯ ತಾಲೂಕಿನ 16 ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisement
Advertisement
Advertisement
Advertisement

ಸುಳ್ಯ ತಾಲೂಕಿನಲ್ಲಿ ಬಹುತೇಕ ರಸ್ತೆಗಳು ಗ್ರಾಮೀಣ ರಸ್ತೆಗಳಾಗಿದ್ದು ಜಿಲ್ಲಾ ಪಂಚಾಯತ್ ಅಧೀನದಲ್ಲಿದೆ. ಈ ರಸ್ತೆಗಳಿಗೆ ಅನುದಾನದ ಕೊರತೆ ಇರುವುದರಿಂದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಆದುದರಿಂದ ಪ್ರಮುಖ 16 ರಸ್ತೆಗಳನ್ನು ಆಯ್ಕೆ ಮಾಡಿ 157.70 ಕಿ.ಮಿ. ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಶಾಸಕ ಎಸ್.ಅಂಗಾರ ಅವರ ನಿರ್ದೇಶನದ ಮೇರೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೇಲ್ದರ್ಜೆಗೇರಿದರೆ ಈ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬರಲಿದೆ.

Advertisement

ಯಾವುದೆಲ್ಲ ರಸ್ತೆಗಳು ಮೇಲ್ದರ್ಜೆಗೆ:

Advertisement

ಸುಳ್ಯ ತಾಲೂಕಿನ ಮಲಯಾಳ-ಹರಿಹರ-ಕೊಲ್ಲಮೊಗ್ರ-ಕಲ್ಮಕ್ಕಾರು ರಸ್ತೆ 18.57 ಕಿ.ಮಿ.), ದೊಡ್ಡತೋಟ-ಕುಕ್ಕುಜಡ್ಕ-ಪಾಜಪಳ್ಳ ರಸ್ತೆ(15.65), ಸೇವಾಜೆ-ಮಡಪ್ಪಾಡಿ-ಕಂದ್ರಪ್ಪಾಡಿ-ಗುತ್ತಿಗಾರು ರಸ್ತೆ(13.30), ದೊಡ್ಡತೋಟ-ಬೊಮ್ಮಾರು-ಮರ್ಕಂಜ ರಸ್ತೆ(12.10), ಆಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ ರಸ್ತೆ(11.90), ನಡುಗಲ್ಲು-ಹರಿಹರ ಪಳ್ಳತ್ತಡ್ಕ-ಬಾಳುಗೋಡು(11.00), ಗುತ್ತಿಗಾರು-ಬಳ್ಳಡ್ಕ-ಪಂಜ(10.20), ಕಾಂತಮಂಗಲ-ಅಜ್ಜಾವರ-ಮಂಡೆಕೋಲು-ಕನ್ಯಾನ(10.00), ಅಡ್ಡಬೈಲು-ಬೀದಿಗುಡ್ಡೆ-ಬೋಗಾಯನಕೆರೆ ರಸ್ತೆ(9.80), ಪುಳಿಕುಕ್ಕು-ಎಡಮಂಗಲ-ಅಲೆಕ್ಕಾಡಿ(8.60), ಅಜ್ಜನಗದ್ದೆ-ಕುಕ್ಕುಜಡ್ಕ-ಪೈಲಾರು-ಜಬಳೆ ರಸ್ತೆ(8.10), ಅರಂತೋಡು-ತೊಡಿಕಾನ-ದೊಡ್ಡಕುಮೇರಿ ರಸ್ತೆ(8.00), ಬೊಬ್ಬೆಕೇರಿ-ಅಯ್ಯನಕಟ್ಟೆ ರಸ್ತೆ(7.00), ಗುತ್ತಿಗಾರು-ಕಮಿಲ-ಬಳ್ಪ ರಸ್ತೆ(5.40), ಅಜ್ಜಾವರ-ನಾರ್ಕೋಡು ರಸ್ತೆ(4.70), ಐವರ್ನಾಡು-ಪಾಲೆಪ್ಪಾಡಿ-ಪಾಂಬಾರು-ಕೊಳ್ತಿಗೆ ರಸ್ತೆಗಳನ್ನು ಮೇಲ್ದರ್ಜೆಗೇರಿಸಬೇಕೆಂಬ ಪ್ರಸ್ತಾವನೆ ಸಲ್ಲಿಸಲಾಗಿದೆ.

ಗ್ರಾಮೀಣ ರಸ್ತೆಗಳ ಸ್ಥಿತಿ ಅಯೋಮಯ:

Advertisement

ಸುಳ್ಯ ತಾಲೂಕಿನಲ್ಲಿ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 1,340 ಕಿ.ಮಿ ಗ್ರಾಮೀಣ ರಸ್ತೆಗಳಿವೆ. 1110 ರಸ್ತೆಗಳಿದ್ದು ಅದರಲ್ಲಿ 16 ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯಿದೆ. 1340 ಕಿಮಿನಲ್ಲಿ 660 ಕಿಮಿ ಡಾಂಬರು ಮತ್ತು 20 ಕಿ.ಮಿ.ಕಾಂಕ್ರೀಟ್ ರಸ್ತೆಗಳಿವೆ. ಉಳಿದವು ಕಚ್ಚಾ ರಸ್ತೆಗಳು. ಡಾಂಬರು ರಸ್ತೆಗಳೆಲ್ಲವೂ 15-20 ವರ್ಷಗಳ ಹಿಂದೆ ಡಾಂಬರು ಕಂಡ ರಸ್ತೆಗಳು. ಆ ಡಾಂಬರುಗಳೆಲ್ಲ ಎದ್ದು ಹೋಗಿದ್ದು ಸಂಚಾರಕ್ಕೆ ದುಸ್ತರವಾಗಿದೆ. ಹೊಸ ರಸ್ತೆಗಳ ನಿರ್ಮಾಣಕ್ಕೆ ಅನುದಾನ ಬರುತ್ತಿಲ್ಲ. ಮಳೆಹಾನಿ ಮತ್ತಿತರ ಯೋಜನೆಯಲ್ಲಿ ಅಲ್ಪ ಸ್ವಲ್ಪ ಅನುದಾನ ಬಂದರೂ ಅದು ನಿರ್ವಹಣೆಗೆ ಸಾಕಾಗುತ್ತಿಲ್ಲ.

ಸುಳ್ಯ-ನಾರ್ಕೋಡು-ಕೋಲ್ಚಾರ್-ಬಂದಡ್ಕ ರಸ್ತೆಗೆ 12.16 ಕೋಟಿ: 

Advertisement

ಸುಳ್ಯ-ನಾರ್ಕೋಡು-ಕೋಲ್ಚಾರ್-ಬಂದಡ್ಕ ಅಂತಾರಾಜ್ಯ ರಸ್ತೆಯ ಅಭಿವೃದ್ಧಿಗೆ ಒಟ್ಟು 12.16 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ತಿಗೊಂಡಿದ್ದು ಮಳೆ ನಿಂತ ಕೂಡಲೇ ಕಾಮಗಾರಿ ಆರಂಭವಾಗಲಿದೆ. ನಾರ್ಕೋಡಿನಿಂದ ಕೇರಳದ ಗಡಿ ಕನ್ನಡಿತೋಡುವರೆಗೆ ಲೋಕೋಪಯೋಗಿ ಇಲಾಖೆಯ ರಸ್ತೆಗೆ ಅನುದಾನ ಬಿಡುಗಡೆಯಾಗಿದ್ದು ಅಭಿವೃದ್ಧಿ ಕಾಣಲಿದೆ. ನಾರ್ಕೋಡಿನಿಂದ ಒಂದೂವರೆ ಕಿ.ಮಿ.ರಸ್ತೆ 75 ಲಕ್ಷ ರೂ ವೆಚ್ಚದಲ್ಲಿ ನವೀಕರಣಗೊಳ್ಳಲಿದೆ. ಬಜೆಟ್ ಅನುದಾನ75 ಲಕ್ಷ ಮೀಸಲಿರಿಸಲಾಗಿದ್ದು 5.5 ಮೀಟರ್ ಅಗಲದಲ್ಲಿ ರಸ್ತೆ ಅಭಿವೃದ್ಧಿಯಾಗಲಿದೆ.1.5 ಕಿ.ಮಿ.ನಿಂದ10.65 ಕಿ.ಮಿ.ವರೆಗೆ ಅಂದರೆ ಕೇರಳ-ಕರ್ನಾಟಕ ಗಡಿ ಕನ್ನಡಿ ತೋಡುವರೆಗೆ 10.50 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ(ಎಸ್‌ಎಚ್‌ಡಿಪಿ)ಅನುದಾನ ಬಿಡುಗಡೆ ಮಾಡಲಾಗಿದೆ. ಸುಳ್ಯ, ಪುತ್ತೂರು, ಬೆಳ್ತಂಡಿ ತಾಲೂಕಿಗೆ ಎಸ್‌ಎಚ್‌ಡಿಪಿ ಯೋಜನೆಯಡಿ ಒಟ್ಟು 47.5 ಕೋಟಿ ಪ್ಯಾಕೇಜ್ ಬಿಡುಗಡೆಯಾಗಿದ್ದು. ಇದರಲ್ಲಿ 10.50 ಕೋಟಿ ಬಂದಡ್ಕ ರಸ್ತೆಗೆ ಮೀಸಲಿರಿಸಲಾಗಿದೆ ಎಂದು ಸುಳ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಣ್ಣೇ ಗೌಡ ಮಾಹಿತಿ ನೀಡಿದ್ದಾರೆ. ಅಲ್ಲದೆ ಬಾರ್ಪಣೆ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ನಬಾರ್ಡ್ ಯೋಜನೆಯಲ್ಲಿ 91 ಲಕ್ಷ ರೂ ಬಿಡುಗಡೆ ಆಗಿ ಟೆಂಡರ್ ನಡೆದಿದೆ. ಅಂದರೆ ನಾರ್ಕೋಡಿನಿಂದ ಕನ್ನಡಿತೋಡುವರೆಗೆ ಒಟ್ಟು 12.16 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ರಸ್ತೆ ಸಂಪೂರ್ಣ ಅಭಿವೃದ್ಧಿ ಕಾಣಲಿದೆ.

 

Advertisement

ಸುಳ್ಯ ತಾಲೂಕಿನ16 ರಸ್ತೆಗಳನ್ನು ಮೇಲ್ದರ್ಜೆಗೇರಿಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತಿದೆ. ಜಿಲ್ಲಾ ಮುಖ್ಯ ರಸ್ತೆಯಾಗಿ ಮೇಲ್ದರ್ಜೆಗೇರಿದರೆ ಈ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರಲಿದೆ – ಎಸ್.ಅಂಗಾರ, ಶಾಸಕರು ಸುಳ್ಯ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ
ಬೆಂಗಳೂರಲ್ಲಿ ದಾಖಲೆ ತಾಪಮಾನ | ಬೇಸಿಗೆಯಲ್ಲಿ ಈ ಬಾರಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ
February 19, 2025
11:16 PM
by: The Rural Mirror ಸುದ್ದಿಜಾಲ
ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ ಕಾಡ್ಗಿಚ್ಚು | 25 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ
February 19, 2025
7:32 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror