ಸುಳ್ಯ ನಗರ ಸ್ವಚ್ಛತೆಯೆಡೆಗೆ ನೂತನ ಸದಸ್ಯರ ಚಿತ್ತ : ಇನ್ನೀಗ #ಸ್ವಚ್ಛಸುಳ್ಯ , ಬನ್ನಿ ನಾವೂ ಕೈಜೋಡಿಸೋಣ….

June 28, 2019
10:00 AM

ಸುಳ್ಯ: ಎಲ್ಲೆಲ್ಲೂ ಕಸ ತುಂಬಿ ನಾರುತ್ತಿರುವ ಸುಳ್ಯ ನಗರದ ಮೂಲೆ ಮೂಲೆಗಳಲ್ಲಿ ಸ್ವಚ್ಛತೆ ಕಾಪಾಡಲು ನಗರ ಪಂಚಾಯತ್ ಸದಸ್ಯರು ಆಸಕ್ತಿ ವಹಿಸುತ್ತಿದ್ದಾರೆ. ನೂತನ ಸದಸ್ಯರು #ಸ್ವಚ್ಛಸುಳ್ಯ ಕನಸು ಸಾಕಾರ ಮಾಡಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಕಾರ್ಯ. ಈಗ ನಾಗರಿಕರ ಸಹಕಾರ ಅಗತ್ಯವಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ವಹಿಸಬೇಕಿದೆ.

Advertisement
Advertisement

10ನೇ ವಾರ್ಡ್ ಸದಸ್ಯ ವಿನಯಕುಮಾರ್ ಕಂದಡ್ಕ ಕುರುಂಜಿಗುಡ್ಡೆಯಲ್ಲಿ ಕಸ ತುಂಬಿರುವ ಪ್ರದೇಶವನ್ನು ಸ್ವಚ್ಛ ಗೊಳಿಸಲು ವಿಶೇಷ ಆಸಕ್ತಿ ವಹಿಸಿ   ಕ್ರಮ ತೆಗೆದುಕೊಂಡಿದ್ದಾರೆ. ಅದಾದ ಬೆನ್ನಲ್ಲೇ ಆದರೆ ಕಸ ಸ್ವಚ್ಛ ಮಾಡಿದ ಸ್ಥಳದಲ್ಲಿ ಮತ್ತೆ ಕಸದ ರಾಶಿ ಹಾಕಿರುವುದು ಕಂಡು ಬರುತ್ತದೆ.  ಸ್ವಚ್ಛ ಗೊಂಡ ಸ್ಥಳದಲ್ಲಿ ಮತ್ತೆ ಕಸ ಹಾಕಿರುವ ಚಿತ್ರಗಳನ್ನು ವಿನಯಕುಮಾರ್ ಕಂದಡ್ಕ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ‘ ಇದು ಎಂತಾ ನಾಗರಿಕತೆ‘ ಎಂದು ಪ್ರಶ್ನಿಸಿ ಅವರು ಈ ಚಿತ್ರಗಳನ್ನು ಹಂಚಿ ಕೊಂಡಿದ್ದಾರೆ.

ಸುಳ್ಯ ಬಸ್ ನಿಲ್ದಾಣದ ಹಿಂಭಾಗದಲ್ಲಿ ಹಲವಾರು ತಿಂಗಳಿನಿಂದ ಕಸ ತುಂಬಿದ ಸ್ಥಳವನ್ನು ಸ್ವಚ್ಛ  ಮಾಡಲು ಬೋರುಗುಡ್ಡೆ ಸದಸ್ಯ ಕೆ.ಎಸ್.ಉಮ್ಮರ್ ಆಸಕ್ತಿ ವಹಿಸಿದ್ದಾರೆ. ಬಸ್ ನಿಲ್ದಾಣದ ಕೆಳ ರಸ್ತೆಯ ಮೂಲಕ ಮುಂದಕ್ಕೆ ಹೋದರೆ ಮೂರು ರಸ್ತೆ ಸೇರುವ ಸ್ಥಳದಲ್ಲಿ ಕಸ ತುಂಬಿ ದುರ್ನಾತ ಬೀರುತ್ತಿತ್ತು. ನಗರ ಪಂಚಾಯತ್ ಆರೋಗ್ಯಾಧಿಕಾರಿ ಮತ್ತು ಇತರ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಯಿಸಿ ತ್ಯಾಜ್ಯ ತೆರವು ಮಾಡಲು ಅವರು ಖಡಕ್ ಸೂಚನೆ ನೀಡಿದ್ದಾರೆ.

ಇದೇ ಮಾದರಿ ನಗರ ಪಂಚಾಯತ್ ಸದಸ್ಯರು ಎಲ್ಲಾ ಸದಸ್ಯರು ಆಸಕ್ತಯಿಂದ ಇದ್ದು ಅವರವರ ವಾರ್ಡ್ ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು ಹಾಗೂ ಜನರೂ ಸಹಕಾರ ನೀಡುವಂತೆ ಮಾಡುವ ಯೋಚನೆಯಲ್ಲಿದ್ದಾರೆ. ಹೀಗಾದರೆ #ಸ್ವಚ್ಛಸುಳ್ಯ ದ ಕನಸು  ಸದ್ಯದಲ್ಲೇ  ಸಾಕಾರವಾಗುವ ದಿನ ದೂರವಿಲ್ಲ.

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋಲಾರದಲ್ಲಿ ರೈತರಿಗೆ ವರದಾನವಾದ ತೋಟಗಾರಿಕಾ ಯೋಜನೆ | ಪಾಲಿ ಹೌಸ್‌ ಮೂಲಕ ವಿವಿಧ ಬೆಳೆ |
July 23, 2025
7:03 AM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಯಲ್ಲಿ ಡಿಜಿಟಲ್ ಲೈಬ್ರರಿ | ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅನುಕೂಲ |
July 23, 2025
6:49 AM
by: The Rural Mirror ಸುದ್ದಿಜಾಲ
ಈ ರಾಶಿಯ ದಂಪತಿಗಳಿಗೆ ಸಂವಹನದ ಕೊರತೆಯಿಂದ ತೊಂದರೆ
July 23, 2025
6:25 AM
by: ದ ರೂರಲ್ ಮಿರರ್.ಕಾಂ
ಜು.30 ರಂದು ನಿಸಾರ್ ಭೂ ವಿಶ್ಲೇಷಣಾ ಉಪಗ್ರಹ ಉಡಾವಣೆ
July 23, 2025
6:13 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group