ಸುಳ್ಯ ನಗರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸಚಿವರಿಗೆ ಮನವಿ

November 4, 2019
7:00 AM

ಸುಳ್ಯ: ಸುಳ್ಯ ನಗರದಲ್ಲಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ತುರ್ತು ಗಮನ ಹರಿಸಬೇಕು ಎಂದು ಆಗ್ರಹಿಸಿ ಸುಳ್ಯ ನಗರ ಬಿಜೆಪಿ ಮತ್ತು ನಗರ ಪಂಚಾಯತ್ ಬಿಜೆಪಿ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಸುಳ್ಯ ನಿರೀಕ್ಷಣಾ ಮಂದಿರದಲ್ಲಿ ಸಚಿವರನ್ನು ಭೇಟಿಯಾದ ಬಿಜೆಪಿ ಪ್ರಮುಖರು ಮನವಿ ಸಲ್ಲಿಸಿದರು.

Advertisement
Advertisement

ಕಸ ವಿಲೇವಾರಿ ಅವ್ಯವಸ್ಥೆ: ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಸ ವಿಲೇವಾರಿಗೆ ಸ್ಥಳ ಗುರುತಿಸಿ, ಕಸ ವಿಲೇವಾರಿ ಮಾಡದ ಕಾರಣ ನಗರದಲ್ಲಿ ತ್ಯಾಜ್ಯ ಸಮಸ್ಯೆ ತೀವ್ರಗೊಂಡಿದೆ. ಈ ಕುರಿತು ತುರ್ತು ಗಮನ ಹರಿಸಬೇಕು.

Advertisement

ಒಳಚರಂಡಿ ಯೋಜನೆ: ಒಳಚರಂಡಿ ಯೋಜನೆ ಅನುಷ್ಠಾನಗೊಂಡು 15 ವರ್ಷ ಕಳೆದರೂ ಅಸಮರ್ಪಕ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದ ಒಳಚರಂಡಿ ಸಂಪರ್ಕ ಸಾಧ್ಯವಾಗಿಲ್ಲ.

ಕುಡಿಯುವ ನೀರಿನ ವ್ಯವಸ್ಥೆ:  30 ವರ್ಷಗಳ ಹಿಂದಿನ ಕುಡಿಯುವ ನೀರಿನ ಘಟಕ ವ್ಯವಸ್ಥೆ ಇದೆ. ಬೇಸಿಗೆಯಲ್ಲಿ ತಾತ್ಕಾಲಿಕ ಒಡ್ಡು ನಿರ್ಮಿಸಿ ನೀರು ಸರಬರಾಜು ಮಾಡಲಾಗುತ್ತದೆ. ಸುಳ್ಯ ನಗರಕ್ಕೆ ‌ಶಾಶ್ವತ ಕುಡಿಯುವ ನೀರಿನ ಯೋಜನೆಗೆ 64 ಕೋಟಿ ರೂ ಪ್ರಸ್ತಾವನೆ ಸಲ್ಲಿಸಿದರೂ ಮಂಜೂರಾತಿ ದೊರೆತಿಲ್ಲ. ಕೂಡಲೇ ಮಂಜೂರಾತಿ ನೀಡಬೇಕು.

Advertisement

ನಮೂನೆ 3ನ್ನು ನೀಡುವಾಗ ಇರುವ ಗೊಂದಲ ಪರಿಹರಿಸಬೇಕು, ಬಿಪಿಎಲ್ ಪಡಿತರ ರದ್ದತಿಯ ದಂಡ ವಸೂಲಾತಿಯನ್ನು ರದ್ದು ಮಾಡಿ ಬಿಪಿಎಲ್ ಕಾರ್ಡ್ ಸ್ವಯಂ ರದ್ದತಿಗೆ ಕಾಲಾವಕಾಶ ನೀಡಬೇಕು, ನಗರ ಪಂಚಾಯತ್ ಚುನಾವಣೆ ನಡೆದು 5 ತಿಂಗಳಾದರೂ ಅಧಿಕಾರ ಹಸ್ತಾಂತರ ಆಗಿಲ್ಲ. ಅಧಿಕಾರ ಹಸ್ತಾಂತರ ಕೂಡಲೇ ಮಾಡಬೇಕು, ಸುಳ್ಯ ತಾಲೂಕಿಗೆ ಅತೀ ಅಗತ್ಯವಾದ 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ಕೂಡಲೇ ಅನುಷ್ಠನ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬಿಜೆಪಿ ನಗರಾಧ್ಯಕ್ಷ ವಿಜಯಕುಮಾರ್ ಕಂದಡ್ಕ, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಪಿ.ಕೆ.ಉಮೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹ ನ.ಸೀತಾರಾಮ, ಹರೀಶ್ ಬೂಡುಪನ್ನೆ, ಸೋಮನಾಥ ಪೂಜಾರಿ, ದಾಮೋದರ ಮಂಚಿ, ನಾರಾಯಣ ಶಾಂತಿನಗರ, ನ.ಪಂ.ಸದಸ್ಯರಾದ ಬಾಲಕೃಷ್ಣ ರೈ, ಸುಧಾಕರ, ಬುದ್ಧ ನಾಯ್ಕ್, ಸರೋಜಿನಿ ಪೆಲ್ತಡ್ಕ, ಕಿಶೋರಿ ಶೇಟ್, ಶಿಲ್ಪಾ ಸುದೇವ್, ಪ್ರವಿತಾ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಈ 6 ಆಹಾರಗಳು ಸೈಲೆಂಟ್ ಕಿಲ್ಲರ್….! | ತಿನ್ನುವಾಗ ರುಚಿಯೆನಿಸುತ್ತದೆ..,ತಿಂದರೆ ಹಾನಿ ಖಂಡಿತ…!
June 17, 2024
3:57 PM
by: The Rural Mirror ಸುದ್ದಿಜಾಲ
ಮಾವಿನ ಹಣ್ಣು ಕೊಳ್ಳುವ ಮುನ್ನ ಎಚ್ಚರ | ಮಾರುಕಟ್ಟೆಯಲ್ಲಿ ವಿಷಕಾರಿ ಮಾವಿನ ಹಣ್ಣಿನ ಮಾರಾಟ | ರಾಸಾಯನಿಕಯುಕ್ತ ಕಲಬೆರಕೆ ಮಾವಿನ ಹಣ್ಣುಗಳ ಖರೀದಿಸದಿರಿ
June 17, 2024
3:05 PM
by: The Rural Mirror ಸುದ್ದಿಜಾಲ
NCERT ಪಠ್ಯದಿಂದ ಬಾಬರಿ, ರಾಮರಥ ಯಾತ್ರೆ ವಿಷಯಗಳು ಹೊರಕ್ಕೆ | ದ್ವೇಷ ಮತ್ತು ಹಿಂಸಾಚಾರ ಶಿಕ್ಷಣದ ವಿಷಯಗಳಲ್ಲ | ಈ ಬಗ್ಗೆ ಮಕ್ಕಳಿಗೆ ಏಕೆ ಕಲಿಸಬೇಕು – NCERT ನಿರ್ದೇಶಕ
June 17, 2024
2:40 PM
by: The Rural Mirror ಸುದ್ದಿಜಾಲ
ವಾಡಿಕೆಯಂತೆ ಸುರಿಯದ ಮುಂಗಾರು ಮಳೆ | ಪ್ರಮುಖ ಜಲಾಶಯಕ್ಕೆ ಅತೀ ಕಡಿಮೆ ಒಳಹರಿವು |
June 17, 2024
2:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror