ಸುಳ್ಯ ನೀರು ಸರಬರಾಜು ವ್ಯವಸ್ಥೆ ಸುಧಾರಣೆ : ಜಾಕ್ ವೆಲ್ ಬದಲಾವಣೆಗೆ 1.75 ಕೋಟಿ ರೂ ಯೋಜನೆ

June 10, 2019
9:47 PM

ಸುಳ್ಯ: ಹಳೆಯ ಜಾಕ್ ವೆಲ್ ಮತ್ತು ಪೈಪ್ ಲೈನ್‍ಗಳಿಂದಾಗಿ ಸುಳ್ಯ ನಗರದ ವಿವಿಧ ವಾರ್ಡ್‍ಗಳಿಗೆ ನೀರು ಸರಬರಾಜಿಗೆ ತೊಂದರೆ ಆಗುತಿದೆ. ಆದುದರಿಂದ ಹಳೆಯ ಜಾಕ್ ವೆಲ್ ಮತ್ತು ಪೈಪ್ ಲೈನ್ ಬದಲಾವಣೆಗೆ 1.75 ಕೋಟಿ ಯೋಜನೆ ರೂಪಿಸಲಾಗಿದೆ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ತಿಳಿಸಿದ್ದಾರೆ. ನಗರೋತ್ಥಾನ ಯೋಜನೆಯಲ್ಲಿ ಬಂದ ಅನುದಾನವನ್ನು ಇದಕ್ಕಾಗಿ ವಿನಿಯೋಗಿಸಲಾಗುವುದು. ಕರ್ನಾಟಕ ಒಳಚರಂಡಿ ಮಂಡಳಿ ಕಾಮಗಾರಿ ನಿರ್ವಹಿಸಲಿದ್ದು ಟೆಂಡರ್ ನಡೆಯಬೇಕಾಗಿದೆ ಎಂದು ತಿಳಿಸಿದರು.

Advertisement
Advertisement

ನಗರ ಪಂಚಾಯತ್ ನ ಬೋರುಗುಡ್ಡೆ ವಾರ್ಡ್‍ನಲ್ಲಿ ಕಳೆದ ಎರಡು ವಾರಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ ಎಂದು ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್ ನಗರ ಪಂಚಾಯತ್‍ಗೆ ಆಗಮಿಸಿ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ತೀವ್ರ ತರಾಟೆಗೆತ್ತಿಕೊಂಡ ಘಟನೆಯ ಹಿನ್ನಲೆಯಲ್ಲಿ ಮುಖ್ಯಾಧಿಕಾರಿ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿವರ ನೀಡಿದರು.

ಶುದ್ದೀಕರಣ ಘಟಕಕ್ಕೆ 1.25 ಕೋಟಿ
ನಗರ ಪಂಚಾಯತ್ ನ  ಕುಡಿಯುವ ನೀರು ಸರಬರಾಜು ಮಾಡುವ ಶುದ್ದೀಕರಣ ಘಟಕ ಹಳೆಯದಾಗಿದೆ. ಇದರ ನವೀಕರಣಕ್ಕೆ 1.25 ಕೋಟಿಯ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದರು. ಈಗ 50 ಹೆಚ್.ಪಿ.ಯ ಎರಡು ಪಂಪ್‍ಗಳಲ್ಲಿ ನೀರು ಪಂಪಿಂಗ್ ಮಾಡಿದರೆ ಸಮರ್ಪಕವಾಗಿ ನೀರು ಶುದ್ದೀಕರಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಶುದ್ಧೀಕರಣ ಘಟಕದ ನವೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಪ್ರಸ್ತಾವನೆ ತಯಾರಿಸಿ ಅನುಮೋದನೆಗಾಗಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಪತ್ರಕರ್ತರಿಗೆ ಮಾಹಿತಿ ನೀಡಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತಾಳೆ ಬೆಳೆ ಕೃಷಿ | ಅಡಿಕೆಯ ಪರ್ಯಾಯ ಬೆಳೆಯ ಬಗ್ಗೆ ಮಾಹಿತಿ
July 12, 2025
11:32 AM
by: The Rural Mirror ಸುದ್ದಿಜಾಲ
ಶಕ್ತಿ ವಸತಿ ಶಾಲೆಯಲ್ಲಿ ಗುರು ಪೂರ್ಣಿಮೆ | ದೇವರು ಹಾಗೂ ಗುರು ಇಬ್ಬರೂ ಪೂಜೆಗೆ ಯೋಗ್ಯ
July 10, 2025
8:04 PM
by: The Rural Mirror ಸುದ್ದಿಜಾಲ
33 ಕೆವಿ ವಿದ್ಯುತ್‌ ಉಪಕೇಂದ್ರ | ತ್ವರಿತ ಕಾಮಗಾರಿಗೆ ಭಾಕಿಸಂ ಒತ್ತಾಯ
July 1, 2025
11:37 AM
by: The Rural Mirror ಸುದ್ದಿಜಾಲ
ಕೆಂಪು ಕಲ್ಲು ಅಲಭ್ಯತೆ | ಕೆಲಸ ಕಳಕೊಂಡಿರುವ ಕಟ್ಟಡ ಕಾರ್ಮಿಕರು | ನೆರವಿಗೆ ಧಾವಿಸಬೇಕೆಂದು ಕಾರ್ಮಿಕ ಸಚಿವರಿಗೆ ಮನವಿ
June 29, 2025
11:14 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group