ಸುಳ್ಯ: ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಾಪಕರ ಒಕ್ಕೂಟದ ಮಹಾಸಭೆ ,ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯು ಬೆಳ್ಳಾರೆ ಹಿದಾಯತುಲ್ ಮದರಸದಲ್ಲಿ ನಡೆಯಿತು.
ಸಮಸ್ತದ ಮದರಸ ತಪಾಸಣಾಧಿಕಾರಿ ಖಾಸಿಂ ಮುಸ್ಲಿಯಾರ್ ಸಭೆಯ ಅಧ್ಯಕ್ಷ ತೆ ವಹಿಸಿದ್ದರು. ಉಮರ್ ಫೈಝಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ದರು.ಕಾರ್ಯ ದರ್ಶಿ ವಾರ್ಷಿಕ ವರದಿ ವಾಚಿಸಿದರು.ಮುದರ್ರಿಬ್ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಜನರಲ್ ಟಾಕ್ ನಡೆಸಿದರು .
ರೇಂಜ್ ವತಿಯಿಂದ ಹಜ್ ಯಾತ್ರೆಗೆ ತೆರಳುವ ಇಸ್ಹಾಖ್ ಬಾಖವಿ , ಅಶ್ರಫ್ ಫೈಝಿ ,ಝಕರಿಯಾ ದಾರಿಮಿಯವರನ್ನು ಬೀಳ್ಕೊಡುವ ಕಾರ್ಯ ಕ್ರಮ ನಡೆಯಿತು.
2019-20 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಲ್ಲಿ ಉಮರ್ ಫೈಝಿ ಅಜ್ಜಾವರ ಅಧ್ಯಕ್ಷ ರಾಗಿ ಆಯ್ಕೆ ಗೊಂಡರು. ಉಪಾಧ್ಯಕ್ಷ ಕರಾಗಿ ಹಾಜಿ ಹನೀಫ್ ಮುಸ್ಲಿಯಾರ್ ಮಾಡಾವು ಹಾಗೂ ಶಮೀಂ ಅರ್ಶದಿ ಮಂಡೆಕೋಲು ,
ಪ್ರಧಾನ ಕಾರ್ಯದರ್ಶಿ ಯಾಗಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ,ಜೊತೆ ಕಾರ್ಯ ದರ್ಶಗಳಾಗಿ ಡಿ ಕೆ ಝಕರಿಯಾ ಮುಸ್ಲಿಯಾರ್ , ಕೆ ಐ ಇಸ್ಮಾಯಿಲ್ ಮೌಲವಿ , ಕೋಶಾಧಿಕಾರಿ ಯಾಗಿ ಹಸೈನಾರ್ ಧರ್ಮ ತ್ತಣ್ಣಿ ,ಐಟಿ ಕೋಡಿನೇಟರಾಗಿ ಝಕರಿಯಾ ಮುಸ್ಲಿಯಾರ್ ಡಿ ಕೆ , ಪರೀಕ್ಷಾ ಬೋರ್ಡ್ ಚೇರ್ಮನ್ ಆಗಿ ಖಾಲಿದ್ ಅಕ್ರಂ ಮೌಲವಿ , ಝಕರಿಯಾ ದಾರಿಮಿ ಗೂನಡ್ಕ , ಎಸ್ ಕೆ ಎಸ್ ಬಿ ವಿ ಚೇರ್ಮನ್ ಅಶ್ರಫ್ ಫೈಝಿ ಪೇರಡ್ಕ , ವೈಸ್ ಚೇರ್ಮನ್ ನವಾಝ್ ದಾರಿಮಿ , ಕನ್ವೀನರ್ ಆಗಿ ಯಾಸಿರ್ ಅರಫಾತ್ ಕೌಸರಿ , ವೈಸ್ ಕನ್ವೀನರಾಗಿ ನೌಷಾದ್ ಯಮಾನಿ ಹಾಗೂ ಕಾರ್ಯಾಕಾರಿ ಸದಸ್ಯ ರನ್ನು ಒಳಗೊಂಡ ಸಮಿತಿ ರಚನೆಗೊಂಡಿತು.
ಸಭೆಯಲ್ಲಿ ಸುಳ್ಯ ರೇಂಜ್ ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಕಲ್ಲುಗುಂಡಿ , ಕಾರ್ಯ ದರ್ಶಿ ಹಮೀದ್ ಹಾಜಿ ಸುಳ್ಯ , ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಉಪಾಧ್ಯಕ್ಷ ಯು ಹೆಚ್ ಅಬೂಬಕ್ಕರ್ , ಕತ್ತಾರ್ ಇಬ್ರಾಹೀಂ ಹಾಜಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಹಸೈನಾರ್ ಮುಸ್ಲಿಯಾರ್ ಖಿರಾಅತ್ ಪಠಿಸಿದರು .ಕಾರ್ಯ ದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಸ್ವಾಗತಿಸಿ ವಂದಿಸಿದರು.