ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮಳೆಹಾನಿಗೆ ತುರ್ತು ಪರಿಹಾರಕ್ಕೆ ಕ್ರಮ – ಶಾಸಕ ಅಂಗಾರ

August 15, 2019
12:16 PM

ಸುಬ್ರಹ್ಮಣ್ಯ: ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ 69 ಮನೆಗಳು ಭಾಗಶಃ ಹಾನಿಯಾಗಿದೆ. ಕ್ಷೇತ್ರದ ಅನೇಕ ರಸ್ತೆಗಳು ಹಾನಿಗೊಳಗಾಗಿದೆ ಲೋಕೋಪಯೋಗಿ ಇಲಾಖೆಯ 13ಕೋ ರೂ ನಷ್ಟವಾದರೆ, 12 ಕೋಟಿಯಷ್ಟು ಜಿ.ಪಂ.ರಸ್ತೆ ನಾಶವಾಗಿದೆ. ಸರಕಾರಿ ಶಾಲೆ, ಸರಕಾರಿ ಕಟ್ಟಡಗಳು, ಸೇರಿ 6ಕೋ ರೂ ನಷ್ಟವಾಗಿದೆ  ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು  ಎಂದು ಶಾಸಕ ಎಸ್ ಅಂಗಾರ ಹೇಳಿದ್ದಾರೆ.

Advertisement

ಸುಬ್ರಹ್ಮಣ್ಯದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೆರೆ ಸಂತ್ರಸ್ಥ ಸ್ಥಳಗಳಿಗೆ ಕಳೆದ ಆರು ದಿನಗಳಿಂದ ಭೇಟಿ ನೀಡಿ ಜನರ ಯೋಗಕ್ಷೇಮ ವಿಚಾರಿಸಿ ಅವರಿಗೆ ಸೂಕ್ತ ಪರಿಹಾರ ನೀಡುವತ್ತ ಹೆಚ್ಚಿನ ಕ್ರಮ ವಹಿಸಿದ್ದೇನೆ.ಮಾನವೀಯ ನೆಲೆಯಲ್ಲಿ ಸೂಕ್ತ ಪರಿಹಾರವನ್ನು ತುರ್ತಾಗಿ ನೆರೆ ಸಂತ್ರಸ್ಥರಿಗೆ ನೀಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸುಳ್ಯ ವಿಧಾನಸಭಾ ವ್ಯಾಪ್ತಿಯಲ್ಲಿ ಸುಮಾರು 69 ಮನೆಗಳು ಭಾಗಶಃ ಹಾನಿಯಾಗಿದೆ. ಅಲ್ಲದೆ ಈ ವ್ಯಾಪ್ತಿಯಲ್ಲಿ ಹೆಚ್ಚು ತೊಂದರೆಗೊಳಗಾದ ಮನೆಗಳಿಗೆ ಶೀಘ್ರ ಪರಿಹಾರ ಘೋಷಣೆ ಮಾಡಲಾಗುವುದು. ಅಲ್ಲದೆ ಕಲ್ಮಕಾರಿನ ಗುಳಿಕ್ಕಾನ ಪರಿಸರದ 10 ಮನೆಗಳ ಮಂದಿ ಸಂತರಸ್ಥರಾಗಿದ್ದಾರೆ.ಇವರಿಗೆ ಪಂಚಾಯತ್ ವ್ಯಾಪ್ತಿಯಲ್ಲಿನ ಸರಕಾರಿ ಜಾಗವನ್ನು ಗುರುತಿಸಿ ಶಾಶ್ವತವಾಗಿ ಪುನರ್ವಸತಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

Advertisement

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಮಂತ್ರಿ ಮಂಡಲವು ಇನ್ನೇನು ರಚಿತವಾಗಲಿದೆ. ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡುವ ನಿರ್ಧಾರವನ್ನು ಪಕ್ಷ ಮಾಡುತ್ತದೆ.ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಅಲ್ಲದೆ ಕಳೆದ 26 ವರ್ಷದಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ದುಡಿಯುತ್ತಿದ್ದೇನೆ.ಸಚಿವ ಸ್ಥಾನ ಸಿಗಬೇಕೆನ್ನುವುದು ಸುಳ್ಯದ ಜನತೆಯ ಆಶಯವಾಗಿದೆ.ಪಕ್ಷ ನೀಡಿದರೆ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.ಆದರೆ ಮಂತ್ರಿ ಮಾಡುವ ನಿರ್ಧಾರ ಪಕ್ಷದ್ದಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ ಹೇಳಿದರು. ಪಕ್ಷ ನಿಧಾರ ಕೈಗೊಂಡು ಮಂತ್ರಿ ಸ್ಥಾನ ದೊರಕಿದರೆ ಅದನ್ನು ನಿಭಾಯಿಸುವುದು ಒಂದು ಸವಾಲಿನ ಕೆಲಸ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಅಲ್ಲದೆ ಬಾಯಿ ಮಾತಿಗೆ ಭರವಸೆ ನೀಡದೆ ಕಾರ್ಯದ ಮೂಲಕ ಜನರ ಆಶೋತ್ತರ ಈಡೇರಿಕೆ ಮಾಡಬೇಕು ಎನ್ನುವುದು ನನ್ನ ಭಾವನೆ ಎಂದು ಶಾಸಕ ಎಸ್ ಅಂಗಾರ ಹೇಳಿದರು.

ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಸುಬ್ರಹ್ಮಣ್ಯ ಗ್ರಾಮ ಸಮಿತಿ ಅಧ್ಯಕ್ಷ ದಿನೇಶ್ ಸಂಪ್ಯಾಡಿ, ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಸದಸ್ಯ ಪ್ರಶಾಂತ್ ಭಟ್ ಮಾಣಿಲ, ಬಿಜೆಪಿ ಮಂಡಲ ಸಮಿತಿ ಸದಸ್ಯ ಚಿದಾನಂದ ಕಂದಡ್ಕ, ಕುಕ್ಕೆ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮೋನಪ್ಪ ಮಾನಾಡು, ಮೋಹನರಾಂ ಸುಳ್ಳಿ, ಸುಬ್ರಹ್ಮಣ್ಯ ಭಟ್ ಮಾನಾಡು, ಪ್ರಮುಖರಾದ ಶ್ರೀಕುಮಾರ್ ಬಿಲದ್ವಾರ, ಅಶೋಕ್ ಕಡಬ, ಅಶೋಕ್ ಆಚಾರ್ಯ, ಶಿವಪ್ರಸಾದ್ ಮೈಲೇರಿ, ಸುಬ್ರಹ್ಮಣ್ಯ ಕಣ್ಕಲ್ ಉಪಸ್ಥಿತರಿದ್ದರು.

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶರಧಿ
August 22, 2025
8:21 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಭಾರ್ಗವ ರಾಮ್‌ ಎಸ್
August 22, 2025
8:16 AM
by: ದ ರೂರಲ್ ಮಿರರ್.ಕಾಂ
ಕೊಪ್ಪಳದಲ್ಲಿ ಸಸ್ಯ ಸಂತೆ | 45 ಲಕ್ಷಕ್ಕೂ ಅಧಿಕ ಸಸಿಗಳು ಮಾರಾಟ | ಇಲಾಖೆಯ ಮಾದರಿ ಕಾರ್ಯ |
August 22, 2025
7:57 AM
by: The Rural Mirror ಸುದ್ದಿಜಾಲ
‘ಗಗನ್ಯಾನ್’ಯೋಜನೆ ಶೇ. 80 ರಷ್ಟು ಪರೀಕ್ಷೆಗಳು ಪೂರ್ಣ | ಇಸ್ರೋ
August 22, 2025
7:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group