ಸುಳ್ಯ: ಸುಳ್ಯ ಸರಕಾರಿ ತಾಲೂಕು ಆಸ್ಪತ್ರೆ ರಸ್ತೆ ಪರಿಸ್ಥಿತಿ ಇದು..!. ಸರ್ ಪ್ಲೀಸ್ ಇದನ್ನೊಮ್ಮೆ ನೋಡ್ತೀರಾ ? ಯಾವಾಗಲಾದರೊಮ್ಮೆ ಇದನ್ನೊಮ್ಮೆ ದುರಸ್ತಿ ಮಾಡಿಸ್ತೀರಾ ? ಹೀಗೆ ಪ್ರಶ್ನೆ ಕೇಳ್ತಿದಾರೆ ಜನ…!
ಸುಳ್ಯದ ಮುಖ್ಯ ರಸ್ತೆ ಯಿಂದ ಆಸ್ಪತ್ರೆ ಗೆ ಬರುವ ರಸ್ತೆಯನ್ನು ನೋಡಿದರೆ ಆಸ್ಪತ್ರೆಯ ಮುಂಭಾಗವೇ ಕಿತ್ತು ಹೋಗಿದೆ. 90% ಆಸ್ಪತ್ರೆ ಬರುವ ಜನಸಾಮಾನ್ಯರ ದೈಹಿಕ ಕ್ಷೀಣ ಪರಿಸ್ಥಿತಿಯಲ್ಲಿ ಈ ಇಳಿಜಾರು ಅವೈಜ್ಞಾನಿಕ ರಸ್ತೆ ಏರುವುದು ಇಳಿಯುವುದೇ ಕಠಿಣ, ಅದರ ನಡುವೆ ಕಿತ್ತು ಹೋದ ರಸ್ತೆ ಬಡಜನತೆಯ ಶಾಪಕ್ಕೆ ತುತ್ತಾಗಬೇಕಿದೆ ನಗರ ಆಡಳಿತ ಅದಲ್ಲದೇ ಹಲವಾರು ಸಮಸ್ಯೆ ಗಳಿವೆ ತಿಳಿಸಿದರೆ ಮುಗಿಯದ ಗೋಳು . ಜನಪ್ರಿಯ ಶಾಸಕರು ಸಂಸದರು . ಅದಲ್ಲದೇ ಉಸ್ತುವಾರಿಸಚಿವರು ಹಲವಾರು ಬಾರಿ ಸುಳ್ಯ ಕ್ಕೆ ಭೇಟಿ ನೀಡುವಾಗ ತಮ್ಮ ಧರ್ಮದ, ತಮ್ಮ ಪಕ್ಷದ ಕಾರ್ಯಕ್ರಮಗಳೇ ಹೆಚ್ಚಾಯಿತೇ?
ಜನಸಾಮಾನ್ಯರಿಗೆ ಉಪಯೋಗವಾಗುವ ಆಸ್ಪತ್ರೆ ತಮ್ಮ ದೃಷ್ಟಿ ಗೆ ಕಾಣದಾಯಿತೆ? ಕಣ್ಣಿದ್ದು ಕರುಡರಾದರೇ? ರಾಷ್ಟ್ರೀಯ ಪಕ್ಷಗಳ ಸ್ವಯಂ ಘೋಷಿತ ನಾಯಕರು ಗಳೇ ತಮಗೂ ನಾಚಿಕೆ ಮಾನ ಮರ್ಯಾದೆ ಜವಾಬ್ದಾರಿ, ಕರ್ತವ್ಯ ಇಲ್ಲದಾಯಿತೆ?
ಎಷ್ಟೋ ಬಡಜನರ ದೇವಾಲಯ ಆಸ್ಪತ್ರೆ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗದ ಈ ನಾಚಿಕೆ ಗೇಡಿನ ಸಾಂಪ್ರದಾಯಿಕ ಪಕ್ಷ ರಾಜಕೀಯ ಜನ ಸಾಮಾನ್ಯರಿಗೆ ಅಗತ್ಯವಿದೆಯೇ?
ಕಾಂಕ್ರೀಟ್ ರಸ್ತೆ ಮಾಡಿ ಶಾಶ್ವತ ಪರಿಹಾರಕ್ಕೆ ಆಸ್ಪತ್ರೆ ಭೇಟಿ ನೀಡುವ ಸುಳ್ಯದ ಬಡನತೆಯ ಕರುಳಿನ ರೋಧನವಾಗಿದೆ ಖಂಡಿತವಾಗಿಯೂ ಈ ನಿರ್ಲಕ್ಷ್ಯ, ಸಾಮಾಜಿಕ ಆರ್ಥಿಕ ಹಿಂದುಳಿದ ಜನರ ಮೇಲೆ ಶೋಷಣೆಯ ಪ್ರತೀಕವಾಗಿದೆ.
- ದೀಕ್ಷಿತ್ ಕುಮಾರ್ ಜಯನಗರ