ಸುಳ್ಯ ಹಳೆಗೇಟಿನಲ್ಲಿ ವೈವಿಧ್ಯತೆ ಸಾರುವ ಕೇಶವ ಕೃಪಾ ವೇದ ಶಿಬಿರ

April 23, 2019
4:23 AM

ಸುಳ್ಯ: ಒಂದು ತಿಂಗಳ ಕಾಲ ವಿದ್ಯಾರ್ಥಿಗಳು ಯೋಗಿಗಳಂತೆ ಬದುಕಿ ಗುರುಕುಲ ಮಾದರಿಯಲ್ಲಿ ಇಲ್ಲಿ ವೇದಾಧ್ಯಯನ ನಡೆಸುತ್ತಾರೆ. ಆಧುನಿಕ ಯುಗದಲ್ಲೂ ಪ್ರಾಚೀನ ಕಾಲದ ಗುರುಕುಲ ಸಂಪ್ರದಾಯವನ್ನು ನೆನಪಿಸುವ ಈ ವೇದ ಶಿಬಿರ ನಡೆಯುತ್ತಿರುವುದು ಸುಳ್ಯದ ಹಳೆಗೇಟಿನಲ್ಲಿ. ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ವೇದ ಯೋಗ ಕಲಾ ಶಿಬಿರಕ್ಕೀಗ 19ರ ಸಂಭ್ರಮ. ನಿತ್ಯ ನಿರಂತರ ಸಾಂಸ್ಕøತಿಕ ಪ್ರವಾಹವನ್ನು ಹರಿಸಿ ಮಾನವೀಯ ಮೌಲ್ಯಗಳನ್ನು ಬಿತ್ತಿದ ವೇದ ಶಿಬಿರವು 19 ವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ವೇದೋಪನಿಷತ್ತಿನ ಅಂತರ ಗಂಗೆಯನ್ನು ಹರಿಸಿದೆ. ಮಕ್ಕಳ ಬೇಸಿಗೆ ರಜೆ ಆರಂಭವಾದೊಡನೆ ಕೇಶವಕೃಪಾದಲ್ಲಿ ಆರಂಭಗೊಳ್ಳುವ ವೇದ ಶಿಬಿರ ತಿಂಗಳ ಕಾಲ ವೇದ-ಮಂತ್ರಗಳ ಅನುರಣನವನ್ನುಂಟು ಮಾಡಿ ಹೊಸ ಚೈತನ್ಯವನ್ನು ಪಸರಿಸುವಂತೆ ಮಾಡುತಿದೆ.
ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ನಡೆಯುವ ಶಿಬಿರದಲ್ಲಿ ವೇದ ಮಂತ್ರಗಳ ಅನುರಣಗಳ ನಡುವೆ ಸಾವಿರಾರು ವರುಷಗಳ ಹಿಂದಿನ ಭಾರತದ ದರ್ಶನವನ್ನು ಮಾಡಿಕೊಳ್ಳುವ ಮಕ್ಕಳು ಆಧುನಿಕ ಬೇಸಿಗೆ ಶಿಬಿರಗಳ ಹಾಡು, ಕುಣಿತ, ಅಭಿನಯ, ಜಾದುಗಳಲ್ಲಿಯೂ ಭಾಗವಹಿಸಿ ಸಂಭ್ರಮಿಸುತ್ತಾರೆ. ಯಕ್ಷಗಾನದ ಭೂಮಿಯಲ್ಲಿ ರಾಮಾಯಣ ಮಹಾಭಾರತವನ್ನು ನನಪಿಸಿಕೊಳ್ಳುತ್ತಾರೆ. ಯೋಗಾಸನ, ಪ್ರಾಣಾಯಾಮಗಳ ಮೂಲಕ ಜೀವನ ಪದ್ಧತಿಯ ಆರೋಗ್ಯಕರ ಪಯಣವನ್ನು ಕಲಿಯುತ್ತಾರೆ. ಆದರ್ಶ ಪುರುಷರ ಜೀವನವನ್ನೂ, ರಾಷ್ಟ್ರ ಭಕ್ತಿಯ ಧ್ಯೇಯವನ್ನೂ ಮೈಗೂಡಿಸಿಕೊಳ್ಳುತ್ತಾರೆ. ಈಜಿನಲ್ಲಿ ಪರಿಣತಿಯನ್ನು ಪಡೆಯುತ್ತಾರೆ. ಒಟ್ಟಿನಲ್ಲಿ ಹಳೆಯ ಕಾಲದ ಗುರುಕುಲ ಶಿಕ್ಷಣ ಪದ್ಧತಿಯ ಮೂಲಕ ವೇದಗಳನ್ನು ಉಚಿತವಾಗಿ ಕಲಿಸುವ ಮೂಲಕ ಕೇಶವಕೃಪಾ ವೇದ ಶಿಬಿರವು ಇತರ ಶಿಬಿರಗಳಿಂದ ಭಿನ್ನತೆಯನ್ನು ಕಾಯ್ದುಕೊಂಡಿದೆ.
ಸಂಪೂರ್ಣ ಉಚಿತ:
ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಎಳೆಯ ಮಕ್ಕಳಿಗೆ ತಿಳಿಸಬೇಕೆಂದು ನಾಗರಾಜ ಭಟ್ ವೇದ ಶಿಬಿರವನ್ನು ಆರಂಭಿಸಿದರು. 16 ಮಕ್ಕಳೊಂದಿಗೆ ಆರಂಭವಾದ ಶಿಬಿರಕ್ಕೆ ಇಂದು ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಸಂಪೂರ್ಣ ಉಚಿತವಾಗಿ ನಡೆಯುವ ಶಿಬಿರದಲ್ಲಿ 120 ವಿದ್ಯಾರ್ಥಿಗಳಿಗೆ ವೇದ ಶಿಕ್ಷಣನ್ನು ನೀಡಲಾಗುತಿದೆ. ಶಿಬಿರಕ್ಕೆ ಸೇರಿದವರು ಮೂರು ವರ್ಷಗಳ ಕಾಲ ನಿರಂತರ ಶಿಬಿರದಲ್ಲಿ ಭಾಗವಹಿಸಿ ವೇದ ಅಧ್ಯಯನವನ್ನು ಪೂರ್ತಿಗೊಳಿಸಬೇಕು. ಪ್ರಥಮ ವರ್ಷಕ್ಕೆ 30 ವಿದ್ಯಾರ್ಥಿಗಳನ್ನಷ್ಟೇ ಸೇರ್ಪಡೆ ಮಾಡಲಾಗುತ್ತದೆ. ಬೇಡಿಕೆ ಹೆಚ್ಚಿದ ಕಾರಣ ಈಗ ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡುತ್ತೇವೆ ಎನ್ನುತ್ತಾರೆ ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಭಟ್. ವೇದ-ಯೋಗ ಹಾಗೂ ಕಲಾ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯ ಪುಸ್ತಕಗಳೂ, ವ್ಯಾಸಪೀಠ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ನಾಗರಾಜ ಭಟ್ ತಮ್ಮ ಮನೆಯಲ್ಲಿಯೇ ವಿದ್ಯಾರ್ಥಿಗಳಿಗೆ ವಸತಿ ಮತ್ತಿತರ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ.
ವಿಶಿಷ್ಟವಾದ ವೇದ ಯೋಗ ಕಲಾ ಶಿಬಿರ:
ಶಿಬಿರದಲ್ಲಿ ವೇದ ಪಾಠ ಮಾತ್ರವಲ್ಲದೆ ವೇದಾಂತರ್ಗತವಾದ ಜೀವನ ದರ್ಶನವನ್ನು ಜನಮಾನಸಕ್ಕೆ ಸಮರ್ಥವಾಗಿ ತಲುಪಿಸಲು ಮಾಧ್ಯಮವಾದ ಯೋಗಾಭ್ಯಾಸ, ಭಜನೆ, ಸಂಕೀರ್ತನೆಗಳು, ಹಾಡು-ಕುಣಿತ, ಮಕ್ಕಳಲ್ಲಿ ರಾಷ್ಟ್ರಪ್ರೇಮದ ಭಕ್ತಿ ತರಂಗವನ್ನು ಮೂಡಿಸುವ ಹಲವಾರು ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಜಾದೂ, ಮಿಮಿಕ್ರಿ, ಮುಖವಾಡ ತಯಾರಿ, ಬೊಂಬೆ ತಯಾರಿ, ಮಾತುಗಾರಿಕೆ, ಜಾನಪದ ನೃತ್ಯಗಳು, ಹಾವುಗಳ ಮಾಹಿತಿ, ಯಕ್ಷಗಾನ, ರಂಗಪಾಠಗಳು, ರಂಗಗೀತೆ, ಚಿತ್ರಕಲೆ, ಆರೋಗ್ಯ ಮಾಹಿತಿ, ಅಗ್ನಿಶಾಮಕ ಪ್ರಾತ್ಯಕ್ಷಿಕೆ ಹೀಗೆ ಹಲವಾರು ವಿಷಯಗಳನ್ನು ಕಲಿಸಿಕೊಡಲಾಗುತ್ತಿದೆ.

Advertisement
Advertisement

ಸರಣಿ ಶಿವಪೂಜೆ:
ವೇದ ಶಿಬಿರಗಳಲ್ಲಿ ಕಲಿತ ವೇದ ಮಂತ್ರಗಳು ಮರೆತು ಹೋಗಬಾರದು. ಅದು ಜೀವನದಲ್ಲಿ ಅಳವಡಿಕೆಯಾಗಬೇಕು ಎಂಬ ದೃಷ್ಠಿಯಿಂದ ವೇದ ಮಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗಾಗಿ ಸರಣಿ ಶಿವಪೂಜೆಯನ್ನು ಹಮ್ಮಿಕೊಳ್ಳಲಾಗುತಿದೆ. ಶಿಬಿರದ ಎಲ್ಲಾ ವಿದ್ಯಾರ್ಥಿಗಳ ಮನೆಯಲ್ಲಿ ನಡೆಯುವ ಸರಣಿ ಶಿವಪೂಜೆಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಪೂಜೆ ಮಾಡುವ ವಿಧಾನಗಳನ್ನು ಕಲಿಸಿಕೊಡಲಾಗುತ್ತಿದೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

Team the rural mirror

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಅಡಿಕೆ ಬೆಳೆಗೆ ಉತ್ತಮ ಧಾರಣೆಯ ಸಂತಸದಲ್ಲಿ ಚಾಮರಾಜನಗರ ರೈತರು | ಚಾಲಿ ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆಯಲ್ಲಿ ಮಲೆನಾಡು ಭಾಗದ ಬೆಳೆಗಾರರು | ಧಾರಣೆ ಏರಿಕೆಯ ಬಗ್ಗೆ ತಜ್ಞರ ಅಭಿಪ್ರಾಯ |
May 3, 2025
7:01 AM
by: ದ ರೂರಲ್ ಮಿರರ್.ಕಾಂ
ಕಣ್ಣಿಗೆ ಬಟ್ಟೆ ಕಟ್ಟಿ 6 ನಿಮಿಷದಲ್ಲಿ 112 ವಸ್ತುಗಳನ್ನು ಗುರುತಿಸಿದ ಬಾಲಕಿ | ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ |
April 27, 2025
11:17 AM
by: The Rural Mirror ಸುದ್ದಿಜಾಲ
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ
April 24, 2025
6:05 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group