ಸುಳ್ಯ: ಅತ್ಯಂತ ಜನಪ್ರಿಯ ಹಾಗೂ ಸಜ್ಜನ ಹಿರಿಯ ಶಾಸಕರಾದ ಅಂಗಾರ ಅವರಿಗೆ ಸಚಿವ ಸ್ಥಾನ ದೊರಕಬೇಕು ಎಂಬುದಾಗಿ ಸುಳ್ಯದ ಬಹುತೇಕ ಜನರು ಪಕ್ಷಾತೀತವಾಗಿ ಅಭಿಪ್ರಾಯ ಪ್ರಕಟಿಸಿದ್ದರು.ಆದ್ದರಿಂದ ಪಕ್ಷದ ಕಾರ್ಯಕರ್ತರ ಮತ್ತು ಸುಳ್ಯದ ಜನರ ನಿರಂತರ 26 ವರ್ಷಗಳ ಬೆಂಬಲವನ್ನು ಪರಿಗಣಿಸಿ ಎರಡನೆ ವಿಸ್ತರಣೆ ಸಂದರ್ಭದಲ್ಲಿಯಾದರೂ ಸಚಿವ ಸ್ಥಾನ ಅವಕಾಶವು ಸುಳ್ಯದ ಮಹಾಜನತೆಯ ಅಪೇಕ್ಷೆಯಾಗಿದೆ ಎಂದು ಸುನಿಲ್ ಕೇರ್ಪಳ ಪ್ರತಿಕ್ರಿಯೆ ನೀಡಿದ್ದಾರೆ.ದಕ್ಷಿಣ ಕನ್ನಡದಲ್ಲಿ ಒಬ್ಬ ಮಾದರಿ ಶಾಸಕರಾಗಿ ಅತ್ಯಂತ ಹೆಚ್ಚಿನ ಅನುಭವಿ ಶಾಸಕರ ಕಡೆಗಣನೆಯಿಂದ , ಪಕ್ಷ ನಿಷ್ಟಾವಂತರನ್ನು ಭ್ರಷ್ಟರ ಮುಂದೆ ಕಡೆಗಣಿಸುತ್ತಿದೆ ಎಂಬ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಅವರು ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel