ಸುಳ್ಯದ ನಿಷ್ಠಾವಂತ ಶಾಸಕ ಅಂಗಾರರ ಕಡೆಗಣನೆ : ತಾಲೂಕು ರೈತ ಸಂಘ ಆಕ್ರೋಶ

August 20, 2019
2:20 PM

ಸುಳ್ಯ: ಸುಳ್ಯ ವಿಧದಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾದ ಅಂಗಾರರಿಗೆ ಮಂತ್ರಿ ಸ್ಥಾನ ನೀಡದೆ ಬಿಜೆಪಿ ಅನ್ಯಾಯ ಮಾಡಿದೆ. ಮಾತ್ರವಲ್ಲದೆ ಈ ಮೂಲಕ ಸುಳ್ಯಕ್ಕೆ ಮತ್ತೊಮ್ಮೆ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಅವಮಾನ ಮಾಡಿದೆ. ಸುಳ್ಯದಲ್ಲಿ ಅತಿ ಹೆಚ್ಚು ರೈತರಿದ್ದು ನಮ್ಮ ಸಮಸ್ಯೆ ಹೇಳಿಕೊಳ್ಳಲು ಮತ್ತು ಪರಿಹಾರ ದೊರಕಲು ಸುಲಭವಾಗುತ್ತಿತ್ತು . ಹಾಗಾಗಿ ಸುಳ್ಯಕ್ಕೆ ಸಚಿವ ಸ್ಥಾನ ನೀಡದೇ ಇರುವುದು ತುಂಬಾ ನೋವು ತಂದಿದೆ ಮತ್ತು ನಮ್ಮ ರೈತ ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದು ತಾಲೂಕು ರೈತ ಸಂಘ ಮತ್ತು ಹಸಿರುಸೇನೆ ಇದರ ಕಾರ್ಯದರ್ಶಿ ತೀರ್ಥರಾಮ ನೆಡ್ಚಿಲು ಹೇಳಿದ್ದಾರೆ.

ಸುಳ್ಯದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಾದರೂ ನಮ್ಮ ಜಿಲ್ಲೆಯ ರೈತರನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ಸುಳ್ಯಕ್ಕೆ ಮಂತ್ರಿಸ್ಥಾನ ನೀಡಲಿ ಎಂದು ಭಾವಿಸುತ್ತೇವೆ ಎಂದು  ತೀರ್ಥರಾಮ ನೆಡ್ಚಿಲು ಹೇಳಿದರು.

ಜಿಲ್ಲಾ ರೈತ ಸಂಘದ ಅದ್ಯಕ್ಷರಾದ ಸುರೇಶ್ ಭಟ್ ಕೊಜಂಬೆ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 7 ಜನ ಶಾಸಕರಿದ್ದು ಇನ್ನು ಮುಂದೆ ಜಿಲ್ಲೆಯಲ್ಲಿ ಬಿಜೆಪಿ ಯನ್ನು ಜಿಲ್ಲೆಯ ಜನ ಬೆಂಬಲಿಸಬೇಕೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಲೋಲಜಾಕ್ಷ ಭೂತಕಲ್ಲು, ತೀರ್ಥರಾಮ ಅರಂತೋಡು , ಲೋಕಯ್ಯ ಅತ್ಯಾಡಿ , ಮುರಳೀಧರ ಅಡ್ಕಾರು , ದಿವಾಕರ ಪೈ ಮಾಜಿಗುಂಡಿ , ನಾರಾಯಣ ಪಾಟಾಳಿ ಉಬರಡ್ಕ , ತೀರ್ಥರಾಮ ತೊಡಿಕಾನ , ಸೆಬಾಸ್ಟಿಯನ್ ಮಡಪ್ಪಾಡಿ,ಧರ್ಮಪಾಲ ಗೌಡ ಕೊಯಿಂಗಾಜೆ ಮತ್ತಿತರರು ಉಪಸ್ಥಿತರಿದ್ದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯವೇ ದೊಡ್ಡ ಶಕ್ತಿಮೂಲ
August 19, 2026
8:42 PM
by: ದ ರೂರಲ್ ಮಿರರ್.ಕಾಂ
ಎಲ್ ನಿನೋ ಆತಂಕದ ನಡುವೆಯೂ ಖಾರಿಫ್ ಬಿತ್ತನೆ 1,000 ಲಕ್ಷ ಹೆಕ್ಟೇರ್ ದಾಟಿದೆ
August 19, 2026
6:48 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 19-08-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಮುಂಗಾರು ಏಕೆ ದುರ್ಬಲವಾಗಿದೆ?
August 19, 2026
2:02 PM
by: ಸಾಯಿಶೇಖರ್ ಕರಿಕಳ
ತುಮಕೂರಿನಲ್ಲಿ ಭರ್ಜರಿ ಕೈಗಾರಿಕಾ ಹಬ್ – ₹7,000 ಕೋಟಿ ಹೂಡಿಕೆ, 88 ಸಾವಿರ ಉದ್ಯೋಗದ ಗುರಿ
August 19, 2026
8:05 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror