ಸುಳ್ಯ: ಇರಾನಿ ಮೂಲದನು ಎನ್ನಲಾದ ವ್ಯಕ್ತಿಯೊಬ್ಬ ಸುಳ್ಯದಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿ ಮಾಲಕರ ಹಣ ನಾಜೂಕಿನಿಂದ ಎಗರಿಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಸುಳ್ಯದ ಗಾಂಧಿನಗರದ ಇಲೆಕ್ಟ್ರಾನಿಕ್ಸ್ ಅಂಗಡಿಯೊಂದಕ್ಕೆ ಮಧ್ಯಾಹ್ನದ ಹೊತ್ತಿಗೆ ಇರಾನ್ ಮೂಲದ ವ್ಯಕ್ತಿಗಳು ಎನ್ನುತ್ತಾ ಆಗಮಿಸಿ ನಮ್ಮಲ್ಲಿ ಇರುವ ಇಸ್ತ್ರಿ ಪೆಟ್ಟಿಗೆ ಬದಲಾಯಿಸಿ ಮಿಕ್ಸಿ ಕೊಡುತ್ತೀರಾ ಎಂದು ವಿಚಾರಿಸಿಕೊಂಡು ಬಂದಿದ್ದರು. ನಂತರ ಭಾರತದ ದೊಡ್ಡ ನೋಟು ಯಾವುದು ಎಂದು ಅಂಗಡಿ ಮಾಲಕರ ಬಳಿ ಆತ್ಮೀಯವಾಗಿ ಮಾತನಾಡುತ್ತಾ ಅಂಗಡಿ ಮಾಲಕರ ಬಳಿ ಇದ್ದ ನೋಟುಗಳನ್ನು ನೋಡುತ್ತಲೇ ಮಾಲಕರಿಗೆ ತಿಳಿಯಂತೆ ನೋಟುಗಳನ್ನು ಎಗರಿಸಿದರು. 2000, 500 ಹೀಗೇ ಎಲ್ಲಾ ಬಗೆಯ ನೋಟುಗಳನ್ನು ವೀಕ್ಷಣೆ ಮಾಡುತ್ತಾ ಜೇಬಿಗೆ ನಾಜೂಕಾಗಿ ತುಂಬಿದರು. ವ್ಯಾಪಾರ ನಡೆಯದೆ ಬಳಿಕ ಹಿಂತಿರುಗಿದರು. ನಂತರ ಅಂಗಡಿ ಮಾಲಕರು ಹಣ ಎಣಿಸಿದಾಗ 33 ಸಾವಿರದಷ್ಟು ಹಣ ನಾಪತ್ತೆಯಾಗಿತ್ತು. ತಕ್ಷಣವೇ ಸಿಸಿ ಕ್ಯಾಮಾರದ ಮೂಲಕ ವಿಡಿಯೋ ಗಮನಿಸಿದಾಗ ಹಣ ಎಗರಿಸಿದ ಬಗ್ಗೆ ತಿಳಿದಿದೆ. ಈ ಸಂಬಂಧವಾಗಿ ಇದುವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.