ಸುಳ್ಯದಲ್ಲಿ ಬಿರುಸಿನಿಂದ ಮತದಾನ

April 19, 2019
4:15 AM

ಸುಳ್ಯ: ಲೋಕಸಭಾ ಚುನಾವಣೆಗೆ ಮತದಾನ ಆರಂಭಗೊಂಡಿದೆ. ಸುಳ್ಯ ತಾಲೂಕಿನಾದ್ಯಂತ ಮತದಾನಕ್ಕೆ ಜನರು ಮತಗಟ್ಟೆಗೆ ಆಗಮಿಸುತ್ತಿದ್ದಾರೆ.ಸುಳ್ಯ ಶಾಸಕ ಎಸ್ ಅಂಗಾರ ಅವರು ದೊಡ್ಡತೋಟ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಳಿಕ ಬಿಜೆಪಿ ಚುನಾವಣಾ ಬೂತ್‍ನಲ್ಲಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿ ತಾವೂ ಸ್ವತ: ಕುಳಿತುಕೊಂಡರು.

Advertisement
Advertisement

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 99,631 ಪುರುಷ ಮತ್ತು 1,00948 ಮಹಿಳೆಯರು ಸೇರಿ ಒಟ್ಟು 2,00,579 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 231 ಬೂತ್‍ಗಳಿವೆ. ಇದರಲ್ಲಿ ಗುತ್ತಿಗಾರು ಹಿರಿಯ ಪ್ರಾಥಮಿಕ ಶಾಲೆಯ ಬೂತನ್ನು ಮತ್ತು ಕಡಬ ಹಿರಿಯ ಪ್ರಾಥಮಿಕ ಶಾಲೆ ಬೂತನ್ನು ಮಹಿಳಾ ಮತಗಟ್ಟೆ ಎಂದು ಗುರುತಿಸಲಾಗಿದೆ. ಬಡ್ಡಡ್ಕ ಶ್ರೀ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಬೂತನ್ನು ಪಾರಂಪರಿಕ ಬೂತ್ ಎಂದು ಗುರುತಿಸಲಾಗಿದೆ.
13 ಬೂತ್‍ಗಳಲ್ಲಿ ವೆಬ್‍ಕಾಸ್ಟೀಂಗ್ ಮಾಡಲಾಗುತ್ತಿದೆ. ಕ್ರಿಟಿಕಲ್ ಬೂತ್‍ಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಒದಗಿಸಲಾಗಿದೆ. 58 ಮೈಕ್ರೋ ಆಬ್ಸರ್‍ವರ್ಸ್‍ನ್ನು ನೇಮಕ ಮಾಡಲಾಗಿದೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

Team the rural mirror

ಇದನ್ನೂ ಓದಿ

ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿದ ಯುವಕ
May 3, 2025
6:28 AM
by: The Rural Mirror ಸುದ್ದಿಜಾಲ
ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರ ಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ | ಜಿಲ್ಲೆಯ ಅತ್ಯುತ್ತಮ ಕೃಷಿ ಸಖಿ ಪ್ರಶಸ್ತಿ ಸಂಪಾಜೆ ಮೋಹಿನಿ ವಿಶ್ವನಾಥ್ ಅವರಿಗೆ
April 24, 2025
9:47 PM
by: ದ ರೂರಲ್ ಮಿರರ್.ಕಾಂ
ಪಟ್ಟೆ ವಿದ್ಯಾ ಸಂಸ್ಥೆಗಳು ಬಡಗನ್ನೂರು ಇನ್ನು ದ್ವಾರಕಾ ಪ್ರತಿಷ್ಠಾನ ಪುತ್ತೂರಿಗೆ ಸೇರ್ಪಡೆ
April 12, 2025
11:50 AM
by: The Rural Mirror ಸುದ್ದಿಜಾಲ
ಪಿಯುಸಿ ಫಲಿತಾಂಶ | ಶ್ರೇಯನ್‌ ಕಾವಿನಮೂಲೆ | ಸುಳ್ಯ ತಾಲೂಕು ಟಾಪರ್‌ | ರಾಜ್ಯಮಟ್ಟದಲ್ಲಿ 8 ನೇ ಸ್ಥಾನ |
April 9, 2025
2:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group