ಸುಳ್ಯದಲ್ಲಿ ಮತ್ತೆ ಕಸದ ತಲೆನೋವು : ನಗರ ಪಂಚಾಯತ್ ಪರಿಸರ ತ್ಯಾಜ್ಯಮಯ….!

October 21, 2019
7:19 AM

ಸುಳ್ಯ: ತ್ಯಾಜ್ಯ ಹಾಕಲು, ವಿಲೇವಾರಿ ಮಾಡಲು ಸ್ಥಳವಿಲ್ಲ ಎಂದು ನಗರ ಪಂಚಾಯತ್ ಆವರಣದಲ್ಲಿಯೇ ಕಸ ಹಾಕಿರುವ ವಿಚಿತ್ರ ಪ್ರಸಂಗ ಸುಳ್ಯ ನಗರದಲ್ಲಿ ಕಂಡು ಬರುತಿದೆ. ಕಳೆದ ಒಂದು ವರುಷದಿಂದ ಈ ರೀತಿ ನಗರ ಪಂಚಾಯತ್ ಆವರಣದಲ್ಲಿ ಕಸ ತುಂಬಿಡಲಾಗುತ್ತಿದ್ದು ಸುಳ್ಯ ನಗರ ಪಂಚಾಯತ್ ಪರಿಸರ ಅಕ್ಷರಷಃ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗಿದೆ. ನಗರ ಪಂಚಾಯತ್‍ನ ಹಿಂದಿನ ಕಟ್ಟಡ, ಎದುರಿನ ವಾಹನ ಪಾರ್ಕಿಂಗ್ ಶೆಡ್ ಪೂರ್ತಿಯಾಗಿ ಕಸದ ರಾಶಿ ತುಂಬಿ ತುಳುಕಿದ್ದು ಈಗ ನಗರ ಪಂಚಾಯತ್ ಕಟ್ಟಡದ ಹಿಂಭಾಗದಲ್ಲಿ ತ್ಯಾಜ್ಯವನ್ನು ತಂದು ಹಾಗೆ ಸುರಿಯಲಾಗುತಿದೆ. ಪರಿಣಾಮ ನಗರ ಪಂಚಾಯತ್ ಸುತ್ತಲೂ ಕಸದ ರಾಶಿಯೇ ರಾರಾಜಿಸುತಿದೆ.

ಪರಸರವಿಡೀ ದುರ್ವಾಸನೆ ಬೀರುತಿದೆ: ಆರಂಭದಲ್ಲಿ ಬೇರ್ಪಡಿಸಿದ ಪ್ಲಾಸ್ಟಿಕ್ ಮತ್ತಿತರ ಒಣ ಕಸವನ್ನು ನಗರ ಪಂಚಾಯತ್ ಮುಂಭಾಗದ ಕಟ್ಟಡದಲ್ಲಿ ತುಂಬಿಡಲಾಗುತ್ತಿತ್ತು. ಆದರೆ ಕ್ರಮೇಣ ಬೇರ್ಪಡಸದೆ ಕಸವನ್ನು ಹಾಗೆಯೇ ತುಂಬಿಡಲು ಆರಂಭವಾಯಿತು. ನಗರದಿಂದ ಸಂಗ್ರಹಿಸುವ ಕಸದಲ್ಲಿ ಹಸಿ ಕಸವನ್ನು ಕೃಷಿಕರೋರ್ವರ ತೋಟಕ್ಕೆ ಗೊಬ್ಬರ ತಯಾರಿಸಲೆಂದು ಕೊಂಡೊಯ್ಯಲಾಗುತ್ತಿತ್ತು. ಪ್ಲಾಸ್ಟಿಕ್ ಮತ್ತಿತರ ಒಣ ಕಸವನ್ನು ನಗರ ಪಂಚಾಯತ್‍ನ ಕಟ್ಟಡದಲ್ಲಿ ಸುಮಾರು 11 ತಿಂಗಳಿನಿಂದ ಸಂಗ್ರಹಿಸಲಾಗುತ್ತಿತ್ತು. ಆದರೆ ಇತ್ತೀಚಿನ ಕೆಲವು ದಿನಗಳಿಂದ ಹಸಿ ಕಸವನ್ನು ಗೊಬ್ಬರ ಮಾಡಲು ಕಳಿಸುವುದು ಸ್ಥಗಿತಗೊಂಡಿದೆ. ಪರಿಣಾಮ ಎಲ್ಲಾ ರೀತಿಯ ಕಸವನ್ನೂ ನಗರ ಪಂಚಾಯತ್ ಪರಿಸರದಲ್ಲೇ ಹಾಕಿಡಲಾಗುತ್ತಿದ್ದು ಎಲ್ಲೆಡೆ ದುರ್ವಾಸನೆ ಹರಡಿದೆ. ದುರ್ವಾಸನೆ ಹರಡುವುದರ ಜೊತೆಗೆ ನೊಣಗಳು ಹಾರಾಡುತ್ತಿದ್ದು ಪರಿಸರವೇ ಕೆಟ್ಟು ಹೋಗಿದೆ.

ಸಚಿವರೇ ಆದೇಶಿಸಿದರೂ ಕಸ ತೆರವಾಗಿಲ್ಲ: ನಗರ ಪಂಚಾಯತ್ ಕಟ್ಟಡವೇ ಡಂಪಿಂಗ್ ಯಾರ್ಡ್ ಆಗಿರುವ ವಿಚಾರ ಬಾರೀ ವಿವಾದ ಸೃಷ್ಠಿಸಿದ ಹಿನ್ನಲೆಯಲ್ಲಿ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಯು.ಟಿ.ಖಾದರ್ ಸ್ಥಳಕೆ ಭೇಟಿ ನೀಡಿ ಕೂಡಲೇ ನಗರ ಪಂಚಾಯತ್ ಅಂಗಳದಿಂದ ಕಸವನ್ನು ತೆರವು ಮಾಡಲು ಸೂಚಿಸಿದ್ದರು. ಆದರೆ ಬಳಿಕ ಹಲವು ತಿಂಗಳುಗಳೇ ಕಳೆದರೂ ಕಸ ತೆರವಾಗಿಲ್ಲ. ಮಾತ್ರವಲ್ಲದೆ ಕಸದ ರಾಶಿ ಇನ್ನಷ್ಟು ಹೆಚ್ಚಿದೆ. ಶಾಸಕ ಎಸ್.ಅಂಗಾರ, ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಿಂದೆ ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಸಕ್ಕೆ ಮುಕ್ತಿ ನೀಡಲು ಸೂಚನೆ ನೀಡಿದ್ದರು. ಆದರೆ ಇದುವರೆಗೂ ನಗರ ಪಂಚಾಯತ್ ಅವರಣದ ಕಸಕ್ಕೆ ಮುಕ್ತಿ ನೀಡಲು ಸಾಧ್ಯವಾಗಿಲ್ಲ.

ಕಲ್ಚರ್ಪೆ ಡಂಪಿಂಗ್ ಯಾರ್ಡ್ ಫುಲ್ ಫುಲ್:ಕಲ್ಚರ್ಪೆಯಲ್ಲಿರುವ ಸುಳ್ಯ ನಗರದ ತ್ಯಾಜ್ಯ ವಿಲೇವಾರಿ ಘಟಕದ ಫುಲ್ ಆದ ಕಾರಣ ಅಲ್ಲಿ ಕಸ ಹಾಕುವುದನ್ನು ಕಳೆದ ಒಂದು ವರ್ಷದಿಂದ ನಿಲ್ಲಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಕಸವನ್ನು ಕೊಂಡೊಯ್ದು ಹಾಗೆಯೇ ಸುರಿಯುವ ಕಾರಣ ಕಲ್ಚರ್ಪೆಯಲ್ಲಿ ದೊಡ್ಡ ತ್ಯಾಜ್ಯ ಪರ್ವತವೇ ನಿರ್ಮಾಣವಾಗಿದೆ. ಇಲ್ಲಿ ಕಸ ಹಾಕುವುದು ಅಸಾಧ್ಯವಾದ ಕಾರಣ ತ್ಯಾಜ್ಯ ಹಾಕುವುದನ್ನು ನಿಲ್ಲಿಸಲಾಗಿತ್ತು. ಬಳಿಕ ಹಸಿ ಕಸವನ್ನು ಗೊಬ್ಬರ ಮಾಡಲು ಕಳಿಸಲಾಗುತ್ತಿತ್ತು ಮತ್ತು ಒಣ ಕಸವನ್ನು ನಗರ ಪಂಚಾಯತ್ ಎದುರಿನ ಕಟ್ಟಡದಲ್ಲಿ ತುಂಬಿಡಲಾಗುತ್ತಿತ್ತು. ಇದೀಗ ಹಸಿ ಕಸವನ್ನು ಕಲ್ಚರ್ಪೆಗೆ ಮತ್ತೆ ಕೊಂಡೊಯ್ಯಲು ಆರಂಭಿಸಲಾಗಿದ್ದರೂ ಅಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.

Advertisement

ವಾರದಿಂದ ಕಸ ಸಂಗ್ರಹ ಸ್ಥಗಿತ: ಕಸ ಹಾಕಲು ಸ್ಥಳವಿಲ್ಲ ಎಂದು ಕಳೆದ ಒಂದು ವಾರದಿಂದ ಸುಳ್ಯ ನಗರದ ಮನೆಗಳಿಂದ ಮತ್ತು ನಗರದಲ್ಲಿ ಕಸ ಸಂಗ್ರಹ ಮಾಡುವುದು ಸ್ಥಗಿತಗೊಂಡಿದೆ. ಇದರಿಂದ ಕಸ ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿಯೇ ಕೊಳೆಯುತಿದೆ. ಕಸ ಸಂಗ್ರಹ ಸ್ಥಗಿತವಾಗಿರುವುದು ತೀವ್ರ ಸಮಸ್ಯೆ ಸೃಷ್ಠಿಸಲಿದೆ ನಗರದ 20 ವಾರ್ಡ್‍ಗಳಲ್ಲಿಯೂ ವಾಹನ ತೆರಳಿ ಕಸ ಸಂಗ್ರಹಿಸುವುದು ನಿಲ್ಲಿಸಲಾಗಿದೆ.

ನಗರ ಪಂಚಾಯತ್ ಸಮೀಪದ ಕಟ್ಟಡದಲ್ಲಿ ಮತ್ತು ಇತರ ಕಡೆ ಸಂಗ್ರಹಿಸಲಾಗಿರುವ ಕಸವನ್ನು ವಿಲೇವಾರಿ ನಡೆಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕಸ ಹಾಕಲು ಸೂಕ್ತ ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ನಗರದ ಕಸ ಸಂಗ್ರಹ ಕಾರ್ಯವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು – ಮತ್ತಡಿ ,ನಗರ ಪಂಚಾಯತ್ ಮುಖ್ಯಾಧಿಕಾರಿ.

ನಗರದ ಕಸ ಕಡಿಮೆ ಮಾಡಲು ಪೈಪ್ ಕಂಪೋಸ್ಟ್ ಪದ್ಧತಿಯನ್ನು ಅಳವಡಿಸುವುದು ಸೂಕ್ತ. ಪ್ರತಿ ಮನೆಗೆ ಪೈಪ್‍ಗಳನ್ನು ನೀಡಿ ಹಸಿ ಕಸವನ್ನು ಕಂಪೋಸ್ಟ್ ಮಾಡಬೇಕು. ಯಾವುದೇ ಹಸಿ ಕಸ ಮನೆಗಳಿಂದ ಹೊರ ಬರದಂತೆ ಆಗಬೇಕು. ಜೊತೆಗೆ ಪ್ರತಿ ಮನೆಯಿಂದ ಬೇರ್ಪಡಿಸಿದ ಒಣ ಕಸಗಳನ್ನು ಸಂಗ್ರಹಿಸಿ ಅದನ್ನು ಮರು ಬಳಕೆಗೆ ಕ್ರಮ ಕೈಗೊಳ್ಳಬೇಕು – 
ಶರೀಫ್ ಕಂಠಿ , ನಗರ ಪಂಚಾಯತ್ ಸದಸ್ಯ.

 

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಕೊಳೆರೋಗ | ಇಲಾಖೆಗಳ ಮಾಹಿತಿ ತಲುಪಿದ ಕೃಷಿಕರ ಸಂಖ್ಯೆ ನೋಡಿದರೇ ಅಚ್ಚರಿ…!
September 18, 2025
6:59 AM
by: ದ ರೂರಲ್ ಮಿರರ್.ಕಾಂ
ಬಾಂಗ್ಲಾದೇಶದಲ್ಲಿ ತೀವ್ರಗೊಂಡ ಡೆಂಗ್ಯೂ ಜ್ವರ – 156 ಕ್ಕೂ ಹೆಚ್ಚು ಮಂದಿ ಡೆಂಗ್ಯೂ ಜ್ವರಕ್ಕೆ ಬಲಿ
September 18, 2025
6:27 AM
by: The Rural Mirror ಸುದ್ದಿಜಾಲ
ಭಾರತದ ಜಿಡಿಪಿ 2026 ಹಣಕಾಸು ವರ್ಷದಲ್ಲಿ ಶೇ. 6.5 ರಷ್ಟು ಬೆಳೆಯುವ ನಿರೀಕ್ಷೆ
September 18, 2025
6:09 AM
by: The Rural Mirror ಸುದ್ದಿಜಾಲ
ಗ್ರಾಮೀಣ ಭಾಗದಲ್ಲಿ ಮೊಬೈಲ್‌ ಸಂಪರ್ಕ ಹೆಚ್ಚಿಸಲು ಅಂಚೆ ಇಲಾಖೆ ಹಾಗೂ ಬಿಎಸ್‌ಎನ್‌ಎಲ್‌ ಒಪ್ಪಂದ
September 18, 2025
5:59 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group