ಸುಳ್ಯದಲ್ಲಿ “ಮನೆಮನೆಯಲ್ಲಿ ಇಂಗುಗುಂಡಿ” ಆಂದೋಲನ

July 10, 2019
9:10 AM

ಸುಳ್ಯದಲ್ಲಿ ಇದೊಂದು ನೂತನ ಅಭಿಯಾನ. ಇದು ಪ್ರತಿಯೊಬ್ಬರೂ ಗಮನಿಸಿ ಮಾಡಲೇಬೇಕಾದ ಕಾರ್ಯ. ಇದು ಜಲಸಂರಕ್ಷಣೆಯ ಅಭಿಯಾನ. ನೀರು ಉಳಿದರೆ ಮಾತ್ರವೇ ಬದುಕು, ನಿರು ಉಳಿದರೆ ಮಾತ್ರವೇ ಕೃಷಿ. ನೀರು ಉಳಿದರೆ ಮಾತ್ರವೇ ಉಸಿರು. ಹೀಗಾಗಿ ಈಗ ಮಳೆಗಾಲದಲ್ಲಿ ಜಲಸಂರಕ್ಷಣೆಗೆ ಮನೆಮನೆಯಲ್ಲೂ ಇಂಗುಗುಂಡಿಯಾಗಬೇಕು ಎಂಬ ಉದ್ದೇಶದಿಂದ ಸುಳ್ಯದ ಸ್ನೇಹ ಶಾಲೆ ಅಭಿಯಾನ ಮಾಡುತ್ತಿದೆ. ಎಲ್ಲರ ಸಹಕಾರ ಇರಲಿ. ಸುಳ್ಯನ್ಯೂಸ್.ಕಾಂ ಸಹಕಾರ ನೀಡುತ್ತಿದೆ. ಅಭಿಯಾನದ ಜೊತೆ ಇರಲಿದೆ. ತಾಲೂಕಿನ ಎಲ್ಲಾ ಶಾಲೆಗಳಲ್ಲೂ ಈ ಅಭಿಯಾನ ನಡೆದು ಮಕ್ಕಳ ಮೂಲಕ ಮನೆಮನೆಗೆ ತಲುಪಲಿ. ಬನ್ನಿ ಕೈ ಜೋಡಿಸಿ….

Advertisement
Advertisement
Advertisement

ಸುಳ್ಯ: ಮನೆಮನೆಯಲ್ಲಿ  ಇಂಗುಗುಂಡಿ ರಚನೆಯಾಗಬೇಕು, ಈ ಮೂಲಕ ಜಲಸಂರಕ್ಷಣೆಯಾಗಬೇಕು. ಇದು ಅಭಿಯಾನ ಮುಂದೆ ಇದೊಂದು ಕ್ರಾಂತಿಯೇ ಆಗಬೇಕು, ದೇಶದಾದ್ಯಂತ ಜಲ ಸಂರಕ್ಷಣೆಯ ಬಗ್ಗೆ ಒಲವು ಹೆಚ್ಚಬೇಕು. ಇದು ಸ್ನೇಹ ಶಾಲೆಯ ಚಂದ್ರಶೇಖರ ದಾಮ್ಲೆ ಅವರ ಉದ್ದೇಶ.  ಈ ಹಿನ್ನೆಲೆಯಲ್ಲಿ  ಸುಳ್ಯ ತಾಲೂಕಿನ ಶಾಲೆಗಳಲ್ಲಿ  ಜಲಾಮೃತ ಯೋಜನೆಯ ಮೂಲಕ ಮನೆ ಮನೆಯಲ್ಲೂ ಇಂಗು ಗುಂಡಿ ರಚನೆ ಮಾಡಿದ ಅಭಿಯಾನ ಇಂದಿನಿಂದ ಆರಂಭವಾಗುತ್ತಿದೆ.

Advertisement

ಸುಳ್ಯದ ಸ್ನೇಹ ಶಾಲೆಯಲ್ಲಿ  ಈಗಾಗಲೇ ಇಂಗುಗುಂಡಿ ರಚನೆ ಮಾಡಿ ಯಶಸ್ಸು ಕಂಡಿದ್ದಾರೆ. ಇದಾದ ಬಳಿಕ ಮಕ್ಕಳ ಮೂಲಕ ಮನೆಮನೆಯಲ್ಲೂ ಇಂಗುಗುಂಡಿ ರಚನೆ ಮಾಡಿದ ಅದರ ಫೋಟೊ ಮಕ್ಕಳ ಮೂಲಕವೇ ತೆಗೆಸಿ ಶಾಲೆಯಲ್ಲಿ ಬಹುದೊಡ್ಡ ಬ್ಯಾನರ್ ಮೂಲಕ ಪ್ರದರ್ಶನ ಮಾಡಿದ್ದಾರೆ. ಇದೀಗ ಇಡೀ ತಾಲೂಕಿನಲ್ಲೀ ಜಲಸಂರಕ್ಷಣೆ ಮಕ್ಕಳ ಮೂಲಕ ಮನೆ ಮನೆಗೂ ತಲುಪಬೇಕು. ಕನಿಷ್ಟ ಒಂದು ಇಂಗುಗುಂಡಿ ಮಕ್ಕಳ ಮೂಲಕ ನಡೆದರೆ ತಾಲೂಕಿನಲ್ಲಿ ಸಂಗ್ರಹವಾಗುವ , ಭೂಮಿಗೆ ಸೇರುವ ನೀರು ಅಪಾರಪ್ರಮಾಣ. ಹೀಗಾಗಿ ಈ ಯೋಜನೆ ಇಂದಿನಿಂದ ಜಾರಿಯಾಗುತ್ತಿದೆ. ಈ ಯೋಜನೆಗೆ ಮುಂದೆ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದವರೆಗೂ ವಿಸ್ತಾರವಾಗಬೇಕು. ಸುಳ್ಯದಲ್ಲಿ ತೆಗೆದುಕೊಂಡ ಹೆಜ್ಜೆ ವಿಸ್ತಾರವಾಗಲಿ. ಬನ್ನಿ ಒಂದಾಗೋಣ. ಮುಂದೆ ಎಲ್ಲೆಲ್ಲಿ ಈ ಅಭಿಯಾನ ಇರುತ್ತದೆ ಎಂಬುದನ್ನೂ ತಿಳಿಸುತ್ತೇವೆ.

ಇಂದು ಸುಳ್ಯದ ಗಾಂಧಿನಗರ ಪ್ರೌಢಶಾಲೆಯಲ್ಲಿ  ಸಂಜೆ 3 ಗಂಟೆಗೆ ಈ ಅಭಿಯಾನ ಆರಂಭವಾಗಲಿದೆ. ಬನ್ನಿ ಜೊತೆಯಾಗೋಣ

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಕಾಡಾನೆಗಳ ಹಾವಳಿ ತಪ್ಪಿಸಲು ರೈಲ್ವೆ ಬ್ಯಾರಿಕೇಡ್
January 12, 2025
9:04 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror