ಸುಳ್ಯ: ಸುಳ್ಯ ರೋಟರಾಕ್ಟ್ ಕ್ಲಬ್ ಆಶ್ರಯದಲ್ಲಿ ರೋಟರಾಕ್ಟ್ ಜಿಲ್ಲಾ ಕ್ರೀಡಾಕೂಟ ಸುಳ್ಯ ಸರಕಾರಿ ಪ.ಪೂ ಕಾಲೇಜು ಮೈದಾನದಲ್ಲಿ ಡಿ.22 ರಂದು ನಡೆಯಿತು.
ಕ್ರೀಡಾಕೂಟವನ್ನು ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು. ಸುಳ್ಯ ರೋಟರಾಕ್ಟ್ ಕ್ಲಬ್ ಅಧ್ಯಕ್ಷ ಮೋಹಿತ್ ಹರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪುರುಷೋತ್ತಮ ಕೆ.ಜಿ, ಅಸಿಸ್ಟೆಂಟ್ ಗವರ್ನರ್ ಓಸ್ಕರ್ ಆನಂದ್, ರೋಟರಾಕ್ಟ್ ಡಿ.ಆರ್.ಆರ್ ಗಣೇಶ್ ಜಿ.ಟಿ. ಭಟ್ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕೇಶವ ರಾಮಕುಂಜ, ಪ್ರಭಾಕರನ್ ನಾಯರ್, ಪಿ.ವಿ.ಸುಬ್ರಮಣಿ ಉಪಸ್ಥಿತರಿದ್ದರು. ಕೆ.ಟಿ.ಭಾಗೀಶ್, ಸುರೇಶ್ ಕಾಮತ್, ಭವಾನಿಶಂಕರ್ ಕಲ್ಮಡ್ಕ ಸಹಕರಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಗೌರವ್ ಪ್ರಶಸ್ತಿ ಪಡೆದ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್‌ರವರನ್ನು ಸನ್ಮಾನಿಸಲಾಯಿತು. ಚೇತನ್ ಕಜೆಗದ್ದೆ ಸ್ವಾಗತಿಸಿ, ರೋಶನ್ ಕಾರ್ಯಕ್ರಮ ನಿರೂಪಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel