ಸುಳ್ಯ: ಸೆ. 1 ರಿಂದ ಸುಳ್ಯ ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೆ ಬರಲಿದೆ. ಈ ಹಿನ್ನಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಆ.31 ರಂದು ಶನಿವಾರ ಅಪರಾಹ್ನ 3 ಗಂಟೆಗೆ ಪ್ಲಾಸ್ಟಿಕ್ ಮುಕ್ತ ಸುಳ್ಯ ಜಾಗೃತಿ ಅಭಿಯಾನ ನಡೆಯಲಿದೆ. ಸುಳ್ಯ ಹಳೆಗೇಟ್ ಭಾರತ್ ಪೆಟ್ರೋಲ್ ಪಂಪ್ ಬಳಿಯಿಂದ ಗಾಂಧೀನಗರ ಪೆಟ್ರೋಲ್ ಪಂಪ್ ವರೆಗೆ ಸುಳ್ಯ ತಹಶೀಲ್ದಾರ್ ಕುಂಞಿ ಅಹಮ್ಮದ್ ನೇತೃತ್ವದಲ್ಲಿ ನಗರ ಪಂಚಾಯತ್ ನ ಸಹಭಾಗಿತ್ವದಲ್ಲಿ ಅಭಿಯಾನ ನಡೆಯಲಿದೆ.
ಪ್ಲಾಸ್ಟಿಕ್ ನಿಷೇಧದ ಹಿನ್ನಲೆಯಲ್ಲಿ ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್ ಮಾರಾಟ ಮಾಡದಂತೆ ಮತ್ತು ಸಾರ್ವಜನಿಕರು ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಜಾಥಾ ನಡೆಯಲಿದೆ. ಸುಳ್ಯ ವರ್ತಕರ ಸಂಘ,ಸ್ವಚ್ಚ ನಗರ ಸುಳ್ಯ ತಂಡ ,ಲಯನ್ಸ್ ಸಂಸ್ಥೆ, ರೋಟರಿ ಸಂಸ್ಥೆ,ಯುವ ಬ್ರಿಗೆಡ್ ಸುಳ್ಯ, ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳು,ನಗರ ಪಂಚಯತ್ ,ಶಿಕ್ಷಣ ಇಲಾಖೆ,ಪತ್ರಕರ್ತರ ಸಂಘ, ಎಸ್.ಕೆ.ಎಸ್.ಎಸ್.ಎಫ್ ವಿಕಾಯ ತಂಡ ಸುಳ್ಯ, ಎಸ್.ಎಸ್.ಎಫ್ ತಂಡ, ರೆಡ್ ಕ್ರಾಸ್ ಸಂಘ ಸುಳ್ಯ, ಹಾಗು ಇನ್ನಿತರ ಸಂಘ ಸಂಸ್ಥೆ ಗಳ ಸಹಯೋಗದಲ್ಲಿ ಈ ಆಂದೋಲನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.