ಬಾಳಿಲ: ಭಾರತ ಸರ್ಕಾರದ ” ಜನ ಔಷಧಿ” ಮತ್ತು ” ಆಯುಷ್ಮಾನ್ ಭಾರತ್ “ಆರೋಗ್ಯ ಯೋಜನೆಗಳ ಮಾಹಿತಿ ಕಾರ್ಯಾಗಾರ ಬಾಳಿಲದ ಆಶ್ರಮ ಶಾಲಾ ವಠಾರದಲ್ಲಿ ಸೆ.14 ಎಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಶ್ರೀ ಕೃಷ್ಣ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುತ್ತೂರಿನ ಖ್ಯಾತ ಆಯುರ್ವೇದ ತಜ್ಞ ,ಪುರುಷರ ಕಟ್ಟೆಯ ಪ್ರಸಾದ್ ಹೆಲ್ತ್ ಕೇರ್ ಸೆಂಟರ್ ನ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರು ಮಾಹಿತಿಗಳನ್ನು ನೀಡಲಿದ್ದಾರೆ.
ಕೇಂದ್ರ ಸರಕಾರದ ಜನಪರ ಆರೋಗ್ಯ ಯೋಜನೆಗಳಲ್ಲಿ “ಜನ ಔಷಧಿ* “ಮತ್ತು ” ಆಯುಷ್ಮಾನ್ ಭಾರತ್” ಯೋಜನೆಗಳು ಬಡವರ ಪಾಲಿನ ಬಂಧುವಾಗಿ ಪರಿಣಮಿಸಿದೆ.ಆದರೆ ಈ ಯೋಜನೆಯ ಸರಿಯಾದ ಮಾಹಿತಿ ಜನತೆಗೆ ಇಲ್ಲದೆ ಹಲವಾರು ತಪ್ಪು ಕಲ್ಪನೆಗಳು ಮೂಡುತ್ತಿದೆ ಹಾಗು ಮಾಹಿತಿಯ ಕೊರತೆಯಿಂದಾಗಿ ಜನರು ಆರೋಗ್ಯ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.ಇದೆಲ್ಲವನ್ನು ಮನಗಂಡು ಆರೋಗ್ಯ ಯೋಜನೆಗಳ ಸರಿಯಾದ ಮಾಹಿತಿಯನ್ನು ಒದಗಿಸಿ ಹೆಚ್ಚಿನ ಜನರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತಾಗಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.