ಸುಳ್ಯ:ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ನೇತೃತ್ವದಲ್ಲಿ ದಾನಿಗಳ ಆರ್ಥಿಕ ನೆರವಿನಿಂದ ಮತ್ತು ವಿವಿಧ ಯುವ ಸಂಘಟನೆಗಳ ಶ್ರಮದಾನದಿಂದ ಅಜ್ಜಾವರದಲ್ಲಿ ಬಡ ಕುಟುಂಬಕ್ಕೆ ನಿರ್ಮಿಸಿದ ಮನೆಯ ಹಾಸ್ತಾಂತರ ಕಾರ್ಯಕ್ರಮ ಸೆ.21 ರಂದು ನಡೆಯಲಿದೆ.
ಮನೆ ಇಲ್ಲದ ನಿರ್ಗತಿಕ ಕುಟುಂಬಗಳಿಗೆ ಮನೆ ನಿರ್ಮಿಸುವ ‘ಬೆಳಕು’ ಯೋಜನೆಯಡಿ ಅಜ್ಜಾವರದಲ್ಲಿ ನಿರ್ಮಿಸಿದ ಎರಡನೇ ಮನೆ ಇದಾಗಿದೆ. ಒಂದೂವರೆ ತಿಂಗಳಲ್ಲಿ ದಾನಿಗಳ ನೆರವಿನಿಂದ ಅಜ್ಜಾವರದಲ್ಲಿ ಎರಡು ಮನೆಯ ನಿರ್ಮಾಣ ಮಾಡಲಾಗಿದೆ. 18 ದಿನದಲ್ಲಿ ಸುಮಾರು ಎರಡು ಲಕ್ಷ ರೂ ವೆಚ್ಚದಲ್ಲಿ ಎರಡನೇ ಮನೆಯ ನಿರ್ಮಾಣ ಪೂರ್ತಿಯಾಗಿದೆ.
ಸೆ.21 ರಂದು ಪೂ.10.30 ಕ್ಕೆ ನಡೆಯುವ ಸಮಾರಂಭದಲ್ಲಿ ಶಾಸಕ ಎಸ್.ಅಂಗಾರ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಿದ್ದಾರೆ. ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ನದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel