ಸುಳ್ಯ: ಸುಳ್ಯ ಶಾಸಕ ಎಸ್. ಅಂಗಾರ ಅವರನ್ನು ಇಂದು ಮುಖ್ಯಮಂತ್ರಿಗಳ ‘ಎ’ ಟೀಂ ನಲ್ಲಿ ಪ್ರಮಾಣ ವಚನಕ್ಕೆ ಆಹ್ವಾನಿಸದಿದ್ದುದು ಸ್ಥಳೀಯವಾಗಿ ಬಿ.ಜೆ.ಪಿ. ಯ ಆತ್ಮ ಪ್ರತ್ಯಯಕ್ಕೆ ಆಘಾತ ನೀಡಿದಂತಾಗಿದೆ ಎಂದು ಚಂದ್ರಶೇಖರ ದಾಮ್ಲೆ ಪ್ರತಿಕ್ರಿಯೆ ನೀಡಿದ್ದಾರೆ.
ಕಾಯಾ ವಾಚಾ ಮನಸಾ ನೂರಕ್ಕೆ ನೂರು ಬಿಜೆಪಿ ಧ್ಯೇಯಾನುಯಾಯಿಯಾಗಿದ್ದ ಅಂಗಾರ ಅವರ ಬಗ್ಗೆ ಅನುಮಾನ ಇದ್ದವರು ಒಂದು ಅವಕಾಶ ಕೊಟ್ಟು ನೋಡಬೇಕಿತ್ತು. ಅವರು ಸೈಲೆಂಟ್ ವರ್ಕರ್ ಎಂಬ ಪ್ರಸಿದ್ಧಿ ಇರುವವರು. ಅದನ್ನು ಅವರು ಮಂತ್ರಿಯಾಗಿಯೂ ಮಾಡಿ ತೋರಿಸುತ್ತಿದ್ದರು. ಹಾಗಾಗಿ ಇನ್ನೊಂದು ಸುತ್ತಿನಲ್ಲಿ ಅವರನ್ನು ಪರಿಗಣಿಸ ಬೇಕೆಂಬುದು ಸುಳ್ಯದ ನಾಗರಿಕನಾಗಿ ನನ್ನ ಅಭಿಲಾಷೆ ಎಂದು ಚಂದ್ರಶೇಖರ ದಾಮ್ಲೆ ಸುಳ್ಯನ್ಯೂಸ್.ಕಾಂ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel