ಮಡಿಕೇರಿ: ಸೊಸೆಯ ಕಿರುಕುಳಕ್ಕೆ ಮಗನ ಸ್ಥಿತಿ ನೆನೆದು ಹೆತ್ತಮ್ಮ ನೇಣಿಗೆ ಕೊರಳೊಡ್ಡಿದ್ದಾರೆ. ಇದರಿಂದ ಮನನೊಂದ ಮಗನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೃತ್ತಿಯಲ್ಲಿ ಆಟೋ ಚಾಲಕನಾದ ಹರೀಶ್ ಹಾಗೂ ಆತನ ತಾಯಿ ತಂಗಮ್ಮ ಮೃತರಾದವರು.
ನಳಿನಿ ಎಂಬಾಕೆಯ ಜೊತೆ ಒಂಬತ್ತು ತಿಂಗಳ ಹಿಂದೆ ಹರೀಶ್‌ಗೆ ಮದುವೆ ಆಗಿತ್ತು. ಡಿವೋರ್ಸ್‌ಗೆ ಅಪ್ಲೈ ಮಾಡಿ ಜೀವನಾಂಶ ಕೇಳಲು ಶುರು ಮಾಡಿ ಪೀಡಿಸುತ್ತಿದ್ದಳು. ಜೀವನಾಂಶ ಕೊಟ್ಟಿಲ್ಲ ಅಂದ್ರೆ ನಿಮ್ಮಿಬ್ಬರನ್ನೂ ಜೈಲಿಗೆ ಕಳುಹಿಸುತ್ತೇನೆ ಎಂದು ಸೊಸೆ ಗಂಡ ಹಾಗೂ ಅತ್ತೆಗೆ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಳು. ಒಂದೆರಡು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲನ್ನ ಹತ್ತಿಸಿದ್ದ ನಳಿನಿಗೆ ಹೆದರಿ ಮರ್ಯಾದೆಗೆ ಅಂಜಿದ ತಾಯಿ ಹಾಗೂ ಮಗ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel