ಸ್ವಾತಂತ್ರ್ಯೋತ್ಸವದ ಶುಭಾಶಯಗಳು | ಭಾಷಣಗಳಿಗೆ ಸೀಮಿತವಾಗದಿರಲಿ ನಮ್ಮ ಉತ್ಸಾಹ…..

August 15, 2020
9:13 AM
ಆಗಸ್ಟ್ 15 ಎಂದರೆ ದೇಶಕ್ಕೇ ಸಂಭ್ರಮ.  ಪ್ರತಿ  ಬಾರೀ  ಸ್ವಾತಂತ್ರ್ಯ ದಿನವೆಂದರೆ  ಶಾಲಾ ಮಕ್ಕಳಿಗೆ  ಉತ್ಸಾಹ. ಹಲವು ಚಟುವಟಿಕೆಗಳಿಗೆ  , ಸಂಭ್ರಮಗಳಿಗೆ  ವೇದಿಕೆ.
ಮಕ್ಕಳಿಗೆ  ವಿವಿಧ  ದೇಶ ನಾಯಕರ ವೇಷ ಹಾಕಿ  ಗಣ್ಯರಿಂದ ಧ್ವಜಾರೋಹಣ, ಭಾಷಣ, ಊರಿನುದ್ದಕ್ಕೂ ಮಕ್ಕಳ  ಮೆರವಣಿಗೆ
ಆದರೆ  ಈ ಬಾರಿ ಸಾರ್ವಜನಿಕ ಕಾರ್ಯಕ್ರಮ ಗಳಿಗೆ ನಿರ್ಬಂಧ. ಶಾಲೆಗಳ ಕಾರ್ಯಕ್ರಮಗಳು ಅಧ್ಯಾಪಕರು ಹಾಗೂ ಸಹ ಶಿಕ್ಷಕರಿಗೇ ಸೀಮಿತ.   ಸ್ವಾತಂತ್ರ್ಯ ದಿನಾಚರಣೆಯನ್ನು  ಇಷ್ಟು ವರ್ಷಗಳ ಇತಿಹಾಸದಲ್ಲಿ  ಬಹುಶಃ ಮೊದಲ ಬಾರಿಗೆ ಸರಳ ಹಾಗೂ  ಸೀಮಿತ ರೀತಿಯಲ್ಲಿ  ಆಚರಿಸಲಾಗುತ್ತಿದೆ.
ಎಷ್ಟೋ ವರುಷಗಳ ಹೋರಾಟ , ತ್ಯಾಗದ ಫಲ ಬ್ರಿಟಿಷ್ ಆಡಳಿತದಿಂದ ಬಿಡುಗಡೆ. ಸ್ವಾತಂತ್ರ್ಯದ  ಸವಿ ಭಾರತೀಯರದಾಯಿತು. ಸ್ವಾತಂತ್ರ್ಯ ದೊಂದಿಗೆ ಹಲವು ಸಮಸ್ಯೆಗಳೂ  ಸೃಷ್ಟಿಯಾದವು. ಅವುಗಳನ್ನೇಲ್ಲ ಪರಿಹರಿಸುವಲ್ಲಿ ಗಟ್ಟಿ ಮನಸಿನ  ನಾಯಕರುಗಳ ತ್ಯಾಗ,  ಬಲಿದಾನವನ್ನು ಎಂದಿಗೂ ಮರೆಯುವಂತಿಲ್ಲ.  ಸ್ವಾರ್ಥ ರಹಿತರಾಗಿ ಹೋರಾಡಿದ ನೇತಾಜಿಯವರು, ಪಟೇಲರು, ಲಾಲ್ ಬಹಾದ್ದೂರ್ ಶಾಸ್ತ್ರಿ ಯವರು  ಒಬ್ಬರೇ ಇಬ್ಬರೇ ಹಲವು ನಾಯಕರು, ಇವರೊಂದಿಗೆ ಎಷ್ಟೋ ಜನ ಅನಾಮಧೇಯ ಹೋರಾಟಗಾರರು. ಹೆಸರು, ಪದವಿಗಿಂತ ದೇಶವೇ ದೊಡ್ಡದೆಂದು  ಹೋರಾಡಿದವರು. 
ಭಾರತವೀಗ  ಒಳ ಹೊರಗಿನ ಶತ್ರು ಗಳಿಂದ ಭೀತಿಯನ್ನೆದುರಿಸುತ್ತಿದೆ. ಹೊರಗಿನ ಶತ್ರುಗಳನ್ನಾದರು ಬಡಿದಟ್ಟ ಬಹುದು. ಒಳಗಿನ ಶತ್ರುಗಳನ್ನೇನು ಮಾಡೋಣ. ?. ಒಂದೆಡೆ  ಚೈನಾ ಕುಮ್ಮಕ್ಕಿನಿಂದ ತೊಂದರೆ ಕೊಡುತ್ತಿರುವ ಪಾಕಿಸ್ತಾನ, ಮತ್ತೊಂದೆಡೆ ಸ್ವತಃ ಚೈನಾ. ಎಲ್ಲೆಲ್ಲಿ ಸಾದ್ಯವೋ ಅಲ್ಲೆಲ್ಲಾ ಕಡೆ ಮೂಗು ತೂರಿಸುತ್ತಿರುವ ಚೈನಾ ಇಡೀ ಜಗತ್ತನ್ನೇ ತನ್ನ ಹಿಡಿತಕ್ಕೆ ತೆಗೆದು‌ ಕೊಳ್ಳ ಬಯಸುತ್ತದೆ. ಆದರೆ ನಮ್ಮ  ಪ್ರಧಾನಿ ಮೋದಿಯವರು ಅಷ್ಟು ಸುಲಭವಾಗಿ  ದೇಶವನ್ನು ಬಿಟ್ಟು ಕೊಡುವವರಲ್ಲ.  ಒಂದೆಡೆ ಶತ್ರು ರಾಷ್ಟ್ರಗಳು , ಮತ್ತೊಂದೆಡೆ ಕೊರೊನಾ ವೈರಸ್‌ ದೇಶವನ್ನು ಕಂಗಾಲು ಮಾಡಲು ಹವಣಿಸುತ್ತಿವೆ.  ಮಳೆ ಜೋರಾಗಿ ಸುರಿಯುತ್ತಾ ಸಮಸ್ಯೆಗಳನ್ನೇ  ಸೃಷ್ಟಿಸಲು ಹವಣಿಸಿದಂತಿದೆ.   ಈ ಸಂಧಿಗ್ದ ಸಮಯದಲ್ಲೂ  ಒಂದು ಉತ್ತಮ ಹೆಜ್ಜೆ ಇಟ್ಟಾಗಿದೆ. ದೇಶದ ಅಭಿವೃದ್ಧಿಯ ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬನೆಯ ತ್ತ   ದೃಷ್ಟಿ ಬೀರಿಯಾಗಿದೆ. ಈ ಬಾರಿ ರಕ್ಷಣಾ     ಕ್ಷೇತ್ರದಲ್ಲಿ ಕೂಡ ಅಗತ್ಯ ಸಾಧನಗಳ ತಯಾರಿಕೆಯನ್ನು ನಾವೇ ಮಾಡೋಣವೆಂದು ರಕ್ಷಣಾ ಮಂತ್ರಿಯವರು ಘೋಷಣೆಯನ್ನು ಮಾಡಿದ್ದಾರೆ. ಇದಕ್ಕೆ ಅಗತ್ಯ ಮಾರ್ಗದರ್ಶನ ಪಡೆಯಲಿದ್ದಾರೆ.
ನಮ್ಮ ದೇಶ ಮೇಡ್ ಇನ್ ಇಂಡಿಯಾ  ಹೆಸರಿನಲ್ಲಿ ಪ್ರಜ್ವಲಿಸುವ ವಿಶ್ವಾಸ ಎಲ್ಲರಲ್ಲಿದೆ. ಎಣಿಸಲಾಗದ ಬದಲಾವಣೆಯನ್ನು ಪ್ರಪಂಚದೆಲ್ಲೆಡೆ ಕೊರೊನಾ ‌   ಈಗಾಗಲೇ ಮಾಡಿಯಾಗಿದೆ. ಅವಲಂಬಲನೆಯಿಂದ ಸ್ವಾವಲಂಬನೆಯ ಪಾಠ ಕೊರೊನಾ ಕಲಿಸಿದೆ. ಈ ವರ್ಷ ಬದಲಾದ ಜೀವನ ರೀತಿ , ಜೀವನ ನೀತಿ , ನಿಯಮಗಳನ್ನು   ಅಳವಡಿಸಿ ಕೊಳ್ಳಬೇಕಾಗಿದೆ.  ಬದಲಾದ ಸಂದರ್ಭಕ್ಕೆ‌ ಹೊಂದಿಕೊಳ್ಳಬೇಕಾಗಿದೆ.
ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಬದುಕು ಪುರಾಣ | ವಿಶ್ವದ ಮೊದಲ ಪತ್ರಕರ್ತ!
May 18, 2025
7:07 AM
by: ನಾ.ಕಾರಂತ ಪೆರಾಜೆ
58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ವಾಯುಭಾರ ಕುಸಿತ | ಕೇರಳದಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ | ಆರು ಜಿಲ್ಲೆಗಳಲ್ಲಿ ಎಲ್ಲೋ ಎಲರ್ಟ್‌ | ರಾಜ್ಯದಲ್ಲೂ ಮಳೆ ಸಾಧ್ಯತೆ |
May 17, 2025
8:27 PM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಹಲಸಿನ ಹಣ್ಣಿನ ಜಾಮ್
May 17, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group