ಹಚ್ಚ ಹಸಿರಿನ ನೆನಪುಗಳು

May 25, 2019
9:00 AM
 ಗುಳಿಗೆನ್ನೆಯ ಗೆಳೆಯ,
 ನನ್ನೊಳಗೆ ನೀನಿದ್ದೆ ಎಂದು ತಿಳಿಯುವಾಗ ಬಲು ತಡವಾಯಿತು.
ಕಾರಿಡಾರಲ್ಲಿ ನಿಂತಾಗ,ನನಗಾಗಿ
ನಗು ಚೆಲ್ಲುತ್ತಿದ್ದಾಗ ,ನಿನ್ನ ಮೊಗದ ಕಾಂತಿ,
ಸಾವಿರ ವ್ಯಾಟ್ ದೀಪದಂತೆ ಬೆಳಗುತ್ತಿತ್ತು.
ಕತ್ತಲೆಯ ಭಯವ ನಿನ್ನೊಂದಿಗೆ ಹಂಚಿಕೊಂಡಾಗ, ನೀ‌ ನಿನ್ನ
ಕೆಲಸವ ಬಿಟ್ಟು ನನಗಾಗಿ ನಿಂತಾಗ
ನಿನ್ನ ಹೃದಯ ಮಂದಿರದಲ್ಲಿ ನನಗಾಗಿ
ಸ್ನೇಹದ ಸಿಂಹಾಸನವನ್ನೇ ಮೀಸಲಿಟ್ಟಿರುವೆ ಎಂದು ಭಾವಿಸಿದ್ದೆ!
ಮರದ ಮೇಲೆ ಮಂಗಗಳನ್ನು ಕಂಡಾಗಲೆಲ್ಲಾ ನಿನ್ನ ತುಂಟಾಟವ ಅವುಗಳಲ್ಲಿ‌ ಹುಡುಕುತ್ತಿದ್ದೆ..
ಸ್ಪೆಷಲ್ ಕ್ಲಾಸಲ್ಲಿ ಇದ್ದಾಗ ನಿನ್ನ
ವೀಡಿಯೋ ಕಾಲ್ ಗಳು ಹೃದಯದ
ಬಡಿತವನ್ನು ಹೆಚ್ಚಿಸುತ್ತಿದ್ದರೂ,ನಿನ್ನ
ಸ್ನೇಹಕ್ಕಾಗಿ ಸದಾ ಮನಸ್ಸು ಹಾತೊರೆಯುತ್ತಿತ್ತು….
ಇಂದಿನ ನಿನ್ನ ಬದಲಾವಣೆ ಗೆ ಕಾರಣ ತಿಳಿದಿಲ್ಲ, ಆದರೂ ಅರಿವಾದದ್ದೂ ಒಂದೇ
“ನೀನೊಬ್ಬ ಒಳ್ಳೆಯ ಹುಡುಗ”
ತಪ್ಪು ನನ್ನಿಂದಲೇ ಆಗಿರಬೇಕು….!
ತುರ್ತಿಗೆ ಇರಲಿ  ಅಂತ
ಅವತ್ತು ನಿನ್ನ ನಂಬರ್ ಪಡಕೊಂಡಾಗ ನಾನು ವಿಶೇಷವೆಂದು ಪರಿಗಣಿಸಲಿಲ್ಲ..
ನಿನಗೆ ನನ್ನ ಸ್ನೇಹ ಬೇಡವೆಂದು ಅರಿವಾದದ್ದು ಮೊನ್ನೆ…
ಮೆಸೇಜ್ ನೋಡಿದಾಗಲೂ ರಿಪ್ಲೈ ಇಲ್ಲದಾಗ!
ಶಾಂತ ಸಾಗರದಲ್ಲಿ ಸುನಾಮಿಯೇ ಎದ್ದಂತೆ..! ನನ್ನ ಹೃದಯ ಚೂರಾಯಿತು..
ಎಷ್ಟೋ ಬಾರಿ ನಿನ್ನ ಬೈಕ್ ನೊಡನೆ ಮಾತನಾಡುತಿದ್ದ ನನ್ನ ಮನ ನನ್ನೇ ನೋಡಿ ನಗುತ್ತಿದೆ…
ಮೊಬೈಲ್ ಪುಟದಲ್ಲೇ ಹೋದ ಆ ಜಾಲಿರೈಡ್,ನಡುರಾತ್ರಿಯ ವಾಕಿಂಗ್ ಚಂದ್ರನ ಬೆಳದಿಂಗಳ ನೆನಪು ಪದೇ ಪದೇ ಘಾಸಿಗೊಳಿಸುತ್ತಿದೆ…
ಗ್ರೌಂಡ್ ,ಪೆಟ್ರೋಲ್ ಪಂಪ್ ಕಾರಿಡಾರ್ ಮರದಮೇಲಿರುವ ಮಂಗ ನನ್ನನ್ನು ಅಣಕಿಸುತ್ತಿದೆ….
I AM UNLUCKY! ನಿನ್ನೊಳಗಿನ ಭಾವಗಳ ಗೌರವಿಸುವೆ …. ಬೇಕಿಲ್ಲ ಬೇರೇನು
ಮುಂದೊಮ್ಮೆ ನಿನ್ನ ಮೊಮ್ಮಕ್ಕಳನ್ನು
ಕೈ‌ ಹಿಡಿದು ನೀ ನಡೆಸುತ್ತಿರುವಾಗ
ಆಕಸ್ಮಿಕವಾಗಿ ನೀನು‌ನಾನು
ಎದುರುಬದುರಾದರೆ, ನನಗಾಗಿ
ಮತ್ತೊಮ್ಮೆ ಪರಿಚಯದ ನಗುವ ಬೀರು
ಸಾವಿರ ವ್ಯಾಟ್ ದೀಪದ ಕಾಂತಿಯ‌ ಕಂಡು ಕಣ್ಣುಮುಚ್ಚಿ ಬಿಡುವೆ…..
Advertisement
Advertisement

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ | ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ |
May 1, 2024
4:34 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror