ಹರಟೆ ವಿಷಯ ಹರಟೆಯೇ ಆಗದಿರಲಿ

July 13, 2019
7:00 PM

ಪುತ್ತೂರು: ಮಾತುಗಾರಿಕೆ ಎಂಬುದು ಒಂದು ಕಲೆ. ಈ ಕಲೆಯ ಮುಂದುವರಿದ ಭಾಗವೇ ಹರಟೆ. ಆದರೆ ಹರಟೆ ಎಂದರೆ ಕೇವಲ ಹಾಸ್ಯವಲ್ಲ. ಬದಲಾಗಿ ಅಲ್ಲಿ ಒಂದು ವಿಷಯದ ಕುರಿತು ಅರ್ಥಗರ್ಭಿತವಾದ ಚರ್ಚೆಯ ಮುಖಾಂತರ ವಿಮರ್ಶಿಸುವುದೇ ಹರಟೆ. ವಿಷಯ ರಹಿತವಾಗಿ ಮಾತನಾಡುವುದು ಹರಟೆಯಾಗುವುದಿಲ್ಲ. ಹರಟೆಯ ಮುಖೇನ ವಿಷಯದ ಕುರಿತ ಜ್ಞಾನವನ್ನು ವ್ಯಕ್ತಿಗೆ ಅಥವಾ ಸಮಾಜಕ್ಕೆ ನೀಡಿದಂತಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ಪದವಿ ವಿಭಾಗದ ಉಪನ್ಯಾಸಕಿ ರವಿಕಲಾ ಅಭಿಪ್ರಾಯಪಟ್ಟರು.

Advertisement
Advertisement

ಅವರು ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ “ಮಣಿಕರ್ಣಿಕಾ” ಮಾತುಗಾರರ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ “ಮಿರ್ಚಿ ಮಂಡಕ್ಕಿ ಖಡಕ್ ಚಾಯ್” ವಿಷಯದ ಕುರಿತು ಮಾತನಾಡಿದರು. ಹರಟೆಯಲ್ಲಿ ಒಂದು ವಿಷಯದ ಕುರಿತು ನಗೆ ಚಟಾಕಿಯ ಮೂಲಕ ವಿಮರ್ಶೆ ನಡೆಸುವುದು. ಇದರಲ್ಲಿ ಔಪಚಾರಿಕ ಹಾಗೂ ಅನೌಪಚಾರಿಕ ಎಂಬುದಾಗಿ ಹರಟೆಯನ್ನು ವಿಂಗಡಿಸಬಹುದು. ವಿದ್ಯಾರ್ಥಿಗಳು ಮಾಡುವ ಚರ್ಚೆಗಳು ಸಾಮಾನ್ಯವಾಗಿ ಅನೌಪಚಾರಿಕವಾಗಿರುತ್ತದೆ. ಅದೇ ರೀತಿ ಮೊಬೈಲ್ ಮುಖೇನ ಇಂದು ವ್ಯಾಟ್ಸಪ್ ಮೂಲಕ ಮಾತನಾಡುವುದೂ ಒಂದು ರೀತಿಯ ಹರಟೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ದೊರೆತಿರುವ ಈ ವೇದಿಕೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಅಲ್ಲದೆ ವ್ಯಕ್ತಿತ್ವ ವಿಕಸನ ಆಗುವ ದೃಷ್ಟಿಯಿಂದ ಇದು ಸಹಕಾರಿ ಎಂದರು.
ತೃತೀಯ ಬಿಎ ವಿದ್ಯಾರ್ಥಿ ರಾಮಕಿಶನ್ ಕೆ.ವಿ. ವಾರದ ಮಾತುಗಾರ ಬಹುಮಾನ ಪಡೆದರು. ತೃತೀಯ ಬಿಎ ವಿದ್ಯಾರ್ಥಿಗಳು ವಾರದ ಮಾತುಗಾರರ ತಂಡ ಎಂಬ ಬಹುಮಾನ ಪಡೆಯಿತು.
ಪದವಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ, ವೇದಿಕೆಯ ಕಾರ್ಯದರ್ಶಿ ತೇಜಶ್ರೀ ವೆಂಕಟೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧನ್ಯಾ ವಂದಿಸಿದರು. ಕಾರ್ಯಕ್ರಮವನ್ನು ಜಯಶ್ರೀ ಎ. ನಿರೂಪಿಸಿದರು.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ
ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror