ಸುಳ್ಯ: ಸುಳ್ಯ ಕಾಂತಮಂಗಲಕ್ಕೆ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಇಲ್ಲಿನ ಹೋಟೆಲೊಂದರಲ್ಲಿ ಚಾ ಸವಿದರು.
ಬಿಜೆಪಿ ಮುಖಂಡರೊಂದಿಗೆ ಚಹಾ ಮತ್ತು ನೀರುಳ್ಳಿ ಬಜೆಯ ರುಚಿ ಸವಿದ ಅವರು ಹೋಟೆಲ್ ನವರೊಂದಿಗೆ ಮತ್ತು ಸ್ಥಳೀಯರ ಜೊತೆ ಉಭಯ ಕುಶಲೋಪರಿ ನಡೆಸಿದರು. ಸಂಸದರ ಜೊತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸೆಲ್ಫಿ ತೆಗೆಸಿಕೊಂಡರು.
ತೃತೀಯ ಬಾರಿಗೆ ಲೋಕಸಭಾ ಸದಸ್ಯನಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಕಾಂತಮಂಗಲಕ್ಕೆ ಆಗಮಿಸಿದ ನಳಿನ್ ಕುಮಾರ್ ರಿಗೆ ಸ್ಥಳೀಯರು ಸ್ವಾಗತ ನೀಡಿದರು.
ಶಾಸಕ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ.ಸದಸ್ಯರಾದ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ,ಪ್ರಮುಖರಾದ ಸುರೇಶ್ ಕಣೆಮರಡ್ಕ, ನವೀನ್ ರೈ ಮೇನಾಲ, ಎ.ವಿ.ತೀರ್ಥರಾಮ, ಸುಬೋದ್ ಶೆಟ್ಟಿ ಮೇನಾಲ, ಭಾಗೀರಥಿ ಮುರುಳ್ಯ, ಮತ್ತಿತರರು ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel