ಹಸಿರಿನ ಪಾಠ…..

August 18, 2019
1:00 PM
ಒಂದು ಪರಿಸರಕ್ಕೆ ಸಂಬಂದಿಸಿದ ಕಾರ್ಯಕ್ರಮ. ಅಲ್ಲಿ ಎರಡು ವಿಭಾಗಗಳನ್ನು ರಚಿಸಿದ್ದರು. ಸಮಾಜದ ವಿವಿಧ ಸ್ತರಗಳಿಂದ ಆಯ್ದ ವ್ಯಕ್ತಿಗಳು ಅಲ್ಲಿ ದ್ದರು. ಎಲ್ಲರನ್ನೂ ಒಂದು ಕೋಣೆಗೆ ಸ್ವಾಗತಿಸಿ, ಮುಂದಿನ ಕಾರ್ಯಕ್ರಮಗಳನ್ನು ವಿವರಿಸಿದರು. ನಾವೊಂದು ಆಟ ಆಡೋಣ. ನಿಮ್ಮ ಮುಂದೆ ಡ್ರಾಯಿಂಗ್ ಶೀಟ್ ಇದೆ, ಹಾಗೂ  ಬಾಕ್ಸ್ ನಲ್ಲಿ ವಿವಿಧ ಬಣ್ಣದ ಪೆನ್ಸಿಲ್ ಗಳಿವೆ. ಡ್ರಾಯಿಂಗ್ ಶೀಟ್ ನ ಒಂದು ಬದಿಯಲ್ಲಿ ಪರಿಸರದ ಕುರಿತು ಚಿತ್ರ ಬರೆದು ಬಣ್ಣ ಹಾಕಿ. ಬಣ್ಣಗಳನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸಿ , ಮುಂದಿನ ಬ್ಯಾಚ್ ಗೆ ಕೂಡ ಬಣ್ಣದ ಅಗತ್ಯವಿದೆ  . ಹಿರಿಯರು ಚಿತ್ರ ಬರೆದದ್ದೇ ಬರೆದದ್ದು. ಅವರವರ ದೃಷ್ಟಿಯಿಂದ ಸುಂದರವಾದ ಚಿತ್ರಗಳನ್ನು ರಚಿಸಿದರು. ರಚಿಸಿದ ಚಿತ್ರಗಳನ್ನು ಆಯಾ ಜಾಗದಲ್ಲೇ ಇಡುವಂತೆ  ಸೂಚಿಸಿ ಇನ್ನೊಂದು ಕೋಣೆಗೆ ಅವರನ್ನು ಕಳುಹಿಸಲಾಯಿತು.
ಮುಂದಿನ ಬ್ಯಾಚ್ ನ್ನು ಕರೆಯಲಾಯಿತು. ಪುಟ್ಟ ಪುಟ್ಟ ಮಕ್ಕಳು ಉತ್ಸಾಹದಿಂದ ‌ಬಂದರು. ಎಲ್ಲಾ ಮಕ್ಕಳಿಗೂ ಅದೇ ಡ್ರಾಯಿಂಗ್ ಶೀಟ್ ನ ಇನ್ನೊಂದು ಬದಿಯಲ್ಲಿ ಚಿತ್ರಗಳನ್ನು ರಚಿಸಲು ಹೇಳಲಾಯಿತು. ಆಮೇಲೆ ‌ಬಾಕ್ಸ್ ನಿಂದ ಬಣ್ಣಗಳನ್ನು ಬಳಸುವಂತೆ ಸೂಚಿಸಿದರು. ‌ಮಕ್ಕಳು ತಮ್ಮ ಕಲ್ಪನೆಗೆ ಬಣ್ಣ ಹಚ್ಚಿದವು. ಆದರೆ ಅಲ್ಲಿ ಉಳಿದಿದ್ದ‌ಬಣ್ಣಗಳನ್ನಷ್ಟೇ ಬಳಸುವ ಅವಕಾಶ!
ಆಮೇಲೆ ಎರಡೂ ಬ್ಯಾಚ್ ಗಳನ್ನು ಕರೆದು ಚಿತ್ರಗಳನ್ನು  ಎಲ್ಲರಿಗೂ ತೋರಿಸಲಾಯಿತು. ಮೊದಲ ಬ್ಯಾಚ್ ನ ಚಿತ್ರಗಳು ಹಸಿರಿನಿಂದ ತುಂಬಿದ್ದವು. ಕಣ್ಣು ಕುಕ್ಕುವಷ್ಟು ಹಸಿರೇ ತುಂಬಿತ್ತು. ಎರಡನೇ ಬ್ಯಾಚ್ ನ  ಚಿತ್ರಗಳನ್ನು ತೋರಿಸ ಲಾಯಿತು , ಅದರಲ್ಲೇನಿದೆ? ಮರಗಿಡಗಳೆಲ್ಲ ಕಪ್ಪು, ಕಂದು ನೆರಳೆ ಬಣ್ಣಗಳೇ ತುಂಬಿದ್ದವು. ಆ ಚಿತ್ರ ಗಳನ್ನು ನೋಡಿ ಹಿರಿಯರು ಹೀಯಾಳಿಸಿ ನಗಲಾರಂಭಿಸಿದರು. ಯಾಕೆ ನಗುತ್ತಿದ್ದೀರಾ ಎಂದು ಸಂಘಟಕರು ಕೇಳಿದಾಗ, “ಇದೂ ಒಂದು ಚಿತ್ರವಾ ?  ಪ್ರಕೃತಿ ಹೇಗಿದೆಯೆಂಬ ಕಲ್ಪನೆಯೂ ಇವರಿಗಿಲ್ಲ  ” ಎಂಬ ಉತ್ತರ ದೊರೆಯಿತು. ಹೌದು ನೀವು ಉಳಿಸಿದರಲ್ಲವೇ ಅವರು ಬಳಸುವುದು .!!!?
 ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗ ಬೇಕಾದರೆ ಸ್ವಲ್ಪ ಸಮಯ ಹಿಡಿಯಿತು. ಒಂದೇ ಡ್ರಾಯಿಂಗ್ ಶೀಟ್ ನ ಎರಡೂ ಬದಿಗಳಲ್ಲಿ ಚಿತ್ರಗಳನ್ನು ಬಿಡಿಸಲಾಗಿತ್ತು. ಒಂದೆಡೆ ಹಿರಿಯರು ಮತ್ತೊಂದು ಬದಿಯಲ್ಲಿ ಕಿರಿಯರು. ವ್ಯತ್ಯಾಸ ಒಂದೇ. ಹಸಿರಿನ ಬಣ್ಣವನ್ನು   ಹಿರಿಯರು ಜಾಸ್ತಿ ಬಳಸಿದ್ದರಿಂದ ಪೆನ್ಸಿಲ್ ನ ಸಣ್ಣ ತುಂಡುಗಳು ಉಳಿದಿತ್ತು. ಅದನ್ನಷ್ಟೇ ಬಳಸಿಕೊಳ್ಳುವ ಅವಕಾಶವಿತ್ತು. ಹಾಗಾಗಿ ಚಿತ್ರ ಗಳು  ಈ ಬಣ್ಣಗಳಲ್ಲಿವೆ.
ಈ ಸಣ್ಣ ಕಿರುಚಿತ್ರ ಪದೇ ಪದೇ ಫೇಸ್ ಬುಕ್ ನಲ್ಲಿ ಬಂದು ನನ್ನ ತಲೆ ಕೆಡಿಸುತ್ತಿತ್ತು. ಯಾರಲ್ಲಾದರು ಹಂಚಿಕೊಳ್ಳ ಬೇಕೆನಿಸಿತು.ಅಗತ್ಯಕ್ಕಿಂತ  ಹೆಚ್ಚಾಗಿ ನಾವು ಪರಿಸರದ ಉಪಯೋಗ ಮಾಡುತ್ತಿದ್ದೇವೆ. ಮುಂದಿನ ಜನಾಂಗಕ್ಕೇನೂ ಉಳಿಸದಂತೆ ಬಳಸುತ್ತಿದ್ದೇವೆ. ಹೀಗೆಯೇ ಆದರೆ  ನಾವೇನು ಉತ್ತರ ಕೊಡಲು ಸಾಧ್ಯ?

Advertisement
Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಸಾಮಾನ್ಯ ಜನರ ಗ್ರಹಿಕೆಗೆ ಸಿಲುಕದ ವಿದ್ಯಮಾನಗಳು
July 23, 2025
8:56 PM
by: ಡಾ.ಚಂದ್ರಶೇಖರ ದಾಮ್ಲೆ
ಸಸ್ಯ ಪರಿಚಯ – ಕಿರಾತಕಡ್ಡಿ | ಮನೆಯಲ್ಲಿರಬೇಕಾದ ಗಿಡಗಳಲ್ಲಿ ಇದೂ ಒಂದು |
July 22, 2025
2:26 PM
by: ಜಯಲಕ್ಷ್ಮಿ ದಾಮ್ಲೆ
ಅರ್ಥವಾಗದ ಮಳೆಯ ನಾಡಿಬಡಿತ…….! | ಅಡುಗೆ ಮನೆಯ ಕಿಟಿಕಿಯಾಚೆಗಿನ ನೋಟ..
July 22, 2025
1:18 PM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

You cannot copy content of this page - Copyright -The Rural Mirror

Join Our Group