ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನ

August 28, 2019
11:30 AM
ಪುತ್ತೂರು: ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳ  ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನ ಪುತ್ತೂರಿನ  ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳ ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನವನ್ನು ನಡೆಯಿತು.
ಹಿಂದೂ ಮುಖಂಡ ಜನಾರ್ದನ ಗೌಡ  ಮಾತನಾಡಿ ದೇಶದ ಅಖಂಡತೆಯಲ್ಲಿ ಅಡೆತಡೆಯಾಗಿದ್ದ ಮತ್ತು ವಿಭಜನೆಯ ಬೀಜವನ್ನು ಬಿತ್ತಿದ ಜಮ್ಮೂ-ಕಾಶ್ಮೀರದ ‘ನಿಯಮ 370′ ಮತ್ತು ’35-ಅ’ ರದ್ದುಪಡಿಸುವ ಐತಿಹಾಸಿಕ ನಿರ್ಣಯವನ್ನು ಕೇಂದ್ರದ ಭಾಜಪ ಸರಕಾರವು ತೆಗೆದುಕೊಂಡಿದೆ.ಇದಕ್ಕಾಗಿ ಅಭಿನಂದನೆಗಳು. ಕನ್ನಡ ವಿರೋಧಿ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಬದಲಾಯಿಸಿ  ಶ್ರೀ ಕೃಷ್ಣರಾಜ ಒಡೆಯರ್  ಹೆಸರನ್ನು ಇಡಬೇಕು ಎಂದು ಒತ್ತಾಯಿಸಿದರು. ಹಿಂದೂ ಸಮಾಜದ ವಿರುದ್ಧ ದ್ವೇಷದ ಭಾವನೆಯನ್ನು ಈಚೆಗೆ  ಹರಡಲಾಗುತ್ತಿದೆ. ರಾಷ್ಟ್ರದ ಔರಂಗಾಬಾದ, ಉತ್ತರಪ್ರದೇಶದ ಚಂದೌಲಿ ಮತ್ತು ಉನ್ನಾವದಲ್ಲಿ ಸ್ಥಳೀಯ ಪೊಲೀಸರ ಮೂಲಕ ನಡೆಸಲಾದ ವಿಚಾರಣೆಯಲ್ಲಿ  ಈ ದೂರುಗಳು ಸುಳ್ಳಾಗಿವೆಯೆಂದು ಬಹಿರಂಗವಾಗಿದೆ.  ಈ ಪ್ರಕರಣದಲ್ಲಿ ಉತ್ತರಪ್ರದೇಶದ ಪೊಲೀಸ ಮಹಾಅಧೀಕ್ಷಕರಾದ ಒ.ಪಿ.ಸಿಂಗ್ ಇವರು ‘ಉತ್ತರಪ್ರದೇಶದಲ್ಲಿ ಮತೀಯ ಗಲಭೆಯನ್ನು  ಹರಡಲು ಮತಾಂಧರು ‘ಜಯ ಶ್ರೀರಾಮ’ ಘೋಷಣೆಯನ್ನು ಹೇಳದ ಸುಳ್ಳು ಕಾರಣವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಅದಕ್ಕಾಗಿ ಇಂತಹವರ ವಿರುದ್ಧ ರಾಷ್ಟ್ರಮಟ್ಟದಲ್ಲಿ ಒಂದು ವಿಶೇಷ ತನಿಖಾದಳವನ್ನು  ರಚಿಸಬೇಕು ಮತ್ತು ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು” ಎಂದು ವಿಷಯವನ್ನು ಮಂಡಿಸಿದರು.
ಪುತ್ತೂರು ವಿಶ್ವಹಿಂದೂ ಪರಿಷತ್ತಿನ ಪ್ರಖಂಡ ಅಧ್ಯಕ್ಷರು  ಜನಾರ್ದನ ಲಕ್ಷ್ಮೀ ದೇವೀ ಬೆಟ್ಟ ಇವರು ಮಾತನಾಡಿ 370 ಮತ್ತು 35 ಅ ಇದು ಭಾರತಾಂಬೆಯ 70ವರ್ಷಗಳಿಂದ ಕೊರಳಿಗೆ ಕಟ್ಟಿದ ಹಗ್ಗವಾಗಿತ್ತು. ಶ್ರೀ ರಾಮ ಮತ್ತು ಶ್ರೀ ಕೃಷ್ಣನ ಆದರ್ಶವನ್ನು ಇಟ್ಟುಕೊಂಡ ಸರಕಾರವು  ಅದನ್ನು ತೆಗೆದು ಹಾಕಿದ್ದು ಇದು ದೇಶಕ್ಕೆ ಸಿಕ್ಕ ಐತಿಹಾಸಿಕ  ಗೆಲುವಾಗಿದೆ..
ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಆದರ್ಶವನ್ನು ಇಟ್ಟು ಮೈಸೂರು- ಬೆಂಗಳೂರು ನಡುವೆ ರೈಲಿಗೆ ಸ್ವಾತಂತ್ರ್ಯ ಹೋರಾಟಗಾರರ  ಹೆಸರನ್ನು ಇಡಬೇಕು..ಹಾಗೆಯೇ ನಿರಾಶ್ರಿತ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಬೇಕು.ಹಗರಣಗಳು ಮತ್ತು ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಚರ್ಚ್ ಗಳನ್ನು ಸರಕಾರೀಕರಣಗೊಳಿಸಬೇಕು” ಎಂದು ವಿಷಯವನ್ನು ಮಂಡಿಸಿದರು.
ಆಂದೋಲನವನ್ನು .ದಯಾನಂದ ಹೆಗ್ಡೆ ಇವರು ಶಂಖನಾದ ಮಾಡುವ ಮೂಲಕ ಪ್ರಾರಂಭಿಸಿದರು. ಕು.ಚೇತನಾ ಇವರು ಆಂದೋಲನವನ್ನು ನಿರೂಪಿಸಿದರು.
ಆಂದೋಲನದ ವಿಷಯದ ಕುರಿತು ಮಾನ್ಯ ಉಪವಿಭಾಗಾಧಿಕಾರಿಗಳಾದ ಹೆಚ್.ಕೆ.ಕೃಷ್ಣಮೂರ್ತಿ, ಇವರ ಮೂಲಕ ಕೇಂದ್ರ ಗೃಹಸಚಿವರು ಮತ್ತು ಪ್ರಧಾನಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಚಂದ್ರಶೇಖರ , ಧರ್ಮಪ್ರೇಮಿಗಳಾದ ಲಕ್ಷ್ಮಣ ಬೆಳ್ಳಿಪಾಡಿ,ಮಾಧವ ಎಸ್.ರೈ ಕುಂಬ್ರ, ಸೀತಾರಾಮ ಆಳ್ವ,  ಗಣೇಶ್ ನಾಯಕ್, ಸುರೇಶ್ ಪ್ರಭು, ಗೋಪಾಲ ನಾಯಕ್ ,ಕೃಷ್ಣ ಶೆಟ್ಟಿ ಇವರು ಉಪಸ್ಥಿತಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಿಯೆಟ್ನಾಂನಲ್ಲಿ ಅಡಿಕೆ ಬೆಲೆ ಕುಸಿತ – ಚೀನಾದ ಬೇಡಿಕೆ ಇಳಿಕೆಯಿಂದ ರೈತರಿಗೆ ಸಂಕಷ್ಟ! – ಭಾರತದ ಅಡಿಕೆ ಮಾರುಕಟ್ಟೆಗೆ ಏನು ಎಚ್ಚರಿಕೆ..?
June 17, 2026
7:50 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 17-06-2026 | ಜೂನ್ 21 ರವರೆಗೆ ಕರಾವಳಿಯಲ್ಲಿ ಅಲ್ಪ ಮಳೆ, ಎಲ್ ನಿನೋ ಹಿನ್ನೆಲೆ ರೈತರಿಗೆ ನೀರು ಸಂಗ್ರಹದ ಸಲಹೆ
June 17, 2026
11:49 AM
by: ಸಾಯಿಶೇಖರ್ ಕರಿಕಳ
ಎಲ್ ನಿನೋ ಪರಿಣಾಮ – 10 ರಾಜ್ಯಗಳಲ್ಲಿ ಜಾಗೃತಿ ಅಭಿಯಾನ
June 17, 2026
11:39 AM
by: ದ ರೂರಲ್ ಮಿರರ್.ಕಾಂ
ಇಂಡೋನೇಷ್ಯಾದ ಸ್ಟಾರ್ಟ್‌ಅಪ್‌ನಿಂದ ಬಾಂಗ್ಲಾದೇಶ, ಮಾಲ್ಡೀವ್ಸ್‌ಗೆ ಅಡಿಕೆ ರಫ್ತು – ಜಾಗತಿಕ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಳ
June 16, 2026
8:15 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror