ಹಿಂದೂ ಸಮಾಜದ ಮಹಾಗುರು ಪೇಜಾವರ ವಿಶ್ವೇಶ ತೀರ್ಥ ಶ್ರೀಗಳು ಶ್ರೀಕೃಷ್ಣನಲ್ಲಿ ಲೀನ

December 29, 2019
9:52 AM

ಉಡುಪಿ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ  ಸಾಮಾಜಿಕ ಸೇವಾ ಕಳಕಳಿಯ, ಹಿಂದೂ ಸಮಾಜದ ಶ್ರೇಷ್ಠ ಸಂತ  ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿ (89) ಅವರು ಶ್ರೀಕೃಷ್ಣನಲ್ಲಿ  ಲೀನವಾಗಿದ್ದಾರೆ.

Advertisement
Advertisement
Advertisement

ಇದೀಗ ಉಡುಪಿಯಲ್ಲಿ 10 ಗಂಟೆಯಿಂದ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ನಂತರ ಮಧ್ಯಾಹ್ನದ ವೇಳೆಗೆ  ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಶರೀರವನ್ನು ಕೊಂಡೊಯ್ದು ಸಾರ್ವಜನಿಕರಿಗೆ ಅಂತಿಮ ದರ್ಶನವನ್ನು ಕಲ್ಪಿಸಲಾಗುತ್ತದೆ. ನಂತರ ವಿದ್ಯಾಪೀಠದಲ್ಲಿ  ಬೃಂದಾವನಸ್ಥರಾಗಲಿದ್ದಾರೆ. ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಲಿದೆ.

Advertisement

5 ಪರ್ಯಾಯವನ್ನೇರಿದ್ದ ಉಡುಪಿ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಮುಖ್ಯಪ್ರಾಣನಲ್ಲಿ  ಐಕ್ಯವಾಗಿದ್ದಾರೆ. ಡಿ.19ರಂದು ಸ್ವಾಮೀಜಿಯವರು ಜ್ವರದಿಂದ ಬಳಲುತ್ತಿದ್ದರೂ ಎರಡು ಮೂರು ಕಾರ್ಯಕ್ರಮಗಳನ್ನು ಮುಗಿಸಿ ಉಡುಪಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸ್ವಲ್ಪ ಗುಣಮುಖರಾಗಿ ಮಠಕ್ಕೆ ಮರಳಿದ್ದರು. ಡಿ.20ರ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ಉಸಿರಾಟದ ತೊಂದರೆಯುಂಟಾಗಿತ್ತು. ಕೂಡಲೇ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು, ನಂತರ ಅಂದೇ ಮುಂಜಾನೆ 5 ಸುಮಾರಿಗೆ ಪೇಜಾವರ ಶ್ರೀ ಅವರನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಕರೆದುಕೊಂಡುಬರಲಾಗಿತ್ತು. 8 ದಿನಗಳ  ವೈದ್ಯರ ಸತತ ಪರಿಶ್ರಮ ಬಳಿಕವೂ ಚಿಕಿತ್ಸೆ ಫಲಕಾರಿಯಾಗಲೇ ಇಲ್ಲ.

ಪೂರ್ವಾಶ್ರಮ : ಪುತ್ತೂರು ತಾಲೂಕಿನ ರಾಮಕುಂಜದಲ್ಲಿ 1931 ಎಪ್ರಿಲ್ 27 ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಜನಿಸಿದರು. ತಂದೆ ನಾರಾಯಣಾಚಾರ್ಯ, ತಾಯಿ ಕಮಲಮ್ಮ. ಹುಟ್ಟಿದ ಎರಡನೆಯ ಗಂಡುಮಗುವಾಗಿ ವೆಂಕಟ್ರಮಣ ಎಂಬ ಹೆಸರಿನಲ್ಲಿ ಇದ್ದರು. ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಆಧ್ಯಾತ್ಮದ ಕಡೆಗೆ ಒಲವು ತೋರಿದ ಶ್ರೀಗಳು ಪೇಜಾವರ ಮಠಾಧೀಶರಾಗಿ ಸನ್ಯಾಸ ಸ್ವೀಕರಿಸಿದ್ದರು.7 ವರ್ಷದ ಬಾಲಕ ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ, 1938 ರ ಡಿ.3 ರಂದು ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದರು. ಆ ಬಳಿಕ ವೆಂಕಟ್ರಮಣ ‘ವಿಶ್ವೇಶ ತೀರ್ಥ’ರಾದರು. 1952 ಜನವರಿ 18 ರಂದು, 21ರ ಹರೆಯದಲ್ಲಿ ಮೊದಲ ಪರ್ಯಾಯ ಪೀಠಾರೋಹಣ ಮಾಡಿದರು.

Advertisement

ಮುಂದೇನು ?: ಇದೀಗ ಕೃಷ್ಣನಲ್ಲಿ  ಲೀನವಾಗಿದ್ದಾರೆ ಪೇವಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು. ಮಠದಲ್ಲಿ ಗೋವಿಂದ ನಾಮ ಮೊಳಗುತ್ತಿದೆ. ಮುಂದೆ ಶ್ರೀಗಳ ಶರೀರಕ್ಕೆ ಶ್ರೀಕೃಷ್ಣ ದರ್ಶನ ನಡೆಯುತ್ತದೆ, ಅದಾದ ಬಳಿಕ ಆರತಿ ಬೆಳಗಿ ಮಧ್ವ ಸರೋವರದಲ್ಲಿ ಸ್ನಾನ ಮಾಡಿಸಿ ಆರತಿ ಬೆಳಗಿ ಕಾವಿ ಬಟ್ಟೆ ತೊಡಿಸಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿ ಬೆಂಗಳೂರಿಗೆ ಶರೀರವನ್ನು  ಕೊಂಡೊಯ್ದು ಬೆಂಗಳೂರಿನ ವಿದ್ಯಾಪೀಠದಲ್ಲಿ ಬೃಂದಾವಸ್ಥರಾಗಲಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |
January 23, 2025
8:49 PM
by: The Rural Mirror ಸುದ್ದಿಜಾಲ
ಪ್ರಯಾಗ್ ರಾಜ್ ನಲ್ಲಿ  ಮಹಾ ಕುಂಭಮೇಳ | 150ಕ್ಕೂ ಹೆಚ್ಚು ವಿಶೇಷ ರೈಲು
January 23, 2025
10:59 AM
by: The Rural Mirror ಸುದ್ದಿಜಾಲ
ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ
January 23, 2025
10:50 AM
by: The Rural Mirror ಸುದ್ದಿಜಾಲ
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಶೇಷ ಫಿಲ್ಟರ್ ಕಾಫಿ ಕೆಫೆ – ಸರ್ಕಾರ ಒಪ್ಪಂದ | ಕಾಫಿ ಉದ್ಯಮ ಉತ್ತೇಜಿಸಲು ಮಹತ್ವದ ಹೆಜ್ಜೆ |
January 23, 2025
10:46 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror