ಅರಂತೋಡು: ನಮ್ಮ ಹಿರಿಯರು ನಮಗೆ ಮಾರ್ಗದರ್ಶಕರು.ಅವರು ನಮಗೆ ಒಳ್ಳೆಯ ಆಚಾರ ವಿಚಾರಗಳನ್ನು ಒಳಗೊಂಡ ಜೀವನವನ್ನು ಬಿಟ್ಟು ಹೋಗಿದ್ದಾರೆ.ಅವರ ಹಾಕಿದ ಒಳ್ಳೆಯ ಹಜ್ಜೆ ಗುರುತುಗಳನ್ನು ಮರೆಬಾರದು ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಿ ಎಂದು ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಯೋಗೇಶ್ವರಾನಂದ ಸ್ವಾಮೀಜಿ ಹೇಳಿದರು.
ಅವರು ತನ್ನ 160ನೇ ಕೃತಿ ಅಜ್ಜ ಹಾಕಿದ ಹೆಜ್ಜೆ ಎಂಬ ವೈದಿಕ ಹಾಗೂ ಆಧ್ಯಾತ್ಮ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಅನಿಲ್ ಬಿ.ವಿ ಅವರು ಸ್ವಾಮಿಯವರ ಕೃತಿಯನ್ನು ಬಿಡುಡೆಗೊಳಿಸಿ ಮಾತನಾಡಿ ಸ್ವಾಮಿಜಿಯವರ ಅಜ್ಜ ಹಾಕಿದ ಹೆಜ್ಜೆ ಎಂಬ ಕೃತಿ ತುಂಬಾ ಪರಿಣಾಮಕಾರಿಯಾಗಿದ್ದು ಎಲ್ಲಾರು ಅದನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕೆಂದು ಹೇಳಿದರು.
ಸೇವಾಶ್ರಮದ ಟ್ರಸ್ಟಿ ನಿವೃತ್ತ ಅಧ್ಯಾಪಕ ಜನಾರ್ದನ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಟ್ರಸ್ಟಿ ಪ್ರಣವಿ ಅವರು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel