ನವದೆಹಲಿ : ಕೆಲವೊಂದು ಆರೋಗ್ಯ ಸಮಸ್ಯೆ ಇರುವುದರಿಂದ ಯಾವುದೇ ಹುದ್ದೆಗಳು ಬೇಡ, ನನ್ನನ್ನು ಜವಾಬ್ದಾರಿಗಳಿಂದ ಮುಕ್ತ ಮಾಡಿ ಎಂದು ಸಚಿವ ಅರುಣ್ ಜೇಟ್ಲೀ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.
ನಾಳೆ ಪ್ರಧಾನಿಗಳಾಗಿ ನರೇದ್ರ ಮೋದಿ ಅವರು ಪ್ರಮಾಣ ಸ್ವೀಕಾರ ಹಾಗೂ ವಿವಿಧ ಸಚಿವರೂ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದಕ್ಕೂ ಮುನ್ನವೇ ಅರುಣ್ ಜೇಟ್ಲೀ ಅವರು ಪತ್ರ ಬರೆದು ಕೆಲವೊಂದು ಆರೋಗ್ಯ ಸಮಸ್ಯೆ ತೀವ್ರ ಕಾಡುತ್ತಿದೆ. ಪಕ್ಷವು ನನಗೆ ಕಳೆದ 5 ವರ್ಷಗಳಿಂದ ಮಹತ್ತರ ಜವಾಬ್ದಾರಿ ನೀಡಿದೆ. ತಮ್ಮ ನೇತೃತ್ವದಲ್ಲಿ ಯಶಸ್ವಿಯಾಗಿ ಹುದ್ದೆ ನಿಭಾಯಿಸಲಾಗಿದೆ. ಇದೀಗ ಕಳೆದ ಕೆಲವು ಸಮಯಗಳಿಂದ ತೀವ್ರವಾದ ಆರೋಗ್ಯ ಸಮಸ್ಯೆ ಇದೆ. ಹೀಗಾಗಿ ಹುದ್ದೆಗಳಿಂದ ಮುಕ್ತ ಮಾಡಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel