ಹೆಚ್ಚಾದ ಮಳೆ, ತುಂಬಿದ ಜಲಾಶಯಗಳು, ಈ ಬಾರಿ ವಿದ್ಯುತ್ ಅಭಾವ ಇರದು…!

September 4, 2019
8:00 AM

ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆ ಬಿದ್ದ ಪ್ರಮಾಣ ಕಡಿಮೆ. ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಆದರೆ ಒಮ್ಮೆಲೇ ಭಾರೀ ಮಳೆ, ಪ್ರವಾಹ ಬಂದ ಹಿನ್ನೆಲೆಯಲ್ಲಿ  ನೀರು ಸಾಕಷ್ಟು ಬಂದು ಜಲಾಶಯಗಳು ತುಂಬಿವೆ. ಹೀಗಾಗಿ ರಾಜ್ಯಕ್ಕೆ ಈ ಬಾರಿ ವಿದ್ಯುತ್ ಅಭಾವ ಇರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಬೇಸಗೆಯಲ್ಲಿ ಹೇಗೆ ಎಂಬುದರ ಬಗ್ಗೆ ಇನ್ನೂ ನಿರ್ಧರಿಸಲು ಸಾಧ್ಯವಿಲ್ಲ, ಈಗಿನ ಅಂದಾಜು ಪ್ರಕಾರ ಅಭಾವ ಕಂಡುಬರದು. ಇದೇ ಸಂದರ್ಭ ರಾಜ್ಯದ ಹಲವು ಕಡೆಗಳಲ್ಲಿ  ಮಳೆಯಾಗಿಲ್ಲ. ಕೆರೆಗಳು ಭರ್ತಿಯಾಗಿಲ್ಲ.ಈ ಬಗ್ಗೆ ಫೋಕಸ್..


ಈ ಬಾರಿ ವಿದ್ಯುತ್ ಅಭಾವ ಕಂಡುಬಾರದು. ಹೀಗೊಂದು ಅಭಿಪ್ರಾತಯ ಈಗ ವ್ಯಕ್ತವಾಗಿದೆ. ಮಳೆಯಿಂದ ರಾಜ್ಯದಲ್ಲಿ ಸಾಕಷ್ಟು ಹಾನಿಯಾಗಿದೆ. ಇಂದಿಗೂ ಜನ ಆತಂಕದಿಂದ ಇದ್ದಾರೆ. ಇದರ ನಡುವೆಯೇ ವಿದ್ಯುತ್ ಬಗ್ಗೆ ಯೋಚನೆ ಶುರುವಾದಾಗ ಲಿಂಗನಮಕ್ಕಿ ಜಲಾಶಯ ಭರ್ತಿಗೆ ಕೇವಲ ಅರ್ಧ ಅಡಿ ಬಾಕಿ ಎಂಬ ವರದಿ ಬಂದಿದೆ. ಹೀಗಾಗಿ ವಿದ್ಯುತ್ ಬಗ್ಗೆ ಭರವಸೆ ಮೂಡಿದೆ.

ಪ್ರತಿ ಬಾರಿ ರಾಜ್ಯವನ್ನು ಕಾಡುವ ವಿದ್ಯುತ್‌ ಅಭಾವ ಈಚೆಗೆ ಹೆಚ್ಚಾಗಿತ್ತು. ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆ ಮಾಡುವ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇರುವ ಕಾರಣದಿಂದ ಈ ಬಾರಿಯ ಬೇಸಿಗೆಯಲ್ಲಿ ಹೆಚ್ಚೇನು ವಿದ್ಯುತ್‌ ಅಭಾವ ಇರಲಾರದು ಎಂಬ ಅಂದಾಜು ವ್ಯಕ್ತವಾಗಿದೆ. ರಾಜ್ಯದಲ್ಲಿ ಪ್ರಮುಖ ವಿದ್ಯುತ್‌ ಉತ್ಪಾದನ ಕೇಂದ್ರವಾಗಿರುವ ಲಿಂಗನಮಕ್ಕಿ ಜಲಾಶಯ ಭರ್ತಿಗೆ ಕೇವಲ ಅರ್ಧ ಅಡಿ ಬಾಕಿ ಉಳಿದಿದ್ದು, ಸೋಮವಾರ ಸಂಜೆ 6 ಗಂಟೆಯಿಂದ 3 ಕ್ರಸ್ಟ್ ಗೇಟ್‌ಗಳ ಮೂಲಕ ನೀರು ಹೊರ ಬಿಡಲಾಗಿದೆ. ನೀರಿನ ಮಟ್ಟ ಸೋಮವಾರ ಸಂಜೆ 1818.40 (ಪೂರ್ಣಮಟ್ಟ 1819) ಅಡಿಗೆ ತಲುಪಿದ್ದು ಒಳಹರಿವು 25 ಸಾವಿರ ಕ್ಯೂಸೆಕ್ ಇದೆ. ಜಲಾನಯನ ಪ್ರದೇಶವಾದ ಹೊಸನಗರ ಮತ್ತು ಸಾಗರದಲ್ಲಿ ಸತತ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮಳೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆಯಾದರೂ ರಾಜ್ಯದ 1685 ಕೆರೆಗಳಲ್ಲಿ ನೀರಿಲ್ಲ….!

 ಪ್ರವಾಹದಿಂದ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿದ್ದರೂ ಇನ್ನೂ  1685 ಕೆರೆಗಳಿಗೆ ನೀರೇ ಹರಿದಿಲ್ಲ. ದಾಖಲೆಗಳ ಪ್ರಕಾರ ರಾಜ್ಯದ 3611 ಸಣ್ಣ ಕೆರೆಗಳ ಪೈಕಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರುವುದು 944 ಕೆರೆಗಳು ಮಾತ್ರ….!  ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಆಗಸ್ಟ್ ವರೆಗೆ ರಾಜ್ಯದ 3611 ಸಣ್ಣ ಕೆರೆಗಳ ಪೈಕಿ 1685 ಕೆರೆಗಳಿಗೆ ನೀರೇ ಬಂದಿಲ್ಲ. ಹೀಗಾಗಿ ಸಂಪೂರ್ಣ ಒಣಗಿತ್ತು. ಅದರಲ್ಲಿ ಕೋಲಾರ 125, ಚಿಕ್ಕಬಳ್ಳಾಪುರ 173, ತುಮಕೂರು 297, ಚಿತ್ರದುರ್ಗ 116, ದಾವಣಗೆರೆ 64, ಚಾಮರಾಜನಗರ 51, ಮಂಡ್ಯ 37, ಹಾಸನ 54, ಬಳ್ಳಾರಿ 76, ಕೊಪ್ಪಳ 40, ರಾಯಚೂರು 21, ಕಲಬುರಗಿ 93, ಬೀದರ್ 123, ಬೆಳಗಾವಿ 74, ಬಾಗಲಕೋಟೆ 54, ವಿಜಯ ಪುರ 111, ಯಾದಗಿರಿ 67, ಚಿಕ್ಕಮಗಳೂರು 30 ಕೆರೆಗಳಿಗೆ ನೀರೇ ಬಾರದ ಸ್ಥಿತಿ ಇದೆ.

Advertisement

ಶಿವಮೊಗ್ಗ , ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಕೆರೆಗಳು ಸೇರಿ ದಂತೆ 994 ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. 652 ಕೆರೆಗಳಿಗೆ ಶೇ.30ರಷ್ಟು ನೀರು ಬಂದಿದ್ದರೆ 150 ಕೆರೆಗಳಿಗೆ ಅರ್ಧದಷ್ಟು ಮಾತ್ರ ನೀರು ಬಂದಿದೆ.

 

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಕೊಳೆರೋಗ | ಇಲಾಖೆಗಳ ಮಾಹಿತಿ ತಲುಪಿದ ಕೃಷಿಕರ ಸಂಖ್ಯೆ ನೋಡಿದರೇ ಅಚ್ಚರಿ…!
September 18, 2025
6:59 AM
by: ದ ರೂರಲ್ ಮಿರರ್.ಕಾಂ
ಬಾಂಗ್ಲಾದೇಶದಲ್ಲಿ ತೀವ್ರಗೊಂಡ ಡೆಂಗ್ಯೂ ಜ್ವರ – 156 ಕ್ಕೂ ಹೆಚ್ಚು ಮಂದಿ ಡೆಂಗ್ಯೂ ಜ್ವರಕ್ಕೆ ಬಲಿ
September 18, 2025
6:27 AM
by: The Rural Mirror ಸುದ್ದಿಜಾಲ
ಭಾರತದ ಜಿಡಿಪಿ 2026 ಹಣಕಾಸು ವರ್ಷದಲ್ಲಿ ಶೇ. 6.5 ರಷ್ಟು ಬೆಳೆಯುವ ನಿರೀಕ್ಷೆ
September 18, 2025
6:09 AM
by: The Rural Mirror ಸುದ್ದಿಜಾಲ
ಗ್ರಾಮೀಣ ಭಾಗದಲ್ಲಿ ಮೊಬೈಲ್‌ ಸಂಪರ್ಕ ಹೆಚ್ಚಿಸಲು ಅಂಚೆ ಇಲಾಖೆ ಹಾಗೂ ಬಿಎಸ್‌ಎನ್‌ಎಲ್‌ ಒಪ್ಪಂದ
September 18, 2025
5:59 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group