ಸುಳ್ಯ: ಸ್ನೇಹಿತರ ಜತೆಗೆ ಹೊಳೆಗೆ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಬರಡ್ಕ ಸಮೀಪದ ಕಂದಡ್ಕ ಹೊಳೆ ಎಂಬಲ್ಲಿ ಭಾನುವಾರ ಸಂಜೆ ವೇಳೆ ನಡೆದಿದೆ.
ಉಬರಡ್ಕದ ಕಮೀಲಡ್ಕ ಮನೆಯ ಹರೀಶ್ ಎಂಬವರ ಪುತ್ರ ಯಶ್ವಿತ್ (16 ) ಮೃತ ಬಾಲಕ.ಮನೆ ಸಮೀಪದ ನಾಲ್ವರು ಸ್ನೇಹಿತರು ಸೇರಿ ಭಾನುವಾರ ಮಧ್ಯಾಹ್ನ ವೇಳೆ ಕಂದಡ್ಕ ಹೊಳೆಗೆ ಸ್ನಾನಕ್ಕೆಂದು ಇಳಿದಿದ್ದರು. ಈ ನಡುವೆ ಯಶ್ವಿತ್ ಆಯತಪ್ಪಿ ಹೊಳೆ ನೀರಲ್ಲಿ ಮುಳುಗಿದ್ದಾನೆ. ಗೆಳೆಯರು ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಸ್ಥಳೀಯರು ಸೇರಿ ಸಂಜೆ ವೇಳೆ ಮೃತದೇಹ ಮೇಲಕ್ಕೆತ್ತಿದ್ದಾರೆ. ಮೃತ ಬಾಲಕ ಸುಳ್ಯ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದನು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರೀಸುದಾರರಿಗೆ ಮೃತದೇಹ ಹಸ್ತಾಂತರಿಸಲಾಯಿತು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement