ಮತ್ತೆ ಕೊರೋನಾ ಭಯ ಹೆಚ್ಚಾಗಿದೆ. ಅದರ ಜೊತೆಗೇ ಒಮಿಕ್ರಾನ್ ಕೂಡಾ ಹಬ್ಬುತ್ತಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಪ್ರತೀ ದಿನ ರೋಗದ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರವಾಗಿ ಈ ರೋಗ ನಿಯಂತ್ರಣ ಮಾಡಲೇಬೇಕಿದೆ. ಮತ್ತೆ ಲಾಕ್ಡೌನ್ ಆದರೆ ಜನ ಅದರಲ್ಲೂ ಸಾಮಾನ್ಯ ಜನರು ಸಂಕಷ್ಟ ಅನುಭವಿಸುವುದು ಖಚಿತ. ಹೀಗಾಗಿ ಲಾಕ್ಡೌನ್ ಬದಲಾಗಿ ಪರ್ಯಾಯ ದಾರಿಗಳು ಏನಿದೆ ? ರೋಗ ಹರಡುವುದು ತಪ್ಪಿಸಲು ಏನು ಮಾಡಬಹುದು ? ಗ್ರಾಮೀಣ ಭಾಗದಿಂದ ತೊಡಗಿ ನಗರದವರೆಗೆ ಏನು ಮಾಡಬಹುದು ? ಇಂತಹದ್ದೊಂದು ಯೋಚನೆ ಇದ್ದರೆ ಹೇಳಿ ಸರ್ಕಾರಕ್ಕೆ ನಾವೆಲ್ಲರೂ ಸೇರಿ ಗಮನಕ್ಕೆ ತರೋಣ.
#coronavirus #OmicronVirus #ಕೊರೊನಾ #ಒಮಿಕ್ರಾನ್ ಹರಡದಂತೆ ಲಾಕ್ಡೌನ್ ಬಿಟ್ಟು ಪರ್ಯಾಯ ದಾರಿಗಳು ಯಾವುದು? #lockdown
Advertisement— theruralmirror (@ruralmirror) January 4, 2022
ಏಕೆಂದರೆ ಸರ್ಕಾರಕ್ಕೂ, ಆಡಳಿತಕ್ಕೂ ಕೊರೋನಾ ಲಾಕ್ಡೌನ್ ಈಗ ಬೇಕಾಗಿಲ್ಲ. ಆದರೆ ಜವಾಬ್ದಾರಿ ಹಾಗೂ ನಾಗರಿಕರ ಹಿತದೃಷ್ಟಿಯಿಂದ ಅನಿವಾರ್ಯ ಸ್ಥಿತಿ ಇದೆ. ಅಂತರಾಷ್ಟ್ರೀಯ ಮಟ್ಟದಲ್ಲೂ ರೋಗ ಹರಡದಂತೆ ಲಾಕ್ಡೌನ್ ಮಾತ್ರವೇ ಪರಿಹಾರ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಲಾಕ್ಡೌನ್ ಹೊರತಾದ ಯಾವ ಮಾರ್ಗ ಇದ್ದರೂ ಸರ್ಕಾರ ಪರಿಗಣಿಸುವುದು ಕಷ್ಟವಾದರೂ ಸಡಿಲಿಕೆ ಮಾಡಬಹುದು. ಅಂತಹ ಯೋಚನೆಗಳು ಇದ್ದರೆ ಎಲ್ಲರೂ ಸರ್ಕಾರದ ಗಮನಕ್ಕೆ ತರಬಹುದು. ಪ್ರತಿಭಟನೆಗಳ ಬದಲಾಗಿ ರಚನಾತ್ಮಕ ಸಲಹೆ, ಯೋಚನೆಗಳನ್ನು ಹೇಳುವ ಅವಕಾಶ ಪ್ರಜಾಪ್ರಭುತ್ವದಲ್ಲಿ ಇದೆ. ಈಗ ಈ ಪ್ರಯತ್ನ ನಾವೆಲ್ಲರೂ ಮಾಡೋಣ, ಏಕೆಂದರೆ ನಮ್ಮೆಲ್ಲರ ಹಿತಕ್ಕಾಗಿ…
Advertisement