ಅಂಗನವಾಡಿಗಳಲ್ಲಿಯೇ ಎಲ್‍ಕೆಜಿ, ಯುಕೆಜಿ ಪ್ರಾರಂಬಿಸಲು ಆಗ್ರಹ

Advertisement

ಪುತ್ತೂರು: ಅಂಗನವಾಡಿಗಳ ಬಲವರ್ದನೆ ಹಾಗೂ ಅಂಗನವಾಡಿಗಳನ್ನು ಪೂರ್ವ ಶಿಕ್ಷಣ ಕೇಂದ್ರವನ್ನಾಗಿ ಮಾಡಬೇಕೆಂದು  ದ ಕ.ಜಿಲ್ಲಾ ಅಂಗನವಾಡಿ ನೌಕರರ ಸಂಘಟನೆಯ ಮುಖಂಡರಾದ ನ್ಯಾಯವಾದಿ ಬಿ.ಎಂ.ಭಟ್‍  ಒತ್ತಾಯಿಸಿದ್ದಾರೆ.

Advertisement

ಪತ್ರಿಕಾ ಹೇಳಿಕೆ ನೀಡಿದ ಅವರು  ಅಂಗನವಾಡಿಗಳಲ್ಲಿ ಸರಕಾರವೇ ಎಲ್.ಕೆ.ಜಿ, ಯುಕೆಜಿ ಸ್ಥಾಪಿಸುವುದರಿಂದ ಪ್ರಾಥಮಿಕ ಶಿಕ್ಷಣವನ್ನೂ ವ್ಯಾಪರೀಕರಣವಾಗಿಸುವ ದಂಧೆಯನ್ನು ತಡೆದು ಹೆತ್ತವರು ಬಯಸುವ ಉತ್ತಮ ಶಿಕ್ಷಣ ಬಡ ಮಕ್ಕಳಿಗೂ ಸರಕಾರವೇ ನೀಡಿದಂತಾಗುತ್ತದೆ ಹಾಗೂ ಖಾಸಗೀಕರಣದ ಭೂತದಿಂದ ಬಡಜನತೆಯನ್ನು ರಕ್ಷಿಸಿದಂತಾಗುತ್ತದೆ ಎಂದರು.

Advertisement
Advertisement

ಸರಕಾರೀ ಶಾಲೆಗಳಲ್ಲಿಯೇ ಎಲ್.ಕೆ.ಜಿ, ಯುಕೆಜಿ ಸ್ಥಾಪಿಸಲು ನಿರ್ಧರಿಸುತ್ತಿರುವುದನ್ನು ಖಂಡಿಸಿ ಮೇ 30 ರಂದು ವಿಧಾನಸೌಧ ಚಲೋ ಹೋರಾಟ ನಡೆಸಲಿದ್ದೇವೆ ಎಂದವರು ತಿಳಿಸಿದರು. ಇದರಲ್ಲೂ ನ್ಯಾಯ ಸಿಗದೇ ಇದ್ದಲ್ಲಿ ಜಿಲ್ಲಾಕೇಂದ್ರದಲ್ಲಿ ಅನಿರ್ಧಿಷ್ಟ ಹೋರಾಟ ನಡೆಸಲಾಗುವುದು ಎಂದರು .

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಅಂಗನವಾಡಿಗಳಲ್ಲಿಯೇ ಎಲ್‍ಕೆಜಿ, ಯುಕೆಜಿ ಪ್ರಾರಂಬಿಸಲು ಆಗ್ರಹ"

Leave a comment

Your email address will not be published.


*