ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ – ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಕೃಷಿಕ ಸಮಾಜ ಒತ್ತಾಯ

October 29, 2026
8:33 PM
ಬೆಳೆ ವಿಮೆ ಪರಿಹಾರ ಪಾವತಿಯಲ್ಲಿ ತಾರತಮ್ಯವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ತಕ್ಷಣ ನ್ಯಾಯಯುತ ಪರಿಹಾರ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜ ಸರ್ಕಾರವನ್ನು ಒತ್ತಾಯಿಸಿದೆ. ಮುಂದಿನ ವರ್ಷದ ಟರ್ಮ್‌ಶೀಟ್‌ನಲ್ಲಿ ರೈತರ ಬೇಡಿಕೆ ಪರಿಗಣಿಸುವುದು, ಪ್ರತಿ ತಾಲೂಕಿಗೆ ಕನಿಷ್ಠ 10 ಸೋಲಾರ್ ಪಂಪ್‌ಸೆಟ್‌ಗಳನ್ನು ಒದಗಿಸುವುದು ಹಾಗೂ ಬರಪೀಡಿತ ತಾಲೂಕುಗಳ ಭತ್ತ ಬೆಳೆಗಾರರಿಗೆ ಹೆಕ್ಟೇರಿಗೆ ₹8,500 ಸಹಾಯಧನದ ಮಾಹಿತಿ ನೀಡುವುದು ಸಭೆಯ ಪ್ರಮುಖ ಅಂಶಗಳಾಗಿವೆ.

ಬೆಳೆ ವಿಮೆ ಪರಿಹಾರ ಪಾವತಿಯಲ್ಲಿ ತಾರತಮ್ಯವಾಗಿದ್ದು, ಅನೇಕ ರೈತರಿಗೆ ಕಡಿಮೆ ಪರಿಹಾರ ದೊರೆತಿರುವ ಹಿನ್ನೆಲೆಯಲ್ಲಿ ತಕ್ಷಣ ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜ ಸರ್ಕಾರವನ್ನು ಒತ್ತಾಯಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ರೈ ಕೋರಂಗ ಅವರ ಅಧ್ಯಕ್ಷತೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಮುಂದಿನ ವರ್ಷದ ಟರ್ಮ್‌ಶೀಟ್‌ನಲ್ಲಿ ರೈತರ ಬೇಡಿಕೆಗೆ ಆದ್ಯತೆ:  ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿನ ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ, ಮುಂದಿನ ವರ್ಷದ ಹೊಸ ಟರ್ಮ್‌ಶೀಟ್‌ ಸಿದ್ಧಪಡಿಸುವಾಗ ರೈತರ ಬೇಡಿಕೆಗಳನ್ನು ಪರಿಗಣಿಸಬೇಕು ಎಂದು ಸಭೆ ನಿರ್ಧರಿಸಿತು. ಬೆಳೆ ವಿಮೆಗೆ ಸಂಬಂಧಿಸಿದ ತಾಂತ್ರಿಕ ಹಾಗೂ ಭೌಗೋಳಿಕ ಮಾಹಿತಿಗಳ ಕುರಿತು ರೈತರ ಬೇಡಿಕೆಗಳ ಪಟ್ಟಿಯನ್ನು ರಾಜ್ಯ ಕೃಷಿಕ ಸಮಾಜದ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.

ಪ್ರತಿ ತಾಲೂಕಿಗೆ 10 ಸೋಲಾರ್ ಪಂಪ್‌ಸೆಟ್‌ಗಳಿಗೆ ಆಗ್ರಹ : ತೋಟಗಾರಿಕಾ ಇಲಾಖೆಯ ಮೂಲಕ ಸಬ್ಸಿಡಿಯಲ್ಲಿ ವಿತರಿಸುವ ಸೋಲಾರ್ ಪಂಪ್‌ಸೆಟ್‌ಗಳ ಸೌಲಭ್ಯವನ್ನು ವಿಸ್ತರಿಸಬೇಕು. ಪ್ರತಿ ತಾಲೂಕಿಗೆ ಕನಿಷ್ಠ 10 ಘಟಕಗಳನ್ನು ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಭತ್ತ ಬೆಳೆಗಾರರಿಗೆ ಹೆಕ್ಟೇರಿಗೆ ₹8,500 ಸಹಾಯಧನ :  ಬರಪೀಡಿತ ತಾಲೂಕುಗಳಲ್ಲಿ ಭತ್ತ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರಿಗೆ ₹8,500 ಸಹಾಯಧನ ನೀಡುವ ಕುರಿತು ಜಂಟಿ ಕೃಷಿ ನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿದರು. ಅರ್ಹ ರೈತರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಸಬ್ಸಿಡಿಯಲ್ಲಿ ಪಿವಿಸಿ ಪೈಪ್‌ ವಿತರಣೆ :  ಕೃಷಿ ಇಲಾಖೆಯ ಮೂಲಕ ಸಬ್ಸಿಡಿ ದರದಲ್ಲಿ ಪಿವಿಸಿ ಪೈಪ್‌ಗಳನ್ನು ವಿತರಿಸಲಾಗುತ್ತಿದ್ದು, ಆಸಕ್ತ ರೈತರು ತಮ್ಮ ತಾಲೂಕು ಕೃಷಿ ಇಲಾಖೆಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಅಣಬೆ ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದು, ಆಸಕ್ತರಿಗೆ ತರಬೇತಿ ಹಾಗೂ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಕಲ್ಪಿಸಲು ಸಹಕಾರ ನೀಡಲಾಗುವುದು ಎಂದು ಕೆವಿಕೆ ಪ್ರತಿನಿಧಿಗಳು ತಿಳಿಸಿದರು.

ಇದಲ್ಲದೆ, ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾದ ಅಣೆಕಟ್ಟುಗಳ ಸಮರ್ಪಕ ನಿರ್ವಹಣೆಗೆ ಸರ್ಕಾರ ಗಮನಹರಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಸಭೆಯಲ್ಲಿ ರಾಜ್ಯ ಪ್ರತಿನಿಧಿ ಪದ್ಮನಾಭ ರೈ, ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಕೋಶಾಧಿಕಾರಿ ಕುಸುಮಾಧರ ಸುಳ್ಯ, ಸಂಜೀವ ಮಠದೂರು, ದೇವದಾಸ್ ಭಂಡಾರಿ ಉಳ್ಳಾಲ, ರಾಜು ಪೂಜಾರಿ ಬೆಳ್ತಂಗಡಿ, ಮಹಾವೀರ ಜೈನ್ ಬೆಳ್ತಂಗಡಿ, ಮಹೇಶ್ ಕೆ. ಸವಣೂರು, ಪದ್ಮರಾಜ ಬಲಾಲ್ ಬಂಟ್ವಾಳ, ಮುಖ್ಯ ಪಶುವೈದ್ಯಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿ, ರೇಷ್ಮೆ ಸಹಾಯಕ ನಿರ್ದೇಶಕಿ ಶಾಂಭವಿ, ಸಹಾಯಕ ತೋಟಗಾರಿಕಾ ಅಧಿಕಾರಿ ದರ್ಶನ್ ಜಿ., ಕೆವಿಕೆ ಮುಖ್ಯಸ್ಥ ಡಾ. ಜಿ.ಟಿ. ರಮೇಶ್ ಹಾಗೂ ಕೆವಿಕೆ ವಿಜ್ಞಾನಿ ಡಾ. ಹರೀಶ್ ಉಪಸ್ಥಿತರಿದ್ದರು.

ಜಂಟಿ ಕೃಷಿ ನಿರ್ದೇಶಕ ಡಾ. ಹೊನ್ನಪ್ಪ ಗೋವಿಂದ ಗೌಡ ವಂದಿಸಿದರು.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

The Dakshina Kannada District Krishika Samaja has urged the government to provide fair crop insurance compensation to farmers, citing disparities in payouts and cases of inadequate compensation. At its executive committee meeting chaired by Vijay Rai Koranga, the organisation also decided to submit farmers’ demands concerning technical and geographical data through the State Krishika Samaja for consideration in the next year’s crop insurance term sheet. Other issues discussed included providing at least 10 subsidised solar pump sets per taluk, ₹8,500 per hectare in assistance for paddy farmers in drought-affected taluks, subsidised PVC pipes, mushroom cultivation training and improved maintenance of minor irrigation dams.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 29-10-2026 | ಕರ್ನಾಟಕದಲ್ಲಿ ಅ.31ರಿಂದ ಮತ್ತೆ ಮಳೆ ಸಾಧ್ಯತೆ..! ಅರ್ನಬ್ ಚಂಡಮಾರುತದ ನಡುವೆ ಹೊಸ ಹವಾಮಾನ ವ್ಯವಸ್ಥೆ
October 29, 2026
1:52 PM
by: ಸಾಯಿಶೇಖರ್ ಕರಿಕಳ
ಅಡಿಕೆ ಸಂಗ್ರಹಿಸುವಾಗ ತೇವಾಂಶದ ಬಗ್ಗೆ ಎಚ್ಚರಿಕೆ ಇರಲಿ : ಸಂಶೋಧನೆಯಲ್ಲಿ ಏನಿದೆ?
October 29, 2026
10:12 AM
by: ದ ರೂರಲ್ ಮಿರರ್.ಕಾಂ
ಶಿಕ್ಷಕರ ನೇಮಕಾತಿ : ಅರ್ಜಿ ಸಲ್ಲಿಕೆಗೆ ನ.16ರವರೆಗೆ ಅವಧಿ ವಿಸ್ತರಣೆ
October 29, 2026
7:26 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಅ.31ರಂದು ಉದ್ಯೋಗ ಮೇಳ : ಫೋರ್ಸ್ ಕಂಪನಿಯ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
October 29, 2026
7:17 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror