ಸುಳ್ಯ: ಅಜ್ಜಾವರ-ಮಂಡೆಕೋಲು-ಅಡೂರು ಅಂತಾರಾಜ್ಯ ರಸ್ತೆಯಲ್ಲಿ ಸುಳ್ಯ-ಅಜ್ಜಾವರ ರಸ್ತೆಯ ಡಾಮರೀಕರಣ ಕಾಮಗಾರಿ ಆರಂಭಗೊಂಡಿದೆ. ಕೇಂದ್ರ ರಸ್ತೆ ನಿಧಿಯಿಂದ ಒಟ್ಟು ಎಂಟು ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು ಇದರಲ್ಲಿ ಕಾಂತಮಂಗಲ-ಅಜ್ಜಾವರ ರಸ್ತೆಯಲ್ಲಿ ಆರು ಕಿ.ಮಿ. ರಸ್ತೆ ಆರು ಕೋಟಿ ರೂ ನಲ್ಲಿ ಅಭಿವೃದ್ಧಿಯಾಗುತ್ತಿದೆ. ಉಳಿದ ಎರಡು ಕೋಟಿ ರೂ ವೆಚ್ಚದಲ್ಲಿ ಸುಳ್ಯ-ಉಬರಡ್ಕ ರಸ್ತೆಯಲ್ಲಿ 2.1 ಕಿ.ಮಿ ರಸ್ತೆ ಅಭಿವೃದ್ಧಿ ನಡೆಯಲಿದೆ.
ಸುಳ್ಯ-ಅಜ್ಜಾವರ ರಸ್ತೆಯಲ್ಲಿ ಕಾಂತಮಂಗಲದಿಂದ ಅಜ್ಜಾವರದ ಅಡ್ಪಂಗಾಯವರೆಗೆ ಆರು ಕಿ.ಮಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತಿದೆ. ಪ್ರಥಮ ಹಂತದಲ್ಲಿ ಎರಡೂವರೆ ಕಿ.ಮಿ.ಅಭಿವೃದ್ಧಿಯಾಗಿದ್ದು ಮಳೆಗಾಲಕ್ಕೆ ಮುನ್ನ ಡಾಮರೀಕರಣ ಪೂರ್ತಿಯಾಗಲಿದೆ. ಎರಡು ಹಂತದ ಡಾಮರೀಕರಣ ನಡೆಯಲಿದೆ. ರಸ್ತೆ ಒಟ್ಟು ಒಂಭತ್ತು ಮೀಟರ್ ಅಗಲ ಮಾಡಲಾಗುತ್ತಿದ್ದು ಅದರಲ್ಲಿ 5.5 ಮೀಟರ್ ಡಾಮರೀಕರಣ ನಡೆಸಿ ಮಧ್ಯಮ ಪಥ ರಸ್ತೆ ನಿರ್ಮಾಣ ಮಾಡಲಾಗುತಿದೆ. ಅಗತ್ಯವಿದ್ದ ಕಡೆಗಳಲ್ಲಿ ಮೋರಿಗಳನ್ನು ನಿರ್ಮಾಣ ಮಾಡಲಾಗಿದ್ದು 2.5 ಕಿ.ಮಿ. ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ಮೋರಿಗಳ ನಿರ್ಮಾಣ ಪೂರ್ತಿಗೊಂಡ ಬಳಿಕ ಡಾಮರೀಕರಣ ಆರಂಭಿಸಲಾಗಿದೆ. ಒಟ್ಟು 315 ಮೀಟರ್ ಕಾಂಕ್ರೀಟ್ ಚರಂಡಿಗಳನ್ನು ಆಯ್ದ ಕಡೆಗಳಲ್ಲಿ ಮಾಡಲಾಗುವುದು. ಇದರಲ್ಲಿ ಕೆಲವು ಕಡೆ ಮೋರಿಯ ಕಾಮಗಾರಿ ಈಗಾಗಲೇ ನಡೆದಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಅಜ್ಜಾವರ-ಮಂಡೆಕೋಲು ರಸ್ತೆ ಡಾಮರೀಕರಣ ಆರಂಭ"