ಸುಳ್ಯ: ಡಿಸಿಸಿ ಬ್ಯಾಂಕ್ ಚುನಾವಣೆಯ ಅಡ್ಡಮತದಾನ ಪ್ರಕರಣದಲ್ಲಿ ಬಿಜೆಪಿ ಹಾಗೂ ಸಂಫಪರಿವಾರ ಹಾಗೂ ಸಹಕಾರ ಭಾರತಿಯು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಭಾಗಹಿಸಿದ್ದ ಎಲ್ಲಾ 17 ಮಂದಿಯೂ ರಾಜೀನಾಮೆ ನೀಡಬೇಕೆಂದು ಸೂಚನೆ ನೀಡಿತ್ತು.
ಈ ಸೂಚನೆಯ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದ ಮುರುಳ್ಯ ಎಣ್ಮೂರು ಸಹಕಾರಿ ಸಂಘದ ನಿರ್ದೇಶಕ ಪ್ರಸನ್ನ ಕೆ ಎಣ್ಮೂರು ಕ್ರಮಬದ್ದವಾಗಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಹಕಾರ ಭಾರತಿಗೂ ರಾಜೀನಾಮೆ ನೀಡಿದ್ದರು. ಆದರೆ 10 ದಿನ ಕಳೆದರೂ ಪಕ್ಷದ ಕಡೆಯಿಂದ ಹಾಗೂ ಸಂಘಪರಿವಾರದ ಕಡೆಯಿಂದ ಯಾವುದೇ ಸೂಚನೆ ಹಾಗೂ ಇತರ ಯಾರೂ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಸೋಮವಾರ ತಮ್ಮ ರಾಜೀನಾಮೆಯನ್ನು ಸ್ವ ಇಚ್ಛೆಯಿಂದ ವಾಪಾಸ್ ಪಡೆಯುವುದಾಗಿ ಕಾರ್ಯನಿರ್ವಹಣಾಧಿಕಾರಿಯವರಿಗೆ ಪತ್ರ ನೀಡಿದ್ದಾರೆ.
ಪಕ್ಷ ಹಾಗೂ ಸಂಘಪರಿವಾರ ನೀಡಿದ ಸೂಚನೆಯನ್ನು ಯಾರೂ ಪಾಲನೆ ಮಾಡದೇ ಇರುವುದರಿಂದ ತಾನು ಕೂಡಾ ರಾಜೀನಾಮೆ ವಾಪಾಸ್ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel