ರೈತರೊಂದಿಗೆ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಂವಾದ | ಲಾಭದಾಯಕ ಕೃಷಿಗಾಗಿ “ಮಾದರಿ ತೋಟ” ರಚಿಸಲು ರೈತರ ಮನವಿ |

October 19, 2024
7:27 AM

ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು  ವಿವಿಧ ರಾಜ್ಯಗಳ ಮುಖಂಡರು ಮತ್ತು ರೈತರೊಂದಿಗೆ ಚರ್ಚೆ ನಡೆಸಿದರು.ಈ ಸಂದರ್ಭ ಕೃಷಿ ಲಾಭದಾಯಕವಾಗಿಸಲು ” ಮಾದರಿ ತೋಟ” ಸರ್ಕಾರ ರಚಿಸುವ ಮೂಲಕ ರೈತರಿಗೆ ಮಾಹಿತಿ ನೀಡಬೇಕು ಎಂದು ರೈತರು ಸಲಹೆ ನೀಡಿದರು.

ರೈತರು ಮತ್ತು ಕೃಷಿ ಸಂಸ್ಥೆಗಳೊಂದಿಗೆ  ಸಂವಾದದಲ್ಲಿ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರೈತರು ಸಲಹೆಗಳನ್ನು ನೀಡಿದರು. ಒಂದರಿಂದ ಎರಡೂವರೆ ಎಕರೆ ಭೂಮಿಯಲ್ಲಿಯೂ ಕೃಷಿಯನ್ನು ಲಾಭದಾಯಕವಾಗಿ ಮಾಡುವ ಮಾರ್ಗಗಳ ಕುರಿತು ಮಾಹಿತಿ ನೀಡುವ ಮಾದರಿ ಕೃಷಿಯನ್ನು ರಚಿಸಲು ರೈತರು ಸರ್ಕಾರಕ್ಕೆ ಸಲಹೆ ನೀಡಿದರು. ಇದೇ ವೇಳೆ ರೈತರು ಒಂದು ಎಕರೆ ಜಮೀನಿನಲ್ಲಿ ಲಾಭದಾಯಕ ಕೃಷಿ ಮಾಡುವ ಕೆಲವು ಉದಾಹರಣೆಗಳನ್ನುವಿವರಿಸಿದರು.

ಸಕಾಲದಲ್ಲಿ ನೀರು ಒದಗಿಸುವುದು, ರಸಗೊಬ್ಬರಗಳ ಬಳಕೆ, ಮಣ್ಣನ್ನು ಆರೋಗ್ಯಕರವಾಗಿಸುವುದು, ನೈಸರ್ಗಿಕ ವಿಕೋಪಗಳಿಂದಾಗುವ ತೊಂದರೆಗಳು, ಸಕ್ಕರೆ ಕಾರ್ಖಾನೆಗಳ ಮುಚ್ಚುವಿಕೆ ಮತ್ತು ಬೀದಿ ಪ್ರಾಣಿಗಳ ಸಮಸ್ಯೆಗಳು ಇತ್ಯಾದಿಗಳ ಬಗ್ಗೆ ಚರ್ಚಿಸಿದರು. ಇದೇ ವೇಳೆ ಸರ್ಕಾರ ಅಥವಾ ಇಲಾಖೆಗಳು ಸರಿಯಾದ ಮಾಹಿತಿಯನ್ನು ಕೃಷಿಕರಿಗೆ ನೀಡದೇ ಇದ್ದರೆ ಯಾರೋ ಮದ್ಯರ್ತಿಗಳು, ಕೆಲವು ನಕಲಿ ಕಂಪನಿಗಳು ರೈತರ ದಾರಿ ತಪ್ಪಿಸಿ ಗೊಬ್ಬರ ಮಾರಾಟ ಮಾಡುತ್ತವೆ ಎಂದೂ ಸಚಿವರು ಬಳಿ ಮನವಿ ಮಾಡಿಕೊಂಡರು. ಅದಕ್ಕಾಗಿ ವಿವಿಧ ಸಂಸ್ಥೆಗಳ ಮೂಲಕ ಕಾಲಕಾಲಕ್ಕೆ ಮಾಹಿತಿ ನೀಡುವ ಕೆಲಸ ಆಗಬೇಕು ಎಂದು ರೈತರು ಸಲಹೆ ನೀಡಿದರು. ಈ ಸಂದರ್ಭ ರಾಬಿ ಬೆಳೆಗಳ MSP ಹೆಚ್ಚಿಸುವ ಕುರಿತು ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror