ಅಭಿವೃದ್ಧಿಯ ಪಥದಲ್ಲಿ “ನಿಂತಿಕಲ್ಲು ಸಾನ್ನಿಧ್ಯ”

Advertisement
Advertisement
Advertisement

ನಿಂತಿಕಲ್ಲು: ನಿಂತಿಕಲ್ಲು  ಶ್ರೀ ವನದುರ್ಗಾ ದೇವಿ ಸಾನ್ನಿಧ್ಯ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದು ಮೇ.25 ಹಾಗೂ 26 ರಂದು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ.

Advertisement

ನಿಂತಿಕಲ್ಲು ಪ್ರದೇಶದಲ್ಲಿ ಇರುವ ಶ್ರೀ ವನದುರ್ಗಾ ದೇವಿ ಸಾನ್ನಿಧ್ಯಕ್ಕೆ ಸುಮಾರು 800 ವರ್ಷಗಳ ಇತಿಹಾಸ ಇರುವುದು ಅಷ್ಟಮಂಗಲ ಚಿಂತನೆಯ ಮೂಲಕ ತಿಳಿದಿದೆ.  ಸತ್ಯದ ನೆಲೆ ಎಂಬ ಪ್ರಸಿದ್ಧಿ ಹೊಂದಿರುವ ಈ ಕ್ಷೇತ್ರದಲ್ಲಿ ಹಿಂದೆ ಪ್ರಾರ್ಥನೆ ಮಾಡಿ ಚಿನ್ನವನ್ನು  ಪಡೆದು ಹಿಂತಿರುಗಿಸುವ ಸಂಪ್ರದಾಯವೂ ಇತ್ತು.  ಇಲ್ಲಿನ ದೇವರು ಶಿಲಾರೂಪದಲ್ಲಿದ್ದರು. ಈ ದೇವರ ಶಕ್ತಿಯ ಕಲ್ಲನ್ನು ಆನೆಯಿಂದ ಕಟ್ಟಿ ಎಳೆಯಲು ಹಿಂದಿನ ರಾಜನೊಬ್ಬ  ಆದೇಶಿಸಿದಾಗ ದುಂಬಿಯ ರೂಪದಲ್ಲಿ ಬಂದ ದೇವರು ಆನೆಯ ಮೇಲೆ ದಾಳಿ ಮಾಡಿ ನಂತರ ಆನೆಯ ದೇಹ ಛಿದ್ರವಾಗಿ ಒಂದೊಂದು ದೇಹದ ಭಾಗ  ಬಿದ್ದ  ಭಾಗ ಒಂದೊಂದು ಪ್ರದೇಶವನ್ನು ಅದೇ ಹೆಸರಿನಿಂದ ಕರೆಯಲಾಯಿತು. ಬಾಲ ಬಿದ್ದ ಜಾಗ ಬೀರಾಳ, ಕಿವಿ ಬಿದ ಜಾಗ ಕೆರೆಕ್ಕೊಡಿ, ಹೊಟ್ಟೆ ಬಿದ್ದ ಭಾಗ ಅಂಬೋಜಿಕೆರೆ ಆಗಿದೆ ಎಂಬುದು ಇತಿಹಾಸ ಹಾಗೂ ನಂಬಿಕೆ.

Advertisement

 

Advertisement
Advertisement

ಇದೀಗ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಜನರ ಕಷ್ಟ ದೂರವಾಗಿಸುವ ಈ ಕ್ಷೇತ್ರ ನಿಂತಿಕಲ್ಲು ಸಾನಿಧ್ಯದಲ್ಲಿ ಭಕ್ತರು ತಮ್ಮ ವ್ಯವಹಾರ, ಉದ್ಯೋಗ, ಆರೋಗ್ಯ ಸೇರಿದಂತೆ ವಿವಿಧ  ಪ್ರಾರ್ಥನೆ ಮಾಡಿದರೆ ಫಲ ದೊರೆತಿದೆ.

ಇದೀಗ ಮೇ.25 ಹಾಗೂ 26 ರಂದು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಅಭಿವೃದ್ಧಿಯ ಪಥದಲ್ಲಿ “ನಿಂತಿಕಲ್ಲು ಸಾನ್ನಿಧ್ಯ”"

Leave a comment

Your email address will not be published.


*