ಅಯೋಧ್ಯಾ ತೀರ್ಪು ಹಿನ್ನಲೆ : ಶಾಂತಿ ಸೌಹಾರ್ದತೆ ಕಾಪಾಡಲು ಕರ್ನಾಟಕ ಮುಸ್ಲಿಂ ಜಮಾಅತ್ ಸಮಿತಿ ಮನವಿ

November 9, 2019
2:25 PM

ಸುಳ್ಯ‌: ಬಾಬರಿ ಮಸೀದಿ -ರಾಮಮಂದಿರ ವಿವಾದ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಬಂದಿರುವ ಹಿನ್ನಲೆಯಲ್ಲಿ ತೀರ್ಪಿನ್ನು ಗೌರವಿಸಿ ಸಮಾಜದಲ್ಲಿ ಶಾಂತಿ ಕಾಪಾಡುವಂತೆ ಸುಳ್ಯ ತಾಲೂಕಿನ ಎಲ್ಲಾ ಮೊಹಲ್ಲಾಗಳು ಮತ್ತು ಜಮಾಅತ್ ವ್ಯಾಪ್ತಿಗಳಲ್ಲಿ ಜಾಗೃತಿ ಮೂಡಿಸುವಂತೆ ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ, ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿರುವ ಪ್ರಸಿದ್ಧ ಧಾರ್ಮಿಕ ಕೇಂದ್ರಗಳನ್ನು ಹೊಂದಿರುವ ಸುಳ್ಯವು ಕೋಮು ಸೌಹಾರ್ದತೆಗೆ ಮಾದರಿಯಾಗಿದೆ. ಜಾತಿ, ಪಕ್ಷ ಬೇಧವಿಲ್ಲದೆ ಪರಸ್ಪರ ಪ್ರೀತಿ ವಿಶ್ವಾಸದಿಂದ ನಡೆಯುತ್ತಿರುವ ಸುಳ್ಯ ತಾಲೂಕು ಮುಂದೆಯೂ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಸಮಿತಿಯು ತಮ್ಮ ಜಮಾಅತ್‌ನಲ್ಲಿ ಬಾಬರಿ ಮಸೀದಿ, ರಾಮಮಂದಿರ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸಬೇಕು. ಆ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು. ಶಾಂತಿ ಸೌಹಾರ್ದತೆ, ಸಾಮರಸ್ಯ ಹಾಗೂ ಭಾವೈಕ್ಯತೆಯ ಸಂದೇಶ ಸಾರಿದ ವಿಶ್ವ ಪ್ರವಾದಿ ಮಹಮ್ಮದ್ ಮುಸ್ತಾಫರವರ ಜನ್ಮದಿನಾಚರಣೆಯನ್ನು ಆಚರಿಸುವ ರಬೀವುಲ್ ಔವ್ವಲ್ ತಿಂಗಳಲ್ಲಿ ಪ್ರವಾದಿ ಆದರ್ಶದೊಂದಿಗೆ ನಾವು ಇತರರಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಸಮಿತಿ ಸದಸ್ಯ ಕೆ.ಎಂ.ಮುಸ್ತಫಾ, ಕರ್ನಾಟಕ ಮುಸ್ಲಿಂ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕದಿಕಡ್ಕ, ಉಪಾಧ್ಯಕ್ಷರುಗಳಾದ ಪಿ.ಎ.ಮಹ್ಮದ್, ಇಕ್ಬಾಲ್ ಎಲಿಮಲೆ, ಕೋಶಾಧಿಕಾರಿ ಎಸ್.ಎ.ಮೊಯಿದ್ದೀನ್, ಪ್ರಧಾನ ಕಾರ್ಯದರ್ಶಿ ಹಸೈನಾರ್ ಜಯನಗರ ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಇಂಡೋನೇಷ್ಯಾದ ಸ್ಟಾರ್ಟ್‌ಅಪ್‌ನಿಂದ ಬಾಂಗ್ಲಾದೇಶ, ಮಾಲ್ಡೀವ್ಸ್‌ಗೆ ಅಡಿಕೆ ರಫ್ತು – ಜಾಗತಿಕ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಳ
June 16, 2026
8:15 PM
by: ದ ರೂರಲ್ ಮಿರರ್.ಕಾಂ
ಬಿಡದಿ ಟೌನ್‌ಶಿಪ್‌ಗೆ 2 ಲಕ್ಷಕ್ಕೂ ಹೆಚ್ಚು ಮರಗಳ ಕತ್ತರಿ…? – ಯೋಜನೆಗೆ ಪರಿಸರವಾದಿಗಳು, ರೈತರಿಂದ ತೀವ್ರ ವಿರೋಧ
June 16, 2026
7:33 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 16-06-2026 | ರಾಜ್ಯದಲ್ಲಿ ಇನ್ನೂ ದುರ್ಬಲ ಮಳೆ ಚಟುವಟಿಕೆ – ಜೂ.22 ರಿಂದ ಕರಾವಳಿಯಲ್ಲಿ ಮುಂಗಾರು ಚೇತರಿಕೆ ಸಾಧ್ಯತೆ
June 16, 2026
2:16 PM
by: ಸಾಯಿಶೇಖರ್ ಕರಿಕಳ
ಅಡಿಕೆ ಒಡೆದು ಉದುರುತ್ತಿದೆಯೇ..? ಕಾರಣ ಕೇವಲ ಬೋರಾನ್ ಕೊರತೆ ಅಷ್ಟೇ ಅಲ್ಲ- ಕೀಟವೂ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು
June 15, 2026
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror