ಪುತ್ತೂರು: ಅರೆಕಾನಟ್ ಗ್ರೋವರ್ಸ್ ವ್ಯಾಟ್ಸಪ್ ಗ್ರೂಪ್ ನ ನೇತೃತ್ವದಲ್ಲಿಅಡಿಕೆ ಕೃಷಿಕರ ವೈಚಾರಿಕ ಸಮ್ಮಿಲನ ಕಾರ್ಯಕ್ರಮವು ಕ್ಯಾಂಪ್ಕೋ ಸಹಯೋಗದೊಂದಿಗೆ ಅ.9ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿರುವ ಚುಂಚಶ್ರೀ ಸಭಾಭವನದಲ್ಲಿ ನಡೆಯಿತು.
ಗ್ರೂಪಿನ ಸದಸ್ಯರು, ಸಮಾನಾಸಕ್ತ ಅಡಿಕೆ ಕೃಷಿಕರು ಭಾಗವಹಿಸಿದ್ದರು.ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಂತ್ರಜ್ಞಾನ ಬೆಳೆದಂತೆ ರಿಸ್ಕ್ ತೆಗೆದು ಕೊಳ್ಳುವ ಕೆಲಸವೂ ಆಗಬೇಕು. ಯಾಕೆಂದರೆ ಇಲ್ಲಿ ಅಪ್‌ಡೇಟ್ ಮತ್ತು ಔಟ್‌ಡೇಟ್ ನಡುವೆ ನಮ್ಮ ಆಯ್ಕೆ ಇರುತ್ತದೆ ಎಂದರು. ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದರು. ಅತಿಥಿಗಳಾಗಿ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ, ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರೆಕಾನಟ್ ಗ್ರೋವರ್ಸ್ ವ್ಯಾಟ್ಸಪ್ ಗ್ರೂಪ್‌ನ ಅಡ್ಮಿನ್ ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ, ಸುರೇಶ್ಚಂದ್ರ ಕಲ್ಮಡ್ಕ ವಂದಿಸಿದರು. ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಅಡಿಕೆ ಕೃಷಿ ಮಾರುಕಟ್ಟೆ ಹಾಗೂ ಕ್ಯಾಂಪ್ಕೋ ಪಾತ್ರ, ಸಹಕಾರದ ಆಡಳಿತ ನಿರ್ವಹಣೆ, ಹಾಗೂ ಅಡಿಕೆ ಕೃಷಿ ಉಪಬೆಳೆಗಳು,ಕೃಷಿ ಮಾಧ್ಯಮದ ಬಗ್ಗೆ ಮಾಹಿತಿ ಹಾಗೂ ಸಂವಾದ ನಡೆಯಿತು.


