ಕಡಬ: ಕುಂತೂರು ಗ್ರಾಮದ ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭೆ ನಡೆಯಿತು.
ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಮಕುಂಜ ಸಂಪ್ಯಾಡಿ ಶ್ರೀ ರಾಮ ಆಶ್ವಥ್ಥ ಕಟ್ಟೆ ಪೂಜಾ ಸಮಿತಿ ಅಧ್ಯಕ್ಷ ಸದಾಶಿವ ಶೆಟ್ಟಿ ಮಾರಂಗ ಮಾತನಾಡಿ, ಹಿಂದೂ ಧರ್ಮದ ಸಾಮೂಹಿಕ ಆಚರಣೆಗಳು ಧರ್ಮ ಜಾಗೃತಿ ಮೂಡಿಸುತ್ತದೆ ಎಂದರು.
ವಾಗ್ಮಿ ಕಿರಣ್ ಕುಮಾರ್ ಪಡಪಣಂಬೂರು ಮಾತನಾಡಿ, ಜಗತ್ತಿನ ಸತ್ಯ ಭಗವಂತ ಮಾತ್ರ. ಮನುಷ್ಯ ನಿರ್ಮಲ ಮನಸ್ಸನಿಂದ ಆಧ್ಯಾತ್ಮಿಕ ಅರಿವನ್ನು ಕಂಡುಕೊಂಡಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಪುತ್ತೂರು ಯೋಜನಾಧಿಕಾರಿ ಜನಾರ್ದನ ಮಾತನಾಡಿದರು.
ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಕೃಷ್ಣ ಅತ್ರಿಜಾಲು, ಉತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಕಜೆ ಉಪಸ್ಥಿತರಿದ್ದರು.
ಅರ್ಚಕರಾದ ವಿಷ್ಣುಮೂರ್ತಿ ಮತ್ತು ಕೃಷ್ಣ ಪ್ರಸಾದ್ ನೇತೃತ್ವದಲ್ಲಿ ಸಾಮೂಹಿಕ ಪೂಜೆ ನಡೆಯಿತು. ದೇವಸ್ಥಾನದ ಪ್ರದಾನ ಕಾರ್ಯದರ್ಶಿ ಪ್ರವೀಣ್ ಆಳ್ವ ನೂಚಿಲ ಪ್ರಸ್ತಾವಿಸಿ ಸ್ವಾಗತಿಸಿದರು. ಉಪಾಧ್ಯಕ್ಷ ಸುಬ್ರಹ್ಮಣ್ಯ ಗೌಡ ಎರ್ಮಲ ವಂದಿಸಿದರು. ಚೆನ್ನಕೇಶವ ಗುತ್ತುಪಾಲು ನಿರೂಪಿಸಿದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಅರ್ಬಿ ದೇವಸ್ಥಾನದಲ್ಲಿಸಾಮೂಹಿಕ ಸತ್ಯನಾರಾಯಣ ಪೂಜೆ"