ಇಂದು ಮೋದಿ ಸರಕಾರ 2.0 : ಸಂಪುಟದಲ್ಲಿ ಸುಳ್ಯದ ಮೂವರಲ್ಲಿ ಯಾರಾಗ್ತಾರೆ ಸಚಿವ ?

May 30, 2019
9:14 AM

ಸುಳ್ಯ : ಮೇ 30ರಂದು ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಟೀಂ ಮೋದಿ ಸಚಿವ ಸಂಪುಟದಲ್ಲಿ ಯಾರೆಲ್ಲ ಸೇರಿಕೊಳ್ಳಲಿದ್ದಾರೆ. ಯಾರಿಗೆಲ್ಲ ಸಚಿವ ಸ್ಥಾನದ ಅದೃಷ್ಟ ಒಲಿದು ಬರಲಿದೆ ಎಂಬ ಕುತೂಹಲ, ಚರ್ಚೆ ಗರಿಗೆದರಿದೆ. ಕರಾವಳಿ ಭಾಗದಿಂದ ಯಾರು, ಅದರಲ್ಲೂ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಮೂವರು ಸಂಸದರಲ್ಲಿ ಯಾರಿಗಾದರೂ ಸಚಿವ ಸ್ಥಾನ ಸಿಗುತ್ತದಾ ಎಂಬ ಜಿಜ್ಞಾಸೆ ಇದೆ.

Advertisement
Advertisement
Advertisement

‘ನವ ಭಾರತ’ ನಿರ್ಮಾಣದ ಹೆಸರಿನಲ್ಲಿ ಈ ಬಾರಿ ಮೋದಿ ಸರಕಾರ 2.0 ಕಾರ್ಯನಿರ್ವಹಣೆ ಮಾಡುವ ಸಂದರ್ಭ  ತಮ್ಮ ಹೊಸ ಸಚಿವ ಸಂಪುಟದಲ್ಲಿ ಹೊಸಬರಿಗೆ ಆದ್ಯತೆ ನೀಡುತ್ತಾರೆಯೇ ಎಂಬ ಕುತೂಹಲ ಎಲ್ಲೆಡೆ ಮೂಡಿದೆ.  ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಸಂದರ್ಭ 2.0 ಸಂಪುಟ ಕೂಡಾ ರಚನೆಯಾಗಲಿದ್ದು ಸುಮಾರು 60 ಮಂದಿ ಸಚಿವರು ಕೂಡಾ ಪ್ರಮಾಣವಚನ ಸ್ವೀಕಾರ ಮಾಡುವರು ಎಂದು ಮಾಧ್ಯಮಗಳು ವರದಿ ಮಾಡಿದೆ. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿ ಯಾರೊಬ್ಬರ ಹೆಸರನ್ನೂ ಕೂಡ ಅಧಿಕೃತವಾಗಿ ಪ್ರಕಟಿಸಿಲ್ಲ. ಎನ್ ಡಿ ಎ ಮಿತ್ರ ಪಕ್ಷಗಳಿಗೆ ಸಚಿವ ಸ್ಥಾನ ಹಂಚಿಕೆ ಸೇರಿದಂತೆ ಇತರ ಮಾತುಕತೆಗಳು ನಡೆಯುತ್ತಿದ್ದು  ಕೊನೆಯ ಕ್ಷಣದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಮುಂದೆ ಸಂಪುಟ ವಿಸ್ತರಣೆ ಸಾಧ್ಯತೆಯನ್ನು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಈ ಬಾರಿ 6 ಸಾವಿರಕ್ಕೂ ಹೆಚ್ಚು ಆಹ್ವಾನಿತ ಅತಿಥಿಗಳು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Advertisement

ಆದರೆ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸುಳ್ಯದ 3 ಜನ ಸಂಸದರ ಪೈಕಿ ಯಾರಾಗ್ತಾರೆ ಸಚಿವ ಎಂಬ ಕುತೂಹಲ ಎಲ್ಲೆಡೆ ಇದೆ. ಈ ಹಿಂದೆ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡ ಅವರಿಗೆ ಮತ್ತೆ ಒಲಿಯಬಹುದೇ ಸಚಿವ ಸ್ಥಾನ ಅಥವಾ ಶೋಭಾ ಕರಂದ್ಲಾಜೆ ಅವರಾಗ್ತಾರಾ ಅತ್ಯಧಿಕ ಮತಗಳ ಅಂತರದಿಂದ ಗೆದ್ದ ರಾಜ್ಯದ ನಂ.1 ಸಂಸದ ಎಂದು ಹೆಸರು ಪಡೆದ ನಳಿನ್ ಕುಮಾರ್ ಕಟೀಲು ಅವರಿಗೆ ಸಿಗುತ್ತಾ ಸಚಿವ ಸ್ಥಾನ ಎಂಬ ಕುತೂಹಲ ಎಲ್ಲೆಡೆ ಇದೆ.

 

Advertisement

   ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಡಿ.ವಿ.ಸದಾನಂದ ಗೌಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆಯಾದ ಶೋಭಾ ಕರಂದ್ಲಾಜೆಗೆ ಇವರಿಗೆ ಸಚಿವ ಸ್ಥಾನ ಒಲಿದು ಬರುತ್ತದಾ ಎಂಬ ಚರ್ಚೆ ಚುನಾವಣಾ ಫಲಿತಾಂಶ ಬಂದಾಗಿನಿಂದ ಆರಂಭಗೊಂಡಿತ್ತು. ಲೋಕಸಭೆಗೆ ನಾಲ್ಕನೇ ಬಾರಿ ಆಯ್ಕೆಯಾದ ಸದಾನಂದ ಗೌಡರು ಪ್ರಥಮ ಮೋದಿ ಸರಕಾರಲ್ಲಿ ಐದು ವರ್ಷ ಸಚಿವರಾಗಿ ರೈಲ್ವೇ, ಕಾನೂನು, ಅಂಕಿ ಅಂಶ, ರಸಗೊಬ್ಬರ ಖಾತೆಗಳನ್ನು ನಿಭಾಯಿಸಿದ್ದರು.

 

Advertisement

ಎರಡನೇ ಬಾರಿ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಈ ಹಿಂದೆ ರಾಜ್ಯ ಬಿಜೆಪಿ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ, ಇಂಧನ ಖಾತೆ ಸಚಿವರಾಗಿದ್ದರು.

 

Advertisement

ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸಚಿವರಾಗುತ್ತಾರಾ ಎಂಬ ಚರ್ಚೆ ಆರಂಭವಾಗಿದ್ದರೂ ‘ನಾನು ಸಚಿವನಾಗುವುದಿಲ್ಲ, ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ ಎಂದು ನಳಿನ್ ಕುಮಾರ್ ಕಟೀಲ್ ಅವರೇ ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದಿದ್ದರು.

Advertisement

28 ರಲ್ಲಿ 25 ಸ್ಥಾನಗಳನ್ನು ಗೆಲ್ಲುವ ಮೂಲಕ ಗೆಲ್ಲುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಬಾರೀ ಮುನ್ನಡೆ ಸಾಧಿಸಿದೆ. ಆದುದರಿಂದ ಕೇಂದ್ರ ಸಚಿವ ಸಂಪುಟದಲ್ಲೂ ರಾಜ್ಯಕ್ಕೆ ಪ್ರಾಶಸ್ತ್ಯ ಸಿಗಬಹುದು. ಯಾರಿಗೆಲ್ಲ ಅದೃಷ್ಟ ಒಲಿದು ಬರಲಿದೆ ಎಂಬುದು ಮಾತ್ರ ಸಸ್ಪೆನ್ಸ್.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ | ಮುಂದಿನ ಆದೇಶದವರೆಗೆ ಈರುಳ್ಳಿ ರಪ್ತು ನಿಷೇಧ ವಿಸ್ತರಣೆ
March 23, 2024
11:30 PM
by: The Rural Mirror ಸುದ್ದಿಜಾಲ
‘ಡಿಎಂಕೆ’ ಪ್ರಣಾಳಿಕೆಯಲ್ಲಿ ಮೇಕೆದಾಟು ನಿರ್ಮಾಣಕ್ಕೆ ತಡೆ ಅಂಶ | ಇಂಡಿಯಾ ಮೈತ್ರಿಕೂಟ ಗೆದ್ದರೆ ಈ ನಿರ್ಧಾರ | ಏನು ಹೇಳುತ್ತೆ ಕಾಂಗ್ರೆಸ್..?
March 21, 2024
10:43 AM
by: The Rural Mirror ಸುದ್ದಿಜಾಲ
ಟ್ರೋಫಿ ಗೆದ್ದ RCB ಮಹಿಳಾ ತಂಡಕ್ಕೆ ಕೋಟಿ ಕೋಟಿ ಬಹುಮಾನ | ಆರ್‌ಸಿಬಿ ಮಹಿಳಾ ಮಣಿಗಳು ದೋಚಿದ ಬಹುಮಾನದ ಮೊತ್ತ ಎಷ್ಟು?
March 19, 2024
11:00 AM
by: The Rural Mirror ಸುದ್ದಿಜಾಲ
ರಾಜಧಾನಿ ದೆಹಲಿಗೆ ಮತ್ತೆ ವಿಶ್ವದ ಅತ್ಯಂತ ಕಲುಷಿತ ನಗರ ಪಟ್ಟ | ಪಾಕಿಸ್ತಾನ ನಂತರ ಅತ್ಯಂತ ವಿಷಕಾರಿ ಗಾಳಿ ಹೊಂದಿರುವ ದೇಶ ಭಾರತ..!
March 19, 2024
10:08 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror