ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನಗಳಲ್ಲಿ ತೆಂಗಿನಕಾಯಿ ಸಾಗಿಸಲು ಅನುಮತಿ

October 26, 2024
1:16 PM

ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನದಲ್ಲಿ ತೆಂಗಿನಕಾಯಿ ಸಾಗಿಸಲು ಅನುಮತಿಯನ್ನು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ ಜ. 20, 2025 ರವರೆಗೆ ಅನುಮೋದನೆಯನ್ನು ನೀಡಿದೆ. ಈಗಿನ ನಿಮಯಗಳ  ಅಡಿಯಲ್ಲಿ, ತೆಂಗಿನಕಾಯಿಗಳು ಸುಡುವ ಕಾರಣದಿಂದ ಕ್ಯಾಬಿನ್ ನಲ್ಲಿ ಸಾಗಿಸಲು ಅನುಮತಿ ಇರಲಿಲ್ಲ.

ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ ನಿಯಮಗಳ ಪ್ರಕಾರ ಭದ್ರಾ ಸಿಬಂದಿಗಳು ತೆಂಗಿನಕಾಯಿಯನ್ನು ವಿಮಾನದಲ್ಲಿ ಸಾಗಿಸಲು ಅವಕಾಶ ನೀಡುತ್ತಿರಲಿಲ್ಲ. ಆದರೆ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಹೋಗುವ ಯಾತ್ರಾರ್ಥಿಗಳು ಜನವರಿ 20, 2025 ರವರೆಗೆ ವಿಮಾನಗಳಲ್ಲಿ  ಕ್ಯಾಬಿನ್ ಸಾಮಾನುಗಳಲ್ಲಿ ತೆಂಗಿನಕಾಯಿಯನ್ನು ಸಾಗಿಸಬಹುದು ಮತ್ತು ವಿಮಾನಯಾನದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ ಸೀಮಿತ ಅವಧಿಗೆ ತನ್ನ ಅನುಮೋದನೆಯನ್ನು ನೀಡಿದೆ.

ಆದರೆ ಉಳಿಂದತೆ ಯಾನದಲ್ಲಿ ಅಗತ್ಯವಿರುವ ಎಕ್ಸ್-ರೇ, ಎಕ್ಸ್‌ಪ್ಲೋಸಿವ್ ಟ್ರೇಸ್ ಡಿಟೆಕ್ಟರ್ ಮತ್ತು ಇತರ ತಪಾಸಣೆಗಳ ನಂತರ ಮಾತ್ರ ತೆಂಗಿನಕಾಯಿಯನ್ನು  ಸಾಗಿಸಲು ಅನುಮತಿಸಲಾಗುತ್ತದೆ. ಶಬರಿಮಲೆಯ ಅಯ್ಯಪ್ಪ ದೇವಾಲಯವು ನವೆಂಬರ್ ನಂತರದ ಎರಡು ತಿಂಗಳ  ತೀರ್ಥಯಾತ್ರೆಗಾಗಿ ತೆರೆಯುತ್ತದೆ. ಈ ಸಮಯದಲ್ಲಿ ಅನೇಕ ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತಾರೆ. ಹೀಗೆ ಬರುವ ಎಲ್ಲಾ ಭಕ್ತಾದಿಗಳು ಇರುಮುಡಿಯೊಂದಿಗೆ ಬರುತ್ತಾರೆ. ಇರುಮಡಿಯಲ್ಲಿ ತೆಂಗಿನಕಾಯಿಯೂ ಇರುತ್ತದೆ. ಶಬರಿಮಲೆ ಯಾತ್ರೆಗೆ ಇದು ಅಗತ್ಯ ಹಾಗೂ ಅನಿವಾರ್ಯವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ – ಒಂದೇ ದಿನ 4 ಚಿನ್ನ; ಪದಕಗಳ ಸಂಖ್ಯೆ 60ಕ್ಕೆ ಏರಿಕೆ
September 30, 2026
10:51 PM
by: ದ ರೂರಲ್ ಮಿರರ್.ಕಾಂ
ಅಡಿಕೆ ವಹಿವಾಟಿನ ಮೇಲೆ ಹೆಚ್ಚಿದ ಕಣ್ಗಾವಲು..!, ಗಮನ ಸೆಳೆದ ಪ್ರತ್ಯೇಕ ಮೂರು ಘಟನೆಗಳು
September 30, 2026
9:10 PM
by: ದ ರೂರಲ್ ಮಿರರ್.ಕಾಂ
ಹಿಂಗಾರು ಬೆಳೆಗಳಿಗೆ ಕೇಂದ್ರದಿಂದ ಬೆಂಬಲ ಬೆಲೆ ಹೆಚ್ಚಳ
September 30, 2026
8:47 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 30-09-2026 | ಅರಬ್ಬಿ ಸಮುದ್ರದ ಗಾಳಿ ದುರ್ಬಲ… ಕರ್ನಾಟಕದ ಮಳೆಯ ಸ್ವರೂಪ ಬದಲಾಗುತ್ತಾ?
September 30, 2026
8:13 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror